Tuesday , December 10 2019
Breaking News
Home / ಪ್ರವಾದಿ ಚಿಕಿತ್ಸೆ / ನವಜಾತ ಶಿಶುವಿಗೆ ಮಧುರ ತಿನ್ನಿಸುವ ಪ್ರವಾದಿ ಚಿಕಿತ್ಸಾ ವಿಧಾನ ವೈಜ್ಞಾನಿಕವೆಂದ ವಿಜ್ಞಾನಿಗಳು

ನವಜಾತ ಶಿಶುವಿಗೆ ಮಧುರ ತಿನ್ನಿಸುವ ಪ್ರವಾದಿ ಚಿಕಿತ್ಸಾ ವಿಧಾನ ವೈಜ್ಞಾನಿಕವೆಂದ ವಿಜ್ಞಾನಿಗಳು

ಸಂದೇಶ ಇ-ಮ್ಯಾಗಝಿನ್: ನ್ಯೂಝಿಲ್ಯಾಂಡ್‌ನ ಮಕ್ಕಳ ವಿಶೇಷಜ್ಞ ವೈದ್ಯರು ನಡೆಸಿದ ಒಂದು ಸಂಶೋಧನೆಯ ಪ್ರಕಾರ ನವಜಾತ ಶಿಶುವಿಗಳಲ್ಲಿ ಕಾಣಿಸಿಕೊಳ್ಳುವ ರಕ್ತದಲ್ಲಿನ ಕಡಿಮೆ ಸಕ್ಕರೆ ಅಂಶವು ಅತೀ ಅಪಾಯಕಾರಿ ಸಂಗತಿಯಾಗಿದ್ದು, ಇದು ಮುಂದೆ ಮಕ್ಕಳ ಮಿದುಳಿನ ಹಾನಿಗೆ ಕಾರಣವಾಗಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ. ಇಂತಹ ಅಪಾಯವನ್ನು ತಗ್ಗಿಸಲು ನವಜಾತ ಶಿಶುಗಳಿಗೆ ಜನನವಾದ ತಕ್ಷಣ ಸಕ್ಕರೆ ಅಂಶವನ್ನು ಕೆನ್ನೆಯ ಒಳಭಾಗಕ್ಕೆ ಇಟ್ಟು ಆ ಮೂಲಕ ಮಗುವಿಗೆ ಮಧುರ ತಿನ್ನಿಸುವುದು ಇಂತಹ ಅಪಾಯವನ್ನು ತಗ್ಗಿಸಲು ತಡೆಗಟ್ಟಬಹುದಾದಂತಹ ಅಗ್ಗದ ಮತ್ತು ಪರಿಣಾಮಕಾರಿ ವಿಧಾನವಾಗಿದೆ ಎಂದು ತಿಳಿಸಿದ್ದಾರೆ. ತಿಂಗಳು ಪೂರ್ತಿಯಾಗದೆ ಜನಿಸುವ ಮಕ್ಕಳಲ್ಲಿ ಇಂತಹ ರಕ್ತದಲ್ಲಿ ಕಡಿಮೆ ಸಕ್ಕರೆ ಪ್ರಮಾಣದ ತೊಂದರೆ ಕಂಡು ಬರುತ್ತದೆ ಎಂದಿರುವ ವೈದ್ಯರು ಸುಮಾರು 242 ಮಕ್ಕಳ ಮೇಲೆ ಇಂತಹ ಪ್ರಯೋಗವನ್ನು ನಡೆಸಿ ನಂತರ ಪರಿಣಾಮಕಾರಿ ಫಲಿತಾಂಶ ಬಂದಿರುವುದಾಗಿ ಆಕ್‌ಲ್ಯಾಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜೇನ್ ಹಾರ್ಡಿಂಗ್ ತಿಳಿಸಿದ್ದಾರೆ.

ಗಮನಾರ್ಹ ಸಂಗತಿ ಏನೆಂದರೆ, ಇಸ್ಲಾಮ್ ಧರ್ಮದಲ್ಲಿ ಮಗು ಹುಟ್ಟಿದ ತಕ್ಷಣ ಮಧುರವಾರ ಯಾವುದಾದರೂ ವಸ್ತುವನ್ನು ಜಗಿದು ಅದರ ರಸವನ್ನು ಮಗುವಿನ ಕೆನ್ನೆಯ ಒಳಭಾಗಕ್ಕೆ ಇಟ್ಟುಕೊಡಬೇಕು ಎಂದು ಪ್ರವಾದಿ ಮುಹಮ್ಮದ್(ಸ)ರವರು 1400 ವರ್ಷಗಳ ಹಿಂದೆಯೇ ಕಲಿಸಿದ್ದು, ಈ ಬಗ್ಗೆ ಪ್ರವಾದಿ ವಚನಗಳನ್ನೂ ಕಾಣಬಹುದಾಗಿದೆ.

Check Also

ಬಾಳೆಹಣ್ಣು ಸೇವನೆಯ ಪ್ರಯೋಜನಗಳು -ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಬಾಳೆಹಣ್ಣು ಒಂದು ಉತ್ತಮ ಆಹಾರ ಇದರ ಸೇವನೆಯ ಆರೋಗ್ಯಕಾರಕ ಪ್ರಯೋಜನಗಳನ್ನು ಪ್ರವಾದಿ ಮುಹಮ್ಮದ್(ಸ)ರವರ ಹದೀಸ್ ಗಳಲ್ಲೂ ಹೇಳಲಾಗಿದೆ. …

Leave a Reply

Your email address will not be published. Required fields are marked *