Sunday , September 22 2019
Breaking News
Home / ರಾಷ್ಟ್ರೀಯ / ಇವಿಎಂ ನೊಂದಿಗೆ ಎಲ್ಲಾ ವಿವಿಪ್ಯಾಟ್‌ ಮತಗಳ ತಾಳೆ ಸಾಧ್ಯವಿಲ್ಲ ಎಂದ ಸುಪ್ರಿಂ ಕೋರ್ಟ್: ಅರ್ಜಿ ವಜಾ

ಇವಿಎಂ ನೊಂದಿಗೆ ಎಲ್ಲಾ ವಿವಿಪ್ಯಾಟ್‌ ಮತಗಳ ತಾಳೆ ಸಾಧ್ಯವಿಲ್ಲ ಎಂದ ಸುಪ್ರಿಂ ಕೋರ್ಟ್: ಅರ್ಜಿ ವಜಾ

ಸಂದೇಶ ಇ-ಮ್ಯಾಗಝಿನ್: ಮತ ಎಣಿಕೆಯ ವೇಳೆ ಇವಿಎಂ ನೊಂದಿಗೆ ತಾಳೆ ಹಾಕಿ ವಿವಿಪ್ಯಾಟ್ ಗಳ ಎಲ್ಲಾ ಮತಗಳನ್ನು ಎಣಿಸಬೇಕು ಎಂದು ಸುಪ್ರಿಂ ಕೊರ್ಟಿನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ತಿರಸ್ಕೃತಗೊಂಡಿದೆ. ‘ಟೆಕ್ ಫೋರ್ ಆಲ್’ ಎಂಬ ಸಂಸ್ಥೆ ಸಲ್ಲಿಸಿದ್ದ ಈ ಅರ್ಜಿಯನ್ನು ವಿಚಾರಣೆ ಮಾಡಲು ನಿರಾಕರಿಸಿದ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಸುಪ್ರೀಮ್ ಪೀಠವು ಈಗಾಗಲೇ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಈ ಬಗ್ಗೆ ತೀರ್ಪು ನೀಡಿರುವ ಕಾರಣ ಹಿಂದಿನ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅರ್ಜಿ ಸಲ್ಲಿಸಿದ್ದ ಸಂಸ್ಥೆಯು ಇವಿಎಂ ವಿಶ್ವಾಸಾರ್ಹತೆಯ ಬಗ್ಗೆ ಸಂಶಯ ಮೂಡಿದ್ದು, ಇದರಿಂದಾಗಿ ಶೇ. 100 ರಷ್ಟು ವಿವಿಪ್ಯಾಟ್ ಮತಗಳನ್ನು ಇವಿಎಂ ಮತಗಳ ಜೊತೆ ತಾಳೆ ಹಾಕಿ ಎಣಿಸಬೇಕು ಎಂದು ಮನವಿ ಮಾಡಿತ್ತು.

ಅರ್ಜಿವಜಾ ಗೊಳಿಸುವ ಮುನ್ನ ಪೀಠವು ಈ ಬಗ್ಗೆ ಈ ರೀತಿ ಹೇಳಿದೆ, ಮತದಾನದ ಎಲ್ಲಾ 7 ಹಂತಗಳು ಇದೀಗ ಮುಕ್ತಾಯವಾಗಿದ್ದು, 23 ಮೇ ಯಂದು ಹೊಸ ಸರಕಾರ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ದೇಶವಿದೆ. ಇಂತಹ ಸಮಯದಲ್ಲಿ ಈ ಅರ್ಜಿಯ ಅಗತ್ಯವಿಲ್ಲ. ಇದು ಮುಗಿಯುತ್ತಿರುವುವಂತಹ ಚುನಾವಣಾ ಪ್ರಕ್ರಿಯೆಯನ್ನು ಬಾಧಿಸಲಿದೆ ಎಂದು ಹೇಳಿದೆ.

Check Also

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

001ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರದ ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. …

Leave a Reply

Your email address will not be published. Required fields are marked *