Sunday , September 22 2019
Breaking News
Home / ಕಿರು ಬರಹ / ಚಾಕಲೇಟ್‌ನ ದುರಾಸೆಯಲ್ಲಿ ಇಡೀ ಚಾಕಲೇಟ್ ಫ್ಯಾಕ್ಟರಿಯನ್ನೇ ಸುತ್ತಾಡಿದ ಒಂದು ಮಗುವಿನ ಕಥೆ

ಚಾಕಲೇಟ್‌ನ ದುರಾಸೆಯಲ್ಲಿ ಇಡೀ ಚಾಕಲೇಟ್ ಫ್ಯಾಕ್ಟರಿಯನ್ನೇ ಸುತ್ತಾಡಿದ ಒಂದು ಮಗುವಿನ ಕಥೆ

ಸಂದೇಶ ಇ-ಮ್ಯಾಗಝಿನ್: ತರಗತಿಯಲ್ಲಿ ಪಾಠ ನಡೆಯುತ್ತಿತ್ತು. ಅಧ್ಯಾಪಕರು ಹೇಳಿದರು; ದುರಾಸೆ ಕೆಟ್ಟ ಸ್ವಭಾವವಾಗಿದೆ. ಸುಹಾಸ್ ಹೇಳಿದ ಟೀಚರ್ ನಾವಂತೂ ಮಕ್ಕಳಾಗಿದ್ದೇವೆ. ಈ ವಯಸ್ಸಿನಲ್ಲಿ ಮಕ್ಕಳು ಸ್ವಲ್ಪ ದುರಾಸೆಯವರಾಗಿತ್ತಾರಲ್ಲವೇ! ಅಧ್ಯಾಪಕರು ಹೇಳಿದರು; ದುರಾಸೆಗೆ ಯಾವುದೇ ವಯಸ್ಸಿಲ್ಲ ಸುಹಾಸ್. ದುರಾಸೆಯುಳ್ಳ ವ್ಯಕ್ತಿ ಯಾವತ್ತೂ ದುರಾಸೆಯವನೇ ಆಗಿರುತ್ತಾನೆ. ಮತ್ತೆ ಸುಹಾಸ್ ಕೇಳಿದ ನಾವು ದುರಾಸೆ ಹೇಗೆ ಮಾಡುವುದು? ಅಧ್ಯಾಪಕರು ಹೇಳಿದರು ನೀನು ಒಂದು ಕೆಲಸ ಮಾಡು. ಇಲ್ಲಿ ಹತ್ತಿರದಲ್ಲೇ ಒಂದು ಚಾಕಲೇಟ್ ಫ್ಯಾಕ್ಟರಿ ಇದೆ. ಅಲ್ಲಿ ಹೋಗಿ ನಿನಗೆ ಯಾವುದು ಹೆಚ್ಚು ಇಷ್ಟವಾಗುತ್ತದೋ ಆ ಚಾಕಲೇಟ್ ಖರೀದಿಸು. ಚಾಕಲೇಟ್‌ನ ಹಣ ನಾನು ಕೊಡುವೆ. ಆದರೆ ಒಂದು ಶರತ್ತು ನೀನು ಅಲ್ಲಿಂದ ಒಂದೇ ಚಾಕಲೇಟ್ ತೆಗೆಯಬೇಕು. ಮತ್ತೆ ಒಮ್ಮೆ ನೀನು ಮುಂದೆ ಹೋದಲ್ಲಿ ಮತ್ತೆ ಹಿಂದಿರುಗುವ ಹಾಗಿಲ್ಲ.

ಸುಹಾಸ್ ಶಾಲೆಯಿಂದ ಓಡಿಕೊಂಡು ಹೋಗಿ ಚಾಕಲೇಟ್ ಫ್ಯಾಕ್ಟರಿ ತಲುಪಿದ. ಗೇಟ್ ಬಳಿ ಇದ್ದ ವಾಚ್ ಮೇನ್ ನಲ್ಲಿ ಅಧ್ಯಾಪಕರ ಹೆಸರು ಹೇಳಿ ಒಳಗೆ ಪ್ರವೇಶ ಪಡೆಯುತ್ತಾನೆ. ಅಲ್ಲಿ ಒಂದಕ್ಕಿಂತ ಒಂದು ಉತ್ತಮವಾದ ಚಾಕಲೇಟ್‌ಗಳನ್ನು ಇಡಲಾಗಿತ್ತು.

ಒಳಗೆ ಹೋದ ಕೂಡಲೇ ಸುಹಾಸ್ ಗೆ ಲಾಲಿಪಾಪ್ ಕಂಡಿತು. ಸುಹಾಸ್ ಯೋಚಿಸಿದ ಇದಂತೂ ನಾನು ಡೈಲಿ ತಿನ್ನುತ್ತೇನೆ. ಇವತ್ತು ಸ್ವಲ್ಪ ಬೇರೆ ತಿನ್ನುವ ಎಂದು ಮುಂದುವರಿಯುತ್ತಾನೆ. ಮುಂದೆ ಮಿಲ್ಕಿಬಾರ್ ಇಡಲಾಗಿತ್ತು. ಸುಹಾಸ್ ಯೋಚಿಸಿದ; ಇದಂತೂ ಉತ್ತಮವಾಗಿದೆ. ಯಾರಿಗೆ ಗೊತ್ತು ಮುಂದೆ ಇದಕ್ಕಿಂತಲೂ ಉತ್ತಮವಾದ ಚಾಕಲೇಟ್ ಇರಬಹುದು ಮುಂದೆ ಹೋಗುವ ಎಂದು ಮುಂದುವರಿದ.

