Friday , May 24 2019
Breaking News
Home / ರಾಜ್ಯ / ರಾಹುಲ್ ಗಾಂಧಿಯನ್ನು ಕೊಲ್ಲಬಯಸುವ ಪುಣ್ಯಾತ್ಮನಿಗೆ ಪ್ರಶಸ್ತಿ ಕೊಡಬೇಕು: ಸೂಲಿಬೆಲೆ

ರಾಹುಲ್ ಗಾಂಧಿಯನ್ನು ಕೊಲ್ಲಬಯಸುವ ಪುಣ್ಯಾತ್ಮನಿಗೆ ಪ್ರಶಸ್ತಿ ಕೊಡಬೇಕು: ಸೂಲಿಬೆಲೆ

ಸಂದೇಶ ಇ-ಮ್ಯಾಗಝಿನ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪ್ರಾಣಕ್ಕೆ ಅಪಾಯವಿದೆ ಎಂದು ಮೊನ್ನೆ ಕಾಂಗ್ರೇಸ್ ಪಕ್ಷ ಗೃಹ ಸಚಿವಾಲಯಕ್ಕೆ ರಕ್ಷಣೆ ಕೋರಿ ದೂರು ನೀಡಿದ್ದನ್ನು ಉಲ್ಲೇಖಿಸಿ ಬಿಜೆಪಿ ಪಕ್ಷದ ಪ್ರಚಾರಕ ಚಕ್ರವರ್ತಿ ಸೂಲಿಬೆಲೆ ರಾಹುಲ್ ಗಾಂಧಿಯನ್ನು ಕೊಲ್ಲಬೇಕು ಅಂತ ಬಯಸುವ ವ್ಯಕ್ತಿಗೆ ಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದು ಈ ಬಗ್ಗೆ ಪ್ರಜಾಪ್ರಭುತ್ವ ಉಳಿವಿಗಾಗಿ ಸಂವಿಧಾನ ಬಚಾವ್ ಆಂದೋಲನದ ಕಾಯದರ್ಶಿ ಜಗದೀಶ್ ಎಂಬವರು ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 14 ರಂದು ಬಳ್ಳಾರಿಯ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ಆವರಣದಲ್ಲಿ ನಡೆದ ಟೀಮ್ ಮೋದಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ರಾಹುಲ್ ಗಾಂಧಿಯನ್ನು ಕೊಲ್ಲಬೇಕು ಅಂತ ಬಯಸುವ ಪುಣ್ಯಾತ್ಮನಿಗೆ ಪ್ರಶಸ್ತಿ ಕೊಡಬೇಕು ಅಂತ ಹಾಸ್ಯದ ದಾಟಿಯಲ್ಲಿ ಹೇಳಿದ್ದರು ಎನ್ನಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್, ಹತ್ಯೆಯಂತಹ ಅಪರಾಧ ಕೃತ್ಯಕ್ಕೆ ಕುಮ್ಮಕ್ಕು ನೀಡುವ ಪ್ರಚೋದನಾಕಾರಿ ಭಾಷಣ ಮಾಡಿರುವ ಸೂಲಿಬೆಲೆಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಈ ಬಗ್ಗೆ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ.

Check Also

ಭಯೋತ್ಪಾದನೆಗೆ ಬುರ್ಖಾದ ಅಗತ್ಯವಿಲ್ಲವೆಂದು ಸಾಧ್ವಿ ಪ್ರಜ್ಞಾ ನಿರೂಪಿಸಿದ್ದಾರೆ: ಶಾಫೀ ಸ‌ಅದಿ

001ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟವನ್ನು ದಾಳವಾಗಿಟ್ಟು ಕೆಲವು ಮಾಧ್ಯಮಗಳು ಮುಸ್ಲಿಂ ಮಹಿಳೆಯರ ರಕ್ಷಾ ಕವಚವಾದ ಬುರ್ಖಾದ ವಿರುದ್ಧ …

Leave a Reply

Your email address will not be published. Required fields are marked *