Thursday , June 20 2019
Breaking News
Home / ರಾಜ್ಯ / ರಂಝಾನ್ ತಿಂಗಳು ಮುಸ್ಲಿಮರ ಜೀವನದಲ್ಲಿ ವಿಶಿಷ್ಟವಾದುದು: ಸಿದ್ಧರಾಮಯ್ಯ

ರಂಝಾನ್ ತಿಂಗಳು ಮುಸ್ಲಿಮರ ಜೀವನದಲ್ಲಿ ವಿಶಿಷ್ಟವಾದುದು: ಸಿದ್ಧರಾಮಯ್ಯ

ಸಂದೇಶ ಇ-ಮ್ಯಾಗಝಿನ್: ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಆಯೋಜಿಸಿದ್ದ ಬೃಹತ್ ಇಫ್ತಾರ್ ಕೂಟದಲ್ಲಿ ರಾಜ್ಯ ಕಾಂಗ್ರೇಸ್ ವರಿಷ್ಟರು ಭಾಗವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಫ್ತಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಂಝಾನ್ ತಿಂಗಳಿಗೆ ಮುಸ್ಲಿಮರ ಜೀವನದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಒಂದು ತಿಂಗಳಕಾಲ ನೀವೆಲ್ಲ ದಿನದ 15-14 ಗಂಟೆ ಅನ್ನ ನೀರಿಲ್ಲದೆ ಭಕ್ತಿಯಿಂದ ದೇವರ ಆರಾಧನೆ ಮಾಡುತ್ತೀರಿ. ರಂಝಾನ್ ಸಮಾಜಕ್ಕೆ ಸಾಮರಸ್ಯ ಹಾಗೂ ಸಹೋದರತ್ವವನ್ನು ಭೋದಿಸುತ್ತದೆ. ಈ ಪವಿತ್ರ ಮಾಸದಲ್ಲಿ ದೇವರು ನಿಮಗೆಲ್ಲ ಒಳಿತು ಮಾಡಲಿ ಎಂದು ಹಾರೈಸಿದರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ ರಂಝಾನ್ ಮಾಸವು ಅಶಾಂತಿಯಿಂದ ಕೂಡಿದ ಜಗತ್ತಿಗೆ ಶಾಂತಿಯನ್ನು ತರಲಿ ಎಂದು ಹಾರೈಸಿದರು.

ಇಫ್ತಾರ್ ಕೂಟವನ್ನು ಆಯೋಜಿಸಿದ್ದ ಸಚಿವ ಝಮೀರ್ ಅಹ್ಮದ್ ಖಾನ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರತೀವರ್ಷ ಮೈಸೂರಿನಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುತ್ತಾ ಬಂದಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸುವಂತೆ ನನಗೆ ಹೇಳಿದ್ದರು. ರೋಷನ್ ಬೇಗ್ ಅವರಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ ವೈಯುಕ್ತಿಕ ಕಾರಣದಿಂದ ಅವರು ಭಾಗವಹಿಸಿಲ್ಲ ಎಂದು ರೆಬಲ್ ಶಾಸಕ ರೋಷನ್ ಅವರ ಅನುಪಸ್ಥಿತಿಯನ್ನು ಸಮರ್ಥಿಸಿಕೊಂಡರು.

Check Also

ಗಡ್ಡ ಬಿಟ್ಟವರೆಲ್ಲಾ ಭಯೋತ್ಪಾದಕರಲ್ಲ, ವದಂತಿಗೆ ಕಿವಿಗೊಡಬೇಡಿ: ಬೆಂಗಳೂರು ಪೊಲೀಸರ ಮನವಿ

206ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ಈಸ್ಟರ್ ದಿನದಂದು ಸರಣಿ ಬಾಂಬ್ ಸ್ಫೋಟ ಮಾಡಿದ್ದ ಉಗ್ರರು ಬೆಂಗಳೂರಿನ ಮೆಟ್ರೊ ರೈಲ್ವೇ ನಿಲ್ದಾಣನಕ್ಕೆ ಬಂದಿದ್ದಾರೆ …

Leave a Reply

Your email address will not be published. Required fields are marked *