ಹೀಗೆ ಮುಂದುವರಿಯುತ್ತಿದ್ದಂತೆ ಒಂದೊಂದು ಘಮ ಘಮಿಸುವ ಚಾಕಲೇಟುಗಳು ಸುಹಾಸ್‌ನ ಮೂಗಿಗೆ ಸುವಾಸನೆ ಸೂಸುತ್ತಾ ಆಸೆ ಹುಟ್ಟಿಸುತ್ತಿತ್ತು. ಆದರೆ ಅಲ್ಲಿ ಮುಂದೆ ಅದಕ್ಕಿಂತ ಉತ್ತಮವಾದುದು ಸಿಗಬಹುದು ಎಂದು ಸುಹಾಸ್ ಮುಂದುವರಿಯುತ್ತಿದ್ದ.

ಹೀಗೆ ಹೀಗೆ ಮುಂದೆ ಹೋಗಿ ಹೋಗಿ ಸುಹಾಸ್ ಚಾಕಲೇಟು ಫ್ಯಾಕ್ಟರಿಯ ಹಿಂದಿನ ಹೊರಹೋಗುವ ಬಾಗಿಲಿಗೆ ತಲುಪಿದ. ಎಲ್ಲಾ ಚಾಕಲೇಟುಗಳೂ ಹಿಂದೆ ಇದ್ದವು. ಸುಹಾಸ್‌ಗೆ ಅಧ್ಯಾಪಕ ಮಾತಿನಂತೆ ಹಿಂದಿರುಗಿ ಹೋಗುವ ಹಾಗಿರಲಿಲ್ಲ. ಬೇಜಾರಲ್ಲಿ ಅಲ್ಲಿಂದ ಹೊರಟು ಶಾಲೆಗೆ ಬಂದ.

ಅಧ್ಯಾಪಕರು ಕೇಳಿದರು ಸುಹಾಸ್ ಯಾವ ಚಾಕಲೇಟು ಕೊಂಡು ಕೊಂಡೆ ನೀನು. ಸುಹಾಸ್ ಹೇಳಿದ; ಯಾವುದೂ ಇಲ್ಲ. ಅಧ್ಯಾಪಕರು ಕೇಳಿದರು ಯಾಕೆ? ಸುಹಾಸ್ ಹೇಳಿದ; ನನ್ನ ಮುಂದೆ ಹಲವಾರು ಉತ್ತಮ ಉತ್ತಮ ಚಾಕಲೇಟುಗಳು ಬಂದವು. ಆದರೆ ನಾನು ಮುಂದೆ ಇದಕ್ಕಿಂತಲೂ ಉತ್ತಮವಾದುದು ಸಿಗಬಹುದು ಎಂಬ ಆಸೆಯಿಂದ ಮುಂದುವರಿದು ಕೊನೆಗೆ ಏನೂ ಇಲ್ಲದೆ ಮರಳಬೇಕಾಯಿತು ಎಂದ.

ಅಧ್ಯಾಪಕರು ಹೇಳಿದರು; ಇದೇ ದುರಾಸೆ. ನಮ್ಮ ಜೀವನದಲ್ಲೂ ಹೀಗೆ ಆಗುತ್ತೆ. ಮನುಷ್ಯನ ಮುಂದೆ ಸಂತೋಷಗಳ ಸಾಲು ಸಾಲು ಆಗರವೇ ಬರುತ್ತಿರುತ್ತದೆ. ಆದರೆ ಉತ್ತಮವಾದುದು ಬೇಕೆನ್ನುವ ದುರಾಸೆಯಲ್ಲಿ ಮನುಷ್ಯನು ಇರುವುದರಲ್ಲಿ ಸಂತೋಷ ಅನುಭವಿಸದೆ. ಇಲ್ಲದ್ದನ್ನು ಅರಸುತ್ತಾ ಮುಂದುವರಿಯುತ್ತಾನೆ. ಕೊನೆಗೆ ಏನೂ ಇಲ್ಲದೆ ಖಾಲಿ ಖಾಲಿಯಾಗಿ ಅತೃಪ್ತ ಆತ್ಮದಂತಾಗಿ ಜೀವನದ ಮುಸ್ಸಂಜೆ ತಲುಪಿ ಮಾಯವಾಗುತ್ತಾನೆ.

Check Also

fire

ನಮ್ಮೊಳಗಿನ ರಾಜಕೀಯ ದ್ವೇಷದ ಅಗ್ನಿಜ್ವಾಲೆ ಎಷ್ಟು ಉರಿಯುತ್ತಿದೆ ಎಂದರೆ,

000ನಮಗೆ ನಮ್ಮ ಪಕ್ಷಕ್ಕಿಂತಲೂ ಇತರ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುವ ಚಾಳಿ. ಕೈಯಲ್ಲಿದ್ದ ಬಿರಿಯಾಣಿಯನ್ನು ಮಲಿನಗೊಳಿಸಿ, ಕಡ್ಲೆವಲಕ್ಕಿ ಪಡೆಯುವ ತವಕ. …

Leave a Reply

Your email address will not be published. Required fields are marked *