Friday , November 15 2019
Breaking News
Home / ಕ್ರೀಡೆ / ನಮ್ಮ ತಂಡದ ಕಪ್ತಾನ ತನ್ನ ಮೆದುಳು ಉಪಯೋಗಿಸಲ್ಲ

ನಮ್ಮ ತಂಡದ ಕಪ್ತಾನ ತನ್ನ ಮೆದುಳು ಉಪಯೋಗಿಸಲ್ಲ

ಸಂದೇಶ ಇ-ಮ್ಯಾಗಝಿನ್: ನಮ್ಮ ಮುಖ್ಯ ಅಸ್ತ್ರ ಬ್ಯಾಟಿಂಗ್ ಅಲ್ಲ ಬೌಲಿಂಗ್ ಮಾತ್ರ ಎಂದು ಅರಿತೂ ಕೂಡ ಸರ್ಫರಾಜ್ ಯಾಕೆ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು ಅಂತ ಅರ್ಥವಾಗುತ್ತಿಲ್ಲ. ಒಬ್ಬ ತಂಡದ ಕಪ್ತಾನ ಇಷ್ಟೊಂದು ಮೂರ್ಖನಾಗಿರಲು ಹೇಗೆ ಸಾಧ್ಯ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ನಮ್ಮ ತಂಡ ರನ್ ಚೇಸಿಂಗ್ ನಲ್ಲಿ ಅಷ್ಟೊಂದು ಉತ್ತಮವಾಗಿಲ್ಲ. ಆದರೂ ಆತ ನಮ್ಮ ಬ್ಯಾಟಿಂಗ್ ವ್ಯವಸ್ಥೆಯ ಮೇಲೆ ಯಾಕೆ ಅಷ್ಟೊಂದು ಭರವಸೆ ಇಟ್ಟರೋ ನಾನಂತೂ ಕಾಣೆ. ಇದೊಂದು ಮೂರ್ಖತನದ ಕಪ್ತಾನನ ಲಕ್ಷಣ ಎಂದು ಶೊಯೆಬ್ ಬಣ್ಣಿಸಿದ್ದಾರೆ.

ಟಾಸ್ ಗೆದ್ದಾಗಲೇ ಅರ್ಧ ಪಂದ್ಯ ಗೆದ್ದ ಹಾಗೆ. ಆದರೆ ನೀವು ಮಾಡಿದ್ದೇನು.? ನೀವು ಪಾಕಿಸ್ತಾನವನ್ನು ಬೇಕೆಂದೇ ಸೋಲಿನ ದವಡೆಗೆ ದೂಡಿದ್ದೀರಿ. ನೀವು ಟಾಸ್ ಗೆದ್ದಾಗ ತೆಗೆದುಕೊಂಡ ನಿರ್ಧಾರದಿಂದಾಗಿಯೇ ಪಂದ್ಯ ಸೋತಿದ್ದು ಎಂದು ಶೋಯೆಬ್ ಅಖ್ತರ್ ಯೂ ಟ್ಯೂಬ್ ವೀಡಿಯೋ ಒಂದರಲ್ಲಿ ತಿಳಿಸಿದ್ದಾರೆ.

ರನ್ ಚೇಸ್ ಮಾಡಿ ಗೆದ್ದ ಇತಿಹಾಸ ಪಾಕಿಸ್ತಾನ ತಂಡದ್ದು ಅಷ್ಟು ಚೆನ್ನಾಗಿಲ್ಲ. ನಮ್ಮ ತಂಡದಲ್ಲಿ ಇಂಝಮಾಮ್, ಯೂಸುಫ್, ಅನ್ವರ್ ಮುಂತಾದ ಬ್ಯಾಟಿಂಗ್ ಘಟಾಟುಗಟಿಗಳು ಆಡುವಾಗಲೇ ನಮಗೆ ಅದು ಸಾಧ್ಯವಾಗಿಲ್ಲ. ಟಾಸ್ ಗೆದ್ದಾಗ ನಿಮಗೆ ಒಂದು ಅವಕಾಶ ವಿತ್ತು. ಆಗ ನೀವು ತಂಡದ ಇತಿಹಾಸವನ್ನು ನೋಡಿ ಬ್ಯಾಟಿಂಗ್ ಆಯ್ಕೆ ಮಾಡಿದ್ದರೆ ಅದು ನಿಮ್ಮ ಜಾಣತನ ವಾಗುತ್ತಿತ್ತು ಎಂದು ಅಖ್ತರ್ ಹೇಳಿದ್ದಾರೆ.

ಟಾಸ್ ನಿನ್ನೆಯ ಪಂದ್ಯದಲ್ಲಿ ಮುಖ್ಯವಾಗಿತ್ತು. ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿ 260 ರ ಆಸುಪಾಸಿನ ರನ್ ದಾಖಲಿಸಿದ್ದರೂ ನಮಗೆ ಹೋರಾಟ ಮಾಡಬಹುದಾಗಿತ್ತು. ಏಕೆಂದರೆ ಪಿಚ್ ಅಷ್ಟು ಬ್ಯಾಟಿಂಗ್‌ಗೆ ಸಹಕಾರಿಯಾಗಿರಲಿಲ್ಲ. ಆದರೆ ಇದನ್ನು ನಮ್ಮ ಕಪ್ತಾನನಿಗೆ ಹೇಳುವವರು ಯಾರು ಎಂದು ಅಖ್ತರ್ ಪ್ರಶ್ನಿಸಿದ್ದಾರೆ.

ಇದು ಪಾಕಿಸ್ತಾನ ತಂಡದ ನಾಯಕನ ಅತ್ಯಂತ ದುಃಖಕರ ಮತ್ತು ನಿರಾಶಾದಾಯಕ ಪ್ರದರ್ಶನ ಎಂದು ನಾನು ಭಾವಿಸುತ್ತೇನೆ. ಮತ್ತು ಅದಕ್ಕಾಗಿಯೇ ನಾನು ನಿರ್ಧಾರ ತೆಗೆದುಕೊಳ್ಳುವಾಗ ಮೆದುಳನ್ನು ಬಳಸಿಕೊಳ್ಳಿ ಎಂದು ನಾನು ಹೇಳುತ್ತಿದ್ದೆ. ಆದರೆ ನಮ್ಮ ಕಪ್ತಾನ ತನ್ನ ಮೆದುಳನ್ನು ಬಳಸದಿರಲು ಪ್ರಯತ್ನಿಸಿದನು ಎಂದು ಅಖ್ತರ್ ಸರ್ಫರಾಜ್ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ಪಾಕಿಸ್ತಾನದ ಪ್ರಮುಖ ವೇಗಿಯಾಗಿದ್ದ ಶೊಯೆಬ್ ಅಖ್ತರ್‌ಗೆ ಜಗತ್ತಿನ ಘಟಾನು ಘಟಿ ಬ್ಯಾಟ್ಸ್ ಮನ್‌ಗಳು ಹೆದರುತ್ತಿದ್ದರು. ಪಾಕಿಸ್ತಾನ ನಿನ್ನೆ ಭಾರತದ ವಿರುದ್ಧ ವಿಶ್ವ ಕಪ್ ಪಂದ್ಯ ಸೋತ ಕಾರಣ ಶೊಯೆಬ್ ತೀವ್ರ ನಿರಾಸೆ ವ್ಯಕ್ತಪಡಿಸಿದ್ದಾರೆ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *