Friday , May 24 2019
Breaking News
Home / ರಾಜ್ಯ / ಸಂವಿಧಾನ ಬದಲಾವಣೆಯಾದರೆ ನಡೆಯುವ ರಕ್ತಪಾತದ ನೇತೃತ್ವ ವಹಿಸಲಿದ್ದೇನೆ: ಸಿದ್ಧರಾಮಯ್ಯ

ಸಂವಿಧಾನ ಬದಲಾವಣೆಯಾದರೆ ನಡೆಯುವ ರಕ್ತಪಾತದ ನೇತೃತ್ವ ವಹಿಸಲಿದ್ದೇನೆ: ಸಿದ್ಧರಾಮಯ್ಯ

ಸಂದೇಶ ಇ-ಮ್ಯಾಗಝಿನ್: ಒಂದು ವೇಳೆ ಮೋದಿ ಸರಕಾರ ಸಂವಿಧಾನ ಬದಲಾವಣೆ ಮಾಡಿದರೆ ಈ ದೇಶದಲ್ಲಿ ರಕ್ತಪಾತವಾಗುವುದು ಗ್ಯಾರಂಟಿ, ಈ ರಕ್ತಪಾತದ ನೇತೃತ್ವ ವಹಿಸುವವನು ನಾನೇ ಆಗಿದ್ದೇನೆ ಎಂದು ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ರವಿವಾರ ಬಾಗಲಕೋಟೆಯ ರಬಕವಿಯಲ್ಲಿ ಆಯೋಜಿಸಲಾಗಿದ್ದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಸಂವಿಧಾನದ ಸುದ್ಧಿಗೆ ಬಂದರೆ ಈ ದೇಶದಲ್ಲಿ ರಕ್ತಪಾತವಾಗಲಿದೆ. ಅದರ ನೇತೃತ್ವವನ್ನು ನಾನೇ ವಹಿಸುವೆ ಎಂದರು.

ಹಿಂದೂಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರ್‌ಆನ್ ಹಾಗೂ ಕ್ರೈಸ್ತರಿಗೆ ಬೈಬಲ್ ಇದ್ದ ಹಾಗೆ ಈ ದೇಶದ ಎಲ್ಲಾ ಜನರಿಗೆ ಸಂವಿಧಾನವಿದೆ. ಈ ದೇಶದ ಜನರಿಗೆ ಸಂವಿಧಾನವೇ ಧರ್ಮಶಾಸ್ತ್ರವಾಗಿದೆ. ಅದನ್ನು ಮುಟ್ಟಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿದ್ಧರಾಮಯ್ಯ ಎಚ್ಚರಿಕೆ ನೀಡಿದರು.

Check Also

ಭಯೋತ್ಪಾದನೆಗೆ ಬುರ್ಖಾದ ಅಗತ್ಯವಿಲ್ಲವೆಂದು ಸಾಧ್ವಿ ಪ್ರಜ್ಞಾ ನಿರೂಪಿಸಿದ್ದಾರೆ: ಶಾಫೀ ಸ‌ಅದಿ

001ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟವನ್ನು ದಾಳವಾಗಿಟ್ಟು ಕೆಲವು ಮಾಧ್ಯಮಗಳು ಮುಸ್ಲಿಂ ಮಹಿಳೆಯರ ರಕ್ಷಾ ಕವಚವಾದ ಬುರ್ಖಾದ ವಿರುದ್ಧ …

Leave a Reply

Your email address will not be published. Required fields are marked *