Thursday , June 20 2019
Breaking News
Home / ವಿಶೇಷ / ಮಾಜಿ ರಾಷ್ಟ್ರಪತಿ ಡಾI ಪಂಡಿತ್ ಶಂಕರ್ ದಯಾಳ್ ಶರ್ಮ ಕುರ್‌ಆನ್ ಮತ್ತು ಮುಸ್ಲಿಮರ ಕುರಿತು ಬರೆದ ಕವಿತೆ

ಮಾಜಿ ರಾಷ್ಟ್ರಪತಿ ಡಾI ಪಂಡಿತ್ ಶಂಕರ್ ದಯಾಳ್ ಶರ್ಮ ಕುರ್‌ಆನ್ ಮತ್ತು ಮುಸ್ಲಿಮರ ಕುರಿತು ಬರೆದ ಕವಿತೆ

ಸಂದೇಶ ಇ-ಮ್ಯಾಗಝಿನ್: ಇಸ್ಲಾಮ್ ಧರ್ಮದ ಪವಿತ್ರ ಗ್ರಂಥವಾದ ಕುರ್‌ಆನ್ ಹಾಗೂ ಮುಸ್ಲಿಮರ ಬಗ್ಗೆ ಭಾರತದ 9ನೇ ರಾಷ್ಟ್ರಪತಿಗಳಾದ ಡಾ! ಪಂಡಿತ್ ಶಂಕರ್ ದಯಾಳ್ ಶರ್ಮ ಅವರು ಒಂದು ಕವಿತೆ ಬರೆದಿದ್ದಾರೆ. ಈ ಕವಿತೆ ಓದುವಾಗ ಇದು ಬರೆದದ್ದು ಒಬ್ಬ ಇಸ್ಲಾಮೇತರ ವ್ಯಕ್ತಿಯೇ ಎಂಬಷ್ಟರ ಮಟ್ಟಿಗೆ ನಿಮಗೆ ಆಶ್ಚರ್ಯವಾಗಬಹುದು. ಅಷ್ಟು ಸ್ಪುಟವಾಗಿ ಇರುವ ಸತ್ಯವನ್ನು ಬರೆದಿದ್ದಾರೆ.

1. “ಕುರ್‌ಆನ್ ಅಮಲ್ ಕಿ ಕಿತಾಬ್ ಥಿ.. ಮಗರ್ ಉಸೇ ದುವಾವೋಂ ಕಿ ಕಿತಾಬ್ ಬನಾ ದಿಯಾ”. ಅಂದರೆ ಕುರ್‌ಆನ್ ಅನುಸರಿಸಬೇಕಾದ ಗ್ರಂಥವಾಗಿತ್ತು ಆದರೆ ಅದನ್ನು ಪ್ರಾರ್ಥನೆ/ಯಾಚನೆಗಳ ಗ್ರಂಥ ಮಾಡಲಾಯಿತು.

2. “ಸಮಝ್ನೆ ಕಿ ಕಿತಾಬ್ ಥಿ.. ಉಸೇ ಪಢ್ನೇ ಕಿ ಕಿತಾಬ್ ಬನಾ ದಿಯಾ”. ಅಂದರೆ ಕುರ್‌ಆನ್ ಅರ್ಥೈಸಬೇಕಾದ ಗ್ರಂಥವಾಗಿತ್ತು ಆದರೆ ಅದನ್ನು ಓದುವ ಗ್ರಂಥ ಮಾಡಲಾಯಿತು.

3. “ಝಿಂದಾವೋಂ ಕಾ ದಸ್ತೂರ್ ಥಾ.. ಮುರ್ದಾವೋಂ ಕಾ ಮನ್ಶೂರ್ ಬನಾ ದಿಯಾ”. ಅಂದರೆ ಜೀವಂತರಿಗೆ ಸಂಕೇತವಾಗಿತ್ತು ಆದರೆ ಮೃತರ ಪ್ರಣಾಳಿಕೆಯನ್ನಾಗಿಸಲಾಯಿತು.

4. ”ಜೋ ಇಲ್ಮ್ ಕಿ ಕಿಥಾಬ್ ಥಿ… ಉಸೆ ಲಾ ಇಲ್ಮೋಂ ಕೆ ಹಾಥ್ ಥಮಾ ದಿಯಾ”. ಅಂದರೆ ಅದು ಜ್ಞಾನದ ಪುಸ್ತಕವಾಗಿತ್ತು. ಅದನ್ನು ಅಜ್ಞಾನಿಗಳ ಕೈಯಲ್ಲಿ ಬಿಟ್ಟುಬಿಟ್ಟಿದ್ದೀರಿ.

5. “ತಷ್ರೀಕ್-ಎ-ಕಾಯೆನಾತ್ ಕಾ ದರ್ಸ್ ದೇನೇ ಆಯಿ ಥಿ…ಸಿರ್ಫ್ ಮದರಸೋಂಕಾ ನಿಸಾಬ್ ಬನಾ ದಿಯಾ”. ಅಂದರೆ ಸೃಷ್ಟಿಯ ಜ್ಞಾನದ ಬಗ್ಗೆ ತಿಳಿಸಲು ಬಂದಿತ್ತು. ಆದರೆ ಅದನ್ನು ಕೇವಲ ಮದ್ರಾಸಾಗಳಿಗೆ ಮಾತ್ರ ಸೀಮಿತ ಮಾಡಲಾಯಿತು.

6. “ಮುರ್ದಾ ಕೌಮೋಂ ಕೊ ಝಿಂದಾ ಕರ್ನೆ ಆಯಿ ಥಿ.. ಮುರ್ದೋಂ ಕೊ ಬಕ್ಷ್ವಾನೆ ಲಗಾ ದಿಯಾ”. ಅಂದರೆ ನಿರ್ಜೀವವಾದ ಸಮೂಹಗಳನ್ನು ಜೀವಂತ ಮಾಡಲು ಬಂದಿತ್ತು ಆದರೆ ನೀವು ಇದನ್ನು ಮೃತರಿಗೆ ಕನಿಕರ ಕೋರಲು ಬಳಸಿಕೊಂಡಿರಿ.

7. “ಓ ಮುಸಲ್ಮಾನ್ ಏ ತೂ ನೆ ಕ್ಯಾ ಕಿಯಾ?” ಮುಸ್ಲಿಮರೇ ನೀವು ಇದನ್ನು ಏನು ಮಾಡಿದಿರಿ?

Check Also

ಮುಸ್ಲಿಮರ ರಂಝಾನ್ ಶೀರ್‌ಕುರ್ಮಾ‌ಗೆ ಶ್ಯಾವಿಗೆ ತಯಾರಿಸುವುದು ಹಿಂದೂ ಕುಟುಂಬ

002ಸಂದೇಶ ಇ-ಮ್ಯಾಗಝಿನ್: ಒಂದು ಸಮುದಾಯದವರ ಸಂಪ್ರದಾಯಕ್ಕೆ ಇನ್ನೊಂದು ಸಮುದಾಯದವರ ಸಹಕಾರ ಇನ್ನೊಂದು ಸಮುದಾಯದವರ ಹಬ್ಬದ ಅಡಿಗೆಗೆ ಬಳಸುವ ವಸ್ತು ತಯಾರಿಸುವುದು …

Leave a Reply

Your email address will not be published. Required fields are marked *