Monday , August 26 2019
Breaking News
Home / ಗಲ್ಫ್ ಸುದ್ದಿ / ಶಾರ್ಜಾ: ಯುಎಇಯ ಅತಿ ದೊಡ್ಡ ಮಸೀದಿ ಉದ್ಘಾಟನೆ

ಶಾರ್ಜಾ: ಯುಎಇಯ ಅತಿ ದೊಡ್ಡ ಮಸೀದಿ ಉದ್ಘಾಟನೆ

ಸಂದೇಶ ಇ-ಮ್ಯಾಗಝಿನ್: ಶಾರ್ಜಾ ಆಡಳಿತಗಾರ ಶೈಖ್ ಡಾ. ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ಯವರು ಕಳೆದ ಶುಕ್ರವಾರ ಯುಎಇಯ ಅತಿದೊಡ್ಡ ಮಸೀದಿಯಾದ ಶಾರ್ಜಾ ಮಸೀದಿಯನ್ನು ಉದ್ಘಾಟಿಸಿದರು. 300 ಮಿಲಿಯನ್ ದಿರ್‌ಹಂ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮಸೀದಿ ಮಲೀಹಾ ಹಾಗೂ ಎಮಿರಾತ್ ರಸ್ತೆ ಕೂಡುವಲ್ಲಿ ನಿರ್ಮಾಣವಾಗಿದ್ದು, ಮಸೀದಿ ಮತ್ತದರ ಗಾರ್ಡನ್ ಎಲ್ಲ ಸೇರಿ ಒಟ್ಟು 2 ಮಿಲಿಯನ್ ಚದರ ಅಡಿ ಪ್ರದೇಶದಲ್ಲಿ ಇದೆ ಎನ್ನಲಾಗಿದೆ. 25 ಸಾವಿರ ನಮಾಝಿಗರು ಏಕಕಾಲದಲ್ಲಿ ನಮಾಝ್ ನಿರ್ವಹಿಸುವ ಅವಕಾಶವಿರುವ ಈ ಮಸೀದಿಯ ನಿರ್ಮಾಣ 2014 ರಲ್ಲಿ ಪ್ರಾರಂಭವಾಗಿತ್ತು. ಅಬುಧಾಬಿಯ ಶೈಖ್ ಝಾಯೆದ್ ಮಸೀದಿಯ ಹಾಗೆ ಶಾರ್ಜಾ ಮಸೀದಿ ಕೂಡ ಮುಸ್ಲಿಮೇತರ ಭೇಟಿದಾರರಿಗೂ ತೆರೆದಿರುತ್ತದೆ ಮತ್ತು ಅದಕ್ಕಾಗಿ ಮೀಸಲಾಗಿರುವ ಸ್ಥಳಗಳು ಮತ್ತು ಮಾರ್ಗಗಳನ್ನು ಸೂಚಿಸಲಾಗುವುದು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಒಟ್ಟೋಮನ್ ವಾಸ್ತುಕಲಾ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಮಸೀದಿ ಸಂಕೀರ್ಣದಲ್ಲಿ ಗಿಫ್ಟ್ ಶಾಪ್, ಮ್ಯೂಸಿಯಂ ಹಾಗೂ ಕಾರಂಜಿಯೂ ಇರಲಿದೆ.

ಮಸೀದಿಯು ಅತೀ ದೊಡ್ಡ ಗ್ರಂಥಾಯಲಯವನ್ನು ಹೊಂದಿದ್ದು, ಇಲ್ಲಿ ಅನೇಕ ಇಸ್ಲಾಮಿಕ್ ಸಾಹಿತ್ಯಗಳನ್ನು ಕಾಣಬಹುದು. ಸುಮಾರು 2,200 ಕಾರು ಹಾಗೂ ಬಸ್ಸುಗಳನ್ನು ಪಾರ್ಕ್ ಮಾಡುವಂತಹ ಪ್ರದೇಶವನ್ನು ಮಸೀದಿಯ ಸುವ್ಯಸ್ಥಿತ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕಲ್ಪಿಸಲಾಗಿದೆ.

Check Also

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

103ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ …

Leave a Reply

Your email address will not be published. Required fields are marked *