Monday , August 26 2019
Breaking News
Home / ರಾಜ್ಯ / ಭಯೋತ್ಪಾದನೆಗೆ ಬುರ್ಖಾದ ಅಗತ್ಯವಿಲ್ಲವೆಂದು ಸಾಧ್ವಿ ಪ್ರಜ್ಞಾ ನಿರೂಪಿಸಿದ್ದಾರೆ: ಶಾಫೀ ಸ‌ಅದಿ

ಭಯೋತ್ಪಾದನೆಗೆ ಬುರ್ಖಾದ ಅಗತ್ಯವಿಲ್ಲವೆಂದು ಸಾಧ್ವಿ ಪ್ರಜ್ಞಾ ನಿರೂಪಿಸಿದ್ದಾರೆ: ಶಾಫೀ ಸ‌ಅದಿ

ಸಂದೇಶ ಇ-ಮ್ಯಾಗಝಿನ್: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟವನ್ನು ದಾಳವಾಗಿಟ್ಟು ಕೆಲವು ಮಾಧ್ಯಮಗಳು ಮುಸ್ಲಿಂ ಮಹಿಳೆಯರ ರಕ್ಷಾ ಕವಚವಾದ ಬುರ್ಖಾದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಮೌಲಾನಾ ಶಾಫೀ ಸ‌ಅದಿ ಹೇಳಿದ್ದಾರೆ. ಹಾಸನದ ಅರಸೀಕೆರೆಯಲ್ಲಿ ನಡೆದ ಸುನ್ನಿ ಇಜ್ತಿಮಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಭಯೋತ್ಪಾದನೆಗೂ ಧರ್ಮಕ್ಕೂ ನಂಟು ಕಲ್ಪಿಸುವ ಪ್ರಯತ್ನ ಬೇಡ, ಆತ್ಮಹತ್ಯೆಯನ್ನು ಕುರ್‌ಆನ್ ಖಂಡಿಸಿರುವಾಗ ಒಬ್ಬ ನೈಜ ಮುಸಲ್ಮಾನ ಆತ್ಮಾಹುತಿ ದಾಳಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಭಯೋತ್ಪಾದಕರಿಗೆ ಬುರ್ಖಾದ ಅಗತ್ಯವಿಲ್ಲ ಎಂದು ಹೈದರಾಬಾದ್ ಮಕ್ಕಾ ಮಸೀದಿ, ಮಾಲೇಗಾಂವ್, ಅಜ್ಮೀರ್ ಸ್ಫೋಟದ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸಾಬೀತು ಮಾಡಿದ್ದಾರೆ. ಆದುದರಿಂದ ಭಯೋತ್ಪಾದನೆಗೆ ಬುರ್ಖಾವನ್ನು ತಳಕು ಹಾಕಬೇಡಿ ಎಂದು ಸಅದಿ ಮಾಧ್ಯಮಗಳಲ್ಲಿ ವಿನಂತಿಸಿದರು.

ಶ್ರೀಲಂಕಾ ದಾಳಿಯ ಹೆಸರಿನಲ್ಲಿ ಮುಸ್ಲಿಮ್ ಮಹಿಳೆಯರ ರಕ್ಷಾ ಕವಚವಾದ ಬುರ್ಖಾದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಖಂಡಿಸಿದ ಅವರು, ಬುರ್ಖಾ ಧರಿಸದವರೂ ಭಯೋತ್ಪಾದನೆ ಮಾಡಿದ ನಿದರ್ಶನವಿರುವಾಗ ಬುರ್ಖಾವನ್ನು ನಿಷೇಧಿಸಬೇಕೆಂಬ ಕೂಗಿಗೆ ಅರ್ಥವಿಲ್ಲ ಎಂದರು.a

Check Also

ನಿಖಿಲ್ ಮಂಡ್ಯದಲ್ಲಿ ಸೋತಿದ್ದಕ್ಕೆ ಅಭಿಮಾನಿ ಮಾಡಿದ್ದೇನು ನೋಡಿ: ಶಾಕಿಂಗ್

001ಸಂದೇಶ ಇ-ಮ್ಯಾಗಝಿನ್: ರಾಜ್ಯ ಸರ್ಕಾರದ ಪ್ರತಿಷ್ಟೆಯ ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರ ಸ್ವಾಮಿಯವರು …

Leave a Reply

Your email address will not be published. Required fields are marked *