Tuesday , July 23 2019
Breaking News
Home / ರಾಷ್ಟ್ರೀಯ / ಭಾರತದಲ್ಲಿ ಬುರ್ಖಾ ಬ್ಯಾನ್ ಆಗಲಿ ಎಂದು ಶಿವಸೇನೆ ಹೇಳಿಯೇ ಇಲ್ಲ: ಸಂಜಯ್ ರಾವತ್

ಭಾರತದಲ್ಲಿ ಬುರ್ಖಾ ಬ್ಯಾನ್ ಆಗಲಿ ಎಂದು ಶಿವಸೇನೆ ಹೇಳಿಯೇ ಇಲ್ಲ: ಸಂಜಯ್ ರಾವತ್

ಸಂದೇಶ ಇ-ಮ್ಯಾಗಝಿನ್: ಕಳೆದ ಬುಧವಾರ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾದ ಸಂಪಾದಕೀಯದಲ್ಲಿ ಮುಸ್ಲಿಮ್ ಸ್ತ್ರೀಯರು ಧರಿಸುವ ಬುರ್ಖಾ ಭಾರತದಲ್ಲಿ ಬ್ಯಾನ್ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಆಗ್ರಹಿಸಲಾಗಿತ್ತು. ಬಳಿಕ ಈ ಸಂಪಾದಕೀಯ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆದರೆ ಈ ವಿಷಯದಲ್ಲಿ ಶಿವಸೇನೆ ತನ್ನ ಮೇಲೆ ಬರುತ್ತಿರುವ ಆರೊಪದಿಂದ ತಲೆತಪ್ಪಿಸುವ ಪ್ರಯತ್ನ ಮಾಡುತ್ತಿದ್ದು, ಮೊನ್ನೆ ಒಮ್ಮೆ ಈ ಸ್ಪಷ್ಟೀಕರಣ ನೀಡಿದ್ದರೂ ಕೂಡ ಇದೀಗ ಪಕ್ಷದ ವಕ್ತಾರ ಸಂಜಯ್ ರಾವತ್ ಭಾರತದಲ್ಲಿ ಬುರ್ಖಾ ಬ್ಯಾನ್ ಆಗಬೇಕು ಎಂಬ ಸಾಮ್ನಾದಲ್ಲಿ ಪ್ರಕಟವಾಗಿದ್ದ ಸಂಪಾದಕೀಯಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದು ಪಕ್ಷದ ಅಥವಾ ಪಕ್ಷದ ಮುಖಂಡರಾದ ಉದ್ದವ್ ಥಾಕ್ರೆಯವರ ಅಭಿಪ್ರಾಯವಲ್ಲ ಹೊರತಾಗಿ ಇದು ಪತ್ರಿಕೆಯ ಸ್ವಂತ ಅಭಿಪ್ರಾಯವಾಗಿದೆ. ಇದನ್ನು ಪಕ್ಷದ ಮೇಲೆ ಕಟ್ಟಿ ಶಿವಸೇನೆಯನ್ನು ಮುಸ್ಲಿಮ್ ವಿರೋಧಿಯಾಗಿಸುವುದು ಸಲ್ಲ ಎಂದು ಹೇಳಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಸ್ಪೋಟದ ಬಳಿಕ ಅಲ್ಲಿನ ಪ್ರಧಾನಿ ಸಿರಿಸೇನಾ ಅವರು ಮುಖ ಮುಚ್ಚುವ ಪರ್ದಾವನ್ನು ದೇಶದಲ್ಲಿ ನಿಷೇಧಿಸಿದ್ದರು. ಇದೇ ಕ್ರಮವನ್ನು ಅನುಸರಿಸಿ ಭಾರತ ಕೂಡ ಬುರ್ಖಾ ನಿಷೇಧ ಮಾಡಬೇಕು. ರಾವಣನ ಲಂಕೆಯಲ್ಲಿ ಬುರ್ಖಾ ನಿಷೇಧವಾಗುವುದಾದರೆ, ರಾಮನ ಅಯೋಧ್ಯೆಯಲ್ಲಿ ಯಾಕಿಲ್ಲ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಪ್ರಶ್ನಿಸಿತ್ತು.

Check Also

ಮಾಬ್ ಲಿಂಚಿಂಗ್‌ಗೆ ಬಲಿಯಾಗುತ್ತಿದ್ದ ಮುಸ್ಲಿಮ್ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಕುಟುಂಬ

002ಸಂದೇಶ ಇ-ಮ್ಯಾಗಝಿನ್: ಜೈ ಶ್ರೀ ರಾಮ್ ಎಂದು ಜಪಿಸಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಥಳಿಸಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ …

Leave a Reply

Your email address will not be published. Required fields are marked *