Sunday , September 22 2019
Breaking News
Home / ರಾಷ್ಟ್ರೀಯ / ಜುಲಾಯಿ 31 ರ ಒಳಗೆ ಕೋರ್ಟ್‌ಗೆ ಹಾಜರಾಗುವಂತೆ ಝಾಕಿರ್ ನಾಯ್ಕ್‌ಗೆ ಸೂಚನೆ

ಜುಲಾಯಿ 31 ರ ಒಳಗೆ ಕೋರ್ಟ್‌ಗೆ ಹಾಜರಾಗುವಂತೆ ಝಾಕಿರ್ ನಾಯ್ಕ್‌ಗೆ ಸೂಚನೆ

ಸಂದೇಶ ಇ-ಮ್ಯಾಗಝಿನ್: ಮುಂಬೈಯ ವಿಶೇಷ ನ್ಯಾಯಾಲಯವೊಂದು ಇಸ್ಲಾಮಿಕ್ ಪ್ರಭೋಧಕ ಡಾ. ಝಾಕಿರ್ ನಾಯ್ಕ್ ಅವರಿಗೆ ಜುಲಾಯಿ 31 ರ ಮುಂಚೆ ನ್ಯಾಯಾಲಯಕ್ಕೆ ದೈಹಿಕವಾಗಿ ಹಾಜರಾಗಬೇಕು ಎಂದು ಸೂಚಿಸಿದೆ. ತಪ್ಪಿದ್ದಲ್ಲಿ ಝಾಕಿರ್ ನಾಯ್ಕ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ದಾಖಲಿಸುವುದಾಗಿ ನ್ಯಾಯಾಲಯ ಎಚ್ಚರಿಸಿದೆ. ಮುಂಬೈಯ ಮನಿ ಲಾಂಡ್ರಿಂಗ್ ತಡೆ ಕಾಯ್ದೆಯ ವಿಶೇಷ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯವು ಝಾಕಿರ್ ನಾಯ್ಕ್ ವಿರುದ್ಧ ಜಾಮೀನು ರಹಿತ ವಾರಂಟ್ ದಾಖಲು ಮಾಡಬೇಕು ಎಂದು ಮನವಿ ಮಾಡಿತ್ತು. ತಮ್ಮ ಐಆರ್‌ಎಫ್ ಸಂಸ್ಥೆಯ ವಿಚಾರದ ಮನಿಲಾಂಡ್ರಿಂಗ್ ಪ್ರಕರಣದ ಆರೋಪ ಎದುರಿಸುತ್ತಿರುವ ಡಾ. ಝಾಕಿರ್ ನಾಯ್ಕ್ 2016 ರಲ್ಲಿ ದೇಶ ತೊರೆದಿದ್ದು, ಮಲೇಷ್ಯಾದಲ್ಲಿ ಶಾಸ್ವತ ಪೌರತ್ವವನ್ನು ಹೊಂದಿರುವ ಡಾ. ಝಾಕಿರ್ ನಾಯ್ಕ್ ಇದೀಗ ಮಲೇಷ್ಯಾದಲ್ಲಿ ನೆಲೆಸಿದ್ದಾರೆ.

2016ರಲ್ಲಿ ನಡೆದ ಢಾಕಾ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆ ಇಬ್ಬರು ಭಯೋತ್ಪಾದಕರಿಗೆ ಡಾ. ಝಾಕಿರ್ ನಾಯ್ಕ್ ಪ್ರೇರಣೆಯಾಗಿದ್ದಾರೆ ಎಂದು ಹೇಳಲಾಗಿದ್ದರೂ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸಾಬೀತು ಪಡಿಸಲು ಭಾರತ ಬಾಂಗ್ಲಾ ಉಭಯ ದೇಶದ ಸರಕಾರಕ್ಕೆ ಸಾಧ್ಯವಾಗಿಲ್ಲ. ಭಾರತದಲ್ಲಿ ಡಾ. ಝಾಕಿರ್ ನಾಯ್ಕ್ ಮನಿಲಾಂಡ್ರಿ ಪ್ರಕರಣ ಎದುರಿಸುತ್ತಿದ್ದಾರೆ.

Check Also

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

001ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರದ ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. …

Leave a Reply

Your email address will not be published. Required fields are marked *