Friday , April 3 2020
Breaking News
Home / ಅಂತಾರಾಷ್ಟ್ರೀಯ / ಸೌದಿ ರಾಜಕುಮಾರಿಯ ವಿರುದ್ಧ ಫ್ರಾನ್ಸ್ ನಲ್ಲಿ ಮೊಕದ್ದಮೆ-ಕಾರಣವೇನು ನೋಡಿ

ಸೌದಿ ರಾಜಕುಮಾರಿಯ ವಿರುದ್ಧ ಫ್ರಾನ್ಸ್ ನಲ್ಲಿ ಮೊಕದ್ದಮೆ-ಕಾರಣವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಏಕೈಕ ಪುತ್ರಿ ರಾಜಕುಮಾರಿ ಹಸ್ಸಾ ಬಿಂತ್ ಸಲ್ಮಾನ್ ಅವರ ವಿರುದ್ಧ ಮಂಗಳವಾರ ಪ್ಯಾರಿನ್ ನಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಮೊಕದ್ದಮೆಯ ವಿಚಾರಣೆಯನ್ನು ಹಸ್ಸಾರ ಅನುಪಸ್ಥಿತಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. ಅವರ ವಿರುದ್ಧ ಪ್ಯಾರಿಸ್‌ನ ಸೌದಿ ರಾಜಮನೆತನದ ಅಪಾರ್ಟ್‌ಮೆಂಟ್‌ನಲ್ಲಿ ಫೋಟೋ ಮತ್ತು ವಿಡಿಯೋ ತೆಗೆದ ಕಾರಣಕ್ಕಾಗಿ ಪ್ಲಂಬರ್ ಒಬ್ಬರಿಗೆ ತನ್ನ ಅಂಗರಕ್ಷಕರಿಂದ ಥಳಿಸಿದ್ದಾರೆ ಎಂಡೂ ಆರೋಪಿಸಲಾಗಿದೆ. ಸೆಪ್ಟೆಂಬರ್ 2016 ರಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆದು ಕೆಲವು ದಿನಗಳ ನಂತರ ರಾಜಕುಮಾರಿ ಹಸ್ಸಾ ಫ್ರಾನ್ಸ್ ತೊರೆದಿದ್ದಾರೆ ಎನ್ನಲಾಗಿದೆ. ಹಸ್ಸಾರ ಬಂಧನದ ವಾರಂಟ್ ಅನ್ನು ಡಿಸೆಂಬರ್ 2017 ರಲ್ಲಿ ಹೊರಡಿಸಲಾಗಿತ್ತು. ಆ ಸಮಯದಲ್ಲಿ ಅವರು ಫ್ರಾನ್ಸ್ ನಲ್ಲಿ ಇರಲಿಲ್ಲ. ಮತ್ತು ಇದೀಗ ನ್ಯಾಯಾಲಯಕ್ಕೆ ಹಾಜರಾಗುವ ನೋಟಿಸನ್ನು ಹಸ್ಸಾರ ಫ್ರಾನ್ಸ್ ನ ವಿಳಾಸಕ್ಕೆ ಕಳುಹಿಸಲಾಗಿದ್ದು, ಅವರೀಗ ಸೌದಿ ಅರೇಬಿಯಾದಲ್ಲಿ ಇರುವ ಕಾರಣ ಅವರಿಗೆ ನೋಟಿಸ್ ತಲುಪಿಲ್ಲ ಎಂದು ಹಸ್ಸಾರ ವಕೀಲ ಸಮಜಾಯಿಸಿ ನೀಡಿದ್ದಾರೆ.

2016 ರಲ್ಲಿ ಅಪಾರ್ಟ್ ಮೆಂಟ್ ನಲ್ಲಿ ಕೆಲಸಕ್ಕೆ ಬಂದಿದ್ದ ಪ್ಲಂಬರ್ ಒಬ್ಬ ಅಪಾರ್ಟ್ ಮೆಂಟ್ ನ ಫೋಟೋದ ಜೊತೆಗೆ ರಾಜಕುಮಾರಿ ಹಸ್ಸಾರ ವೈಯುಕ್ತಿಕ ಫೋಟೋಗಳನ್ನು ಕೂಡ ಕ್ಲಿಕ್ಕಿಸಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ರಾಜಕುಮಾರಿಯ ಅಂಗರಕ್ಷಕರು ಆತನನ್ನು ಥಳಿಸಿದ್ದರು. ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಹಿರಿಯ ಮಲ ಸಹೋದರಿಯಾಗಿರುವ ಹಸ್ಸಾ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅವರ ಏಕೈಕ ಪುತ್ರಿಯಾಗಿದ್ದಾರೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *