Friday , November 15 2019
Breaking News
Home / ರಾಜ್ಯ / ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಲ್ಲ, ವದಂತಿಗೆ ಕಿವಿಗೊಡಬೇಡಿ: ಬೆಂಗಳೂರು ಪೊಲೀಸರ ಮನವಿ

ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಲ್ಲ, ವದಂತಿಗೆ ಕಿವಿಗೊಡಬೇಡಿ: ಬೆಂಗಳೂರು ಪೊಲೀಸರ ಮನವಿ

ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ಸರಣಿ ಬಾಂಬ್ ಸ್ಫೋಟ ಮಾಡಿದ್ದ ಉಗ್ರರು ಬೆಂಗಳೂರಿನ ಮೆಟ್ರೊ ರೈಲ್ವೇ ನಿಲ್ದಾಣನಕ್ಕೆ ಬಂದಿದ್ದಾರೆ ಎಂದು ಕೆಲವು ಮಾಧ್ಯಮಗಳು ಹಾಗೂ ಸೊಶಿಯಲ್ ಮೀಡಿಯಾ ಖಾತೆಗಳು ಮೊನ್ನೆ ವದಂತಿ ಹರಡಿದ್ದವು ಈ ಬಗ್ಗೆ ಇಂದು ಪತ್ರಿಕಾಗೋಷ್ಟಿ ನಡೆಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರು ಇಂತಹ ಗಾಳಿ ಸುದ್ದಿಗೆಲ್ಲ ಕಿವಿಗೊಡ ಬೇಡಿ ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಿರುವುದಿಲ್ಲ. ಜನತೆ ಇಂತಹ ವದಂತಿಗಳಿಗೆ ಬಲಿಯಾಗಿ ಭಯಪಡುವುದು ಬೇಡ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ. ಮೆಟ್ರೊ ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಬಂದಿದ್ದು ನಿಜ, ಅವರಲ್ಲಿ ಒಬ್ಬ ಮೆಟಲ್ ಡಿಟೆಕ್ಟರ್ ಪ್ರವೇಶಿಸಿದಾಗ ಶಬ್ದ ಬಂದಿದ್ದು, ಆದರೆ ಆತನ ಬಳಿ ಬೆಲ್ಟು ಮತ್ತು ಹಣ ಮಾತ್ರ ಇತ್ತು ಎಂಬುದು ಆ ನಂತರ ತಪಾಸಣೆಯಲ್ಲಿ ತಿಳಿದು ಬಂದಿದೆ. ಇನ್ನೊಬ್ಬ ವ್ಯಕ್ತಿ ತಪಾಸಣೆಯ ವೇಳೆ ಹೊರಗೆ ಹೋಗಿದ್ದಾನೆ ಎನ್ನಲಾಗುತ್ತಿದ್ದು, ಆತನನ್ನು ಪತ್ತೆ ಹಚ್ಚಿ ವಿಚಾರಿಸಲಾಗುವುದು ಎಂದರು.

ಆದರೆ ಕೆಲವು ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ಆತನ ಬಳಿ ಶಸ್ತ್ರಾಸ್ತ್ರಗಳಿದ್ದವು, ಬ್ಯಾಕ್ ಪ್ಯಾಕ್ ಇತ್ತು ಎಂದೆಲ್ಲ ಗಾಳಿ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಗಡ್ಡ ಬಿಟ್ಟವರೆಲ್ಲ ಭಯೋತ್ಪಾದಕರಲ್ಲ ಜನತೆ ಹೆದರ ಬೇಕಾಗಿಲ್ಲ ಎಂದು ಮನವಿ ಮಾಡಿದ್ದಾರೆ.

Check Also

ನಿಖಿಲ್ ಮಂಡ್ಯದಲ್ಲಿ ಸೋತಿದ್ದಕ್ಕೆ ಅಭಿಮಾನಿ ಮಾಡಿದ್ದೇನು ನೋಡಿ: ಶಾಕಿಂಗ್

ಸಂದೇಶ ಇ-ಮ್ಯಾಗಝಿನ್: ರಾಜ್ಯ ಸರ್ಕಾರದ ಪ್ರತಿಷ್ಟೆಯ ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರ ಸ್ವಾಮಿಯವರು …

Leave a Reply

Your email address will not be published. Required fields are marked *