Sunday , September 22 2019
Breaking News
Home / ವೀಡಿಯೋ / ತುರ್ಕಿ ಅಧ್ಯಕ್ಷರು ಕಾರಿನಲ್ಲಿ ಹೋಗುವಾಗ ಕೈ ಬೀಸಿದ ಮಕ್ಕಳು ಮುಂದೇನಾಯಿತು ನೋಡಿ

ತುರ್ಕಿ ಅಧ್ಯಕ್ಷರು ಕಾರಿನಲ್ಲಿ ಹೋಗುವಾಗ ಕೈ ಬೀಸಿದ ಮಕ್ಕಳು ಮುಂದೇನಾಯಿತು ನೋಡಿ

ಸಂದೇಶ ಇ-ಮ್ಯಾಗಝಿನ್: ತುರ್ಕಿಯ ಅಧ್ಯಕ್ಷರಾದ ರಸೆಪ್ ತೈಯ್ಯಿಪ್ ಎರ್ದೋಗಾನ್ ಅವರು ತಮ್ಮ ರಾಜಪಥದಲ್ಲಿ ಸಾಗುತ್ತಿದ್ದಾಗ ದಾರಿಯ ಬದಿಯಲ್ಲಿ ಕೆಲವು ಮಕ್ಕಳು ಅವರನ್ನು ಭೇಟಿಯಾಗಲು ಆಸೆ ವ್ಯಕ್ತಪಡಿಸುತ್ತಾ ಕೈ ಬೀಸುತ್ತಿದ್ದರು. ಅಧ್ಯಕ್ಷರ ಕಾರಿನ ಹಿಂದೆ ಮುಂದೆ ಎಸ್ಕಾರ್ಟ್ ವಾಹನಗಳು ಸಾಲು ಗಟ್ಟಿ ಸಾಗುತ್ತಿತ್ತು. ಮಕ್ಕಳು ಕೂಗಿ ಕೂಗಿ ಅಧ್ಯಕ್ಷರನ್ನು ಕರೆಯುತ್ತಿದ್ದರು. ಕೂಡಲೇ ಎಸ್ಕಾರ್ಟ್ ವಾಹನಗೆಲ್ಲವೂ ನಿಲ್ಲಲು ಸೂಚನೆ ದೊರೆಯುತ್ತದೆ. ಆ ಕೂಡಲೇ ತಮ್ಮ ಕಾರಿನ ಬಾಗಿಲು ತೆರೆದ ಅಧ್ಯಕ್ಷ ಎರ್ದೋಗಾನ್ ಅವರು ಖುಷಿಯಿಂದ ತಮ್ಮತ್ತ ಧಾವಿಸುತ್ತಿದ್ದ ಮಕ್ಕಳನ್ನು ತಬ್ಬಿಕೊಂಡು ಮುದ್ದಿಸಿದರು. ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಕ್ಕಳೆಲ್ಲರೂ ತಮ್ಮ ನಾಯಕನನ್ನು ಭೇಟಿಯಾದ ಸಂತೋಷದಿಂದ ಅಳುತ್ತಿದ್ದರು. ತುರ್ಕಿಯಲ್ಲಿ ಅಪಾರ ಜನಪ್ರಿಯ ನಾಯಕರಾಗಿರುವ ಎರ್ದೋಗಾನ್ ಇತ್ತೀಚೆಗೆ ಅಧ್ಯಕ್ಷಗಾಧಿಗೆ ಪುರನಾಯ್ಕೆಯಾಗಿದ್ದರು. ಈ ಹಿಂದೆ ರಮದಾನಿನ ಸಮಯದಲ್ಲೂ ಹಾಸ್ಟೆಲ್ ಒಂದರ ವಿಧ್ಯಾರ್ಥಿಯೊಬ್ಬ ಅಧ್ಯಕ್ಷ ಎರ್ದೋಗಾನ್ ಅವರನ್ನು ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿ ನಮ್ಮ ಜೊತೆ ಇವತ್ತು ಸಹರಿ ಉಣ್ಣಲು ಬರಬಹುದೇ ಅಂತ ಕೇಳಿದಾಗ, ಕೂಡಲೇ ಪ್ರತಿಕ್ರಿಯಿಸಿದ್ದ ಎರ್ದೋಗಾನ್ ಅವರ ಟ್ವಿಟ್ಟರ್ ಹ್ಯಾಂಡಲ್ ನಿಮ್ಮ ಚಹಾ ಸಿದ್ಧವಾಗಿದ್ದರೆ ನಾನು ಬರುತ್ತೇನೆ ಅಂತ ಪ್ರತಿಕ್ರಿಯಿಸಿತ್ತು. ಅದಾದ ಎರಡು ಗಂಟೆಯ ಅವಧಿಯ ಒಳಗೆ ಅಧ್ಯಕ್ಷರ ಎಸ್ಕಾರ್ಟ್ ವಾಹನಗಳು ಹಾಸ್ಟೆಲ್ ಅಂಗಳದಲ್ಲಿ ಸದ್ದು ಮಾಡಿದ್ದವು.

دِلوں کے بادشاہ دلوں کے حکمران

دِلوں کے بادشاہ دلوں کے حکمران صدر رجب طیب ایردوان ⁦❤️⁩

Posted by Rajab Tayyib Erdoğan – Urdu on Wednesday, 5 September 2018

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

3111ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *