Thursday , June 20 2019
Breaking News
Home / ಅಂತಾರಾಷ್ಟ್ರೀಯ / ಸ್ಕಾಟ್‌ಲ್ಯಾಂಡ್: ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿಸಲು ನೂತನ ಕ್ರಮ; ಭಾರೀ ಪ್ರಶಂಸೆ

ಸ್ಕಾಟ್‌ಲ್ಯಾಂಡ್: ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಿಸಲು ನೂತನ ಕ್ರಮ; ಭಾರೀ ಪ್ರಶಂಸೆ

ಸಂದೇಶ ಇ-ಮ್ಯಾಗಝಿನ್: ಯುನೈಟೆಡ್ ಕಿಂಗ್ ಡಮ್ ಒಕ್ಕೂಟದ ದೇಶಗಳಲ್ಲಿ ಒಂದಾದ ಸ್ಕಾಟ್‌ಲ್ಯಾಂಡ್‌ನ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮರ ಸಂಖ್ಯೆಯನ್ನು ಹೆಚ್ಚಿಸಲು ಅಲ್ಲಿನ ಸರಕಾರ ಹೊಸ ಯೋಜನೆ ರೂಪಿಸಿದೆ. ಇಂಡೆಪೆಂಡಂಟ್ ಪತ್ರಿಕೆಯ ವರದಿಯ ಪ್ರಕಾರ ಸ್ಕಾಟ್ ಲ್ಯಾಂಡ್ ಪೊಲೀಸ್ ಇಲಾಖೆಯಲ್ಲಿ ಇದೀಗ ಮುಸ್ಲಿಮ್ ಮಹಿಳಾ ಪೊಲೀಸರು ಅಧಿಕೃತ ಯುನಿಫಾರ್ಮ್ ಜೊತೆಗೆ ಹಿಜಾಬ್ ಧರಿಸಬಹುದು. ಪೊಲೀಸ್ ಇಲಾಖೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರನ್ನು ಆಕರ್ಷಿಸಲು ಪೊಲೀಸ್ ಇಲಾಖೆ ಈ ಕಾನೂನು ರೂಪಿಸಿದೆ ಎನ್ನಲಾಗಿದೆ. ಮುಸ್ಲಿಮ್ ಮಹಿಳೆಯರ ಹಿಜಾಬ್ ಬಗ್ಗೆ ಐರೋಪ್ಯ ಹಾಗೂ ಏಷ್ಯನ್ ದೇಶಗಳು ಪೂರ್ವಾಗ್ರಹ ಪೀಡಿತವಾಗಿರುವ ಈ ಸಮಯದಲ್ಲಿ ಸ್ಕಾಟ್‌ಲ್ಯಾಂಡ್‌ನ ಈ ತೀರ್ಮಾನ ಅಲ್ಲಿನ ಮುಸ್ಲಿಮರಲ್ಲಿ ದೇಶದ ಬಗ್ಗೆ ಹೆಚ್ಚು ಆತ್ಮೀಯತೆ ಬೆಳೆಯಲು ಕಾರಣವಾಗಬಹುದು ಎನ್ನಲಾಗಿದೆ.

ಇಲಾಖೆಯ ಕ್ರಮವನ್ನು ಸ್ಕಾಟಿಶ್ ಪೊಲೀಸ್ ಮುಸ್ಲಿಮ್ ಅಸೋಶಿಯೇಶನ್ (SPMA) ಸ್ವಾಗತಿಸಿದ್ದು, SPMA ಯ ಚೇರ್‌ಮ್ಯಾನ್ ಆಗಿರುವ ಫಹದ್ ಬಶೀರ್ ಇದೊಂದು ಧನಾತ್ಮಕ ನಿರ್ಧಾರ ಇದರಿಂದಾಗಿ ಪೊಲೀಸ್ ಇಲಾಖೆಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಲಿದೆ ಎಂದು ಹೇಳಿದ್ದಾರೆ.

Check Also

ಸೌದಿ ಅರೇಬಿಯಾ ಈ ಬಾರಿ ತಪ್ಪಾಗಿ ಈದ್ ಆಚರಿಸಿದೆ ಎಂದು ಆರೋಪಿಸಿದ ಪಾಕಿಸ್ತಾನಿಗಳು

0110ಸಂದೇಶ ಇ-ಮ್ಯಾಗಝಿನ್: ಈ ಬಾರಿ ಸೌದಿ ಅರೇಬಿಯಾ ಭಾರತ ಹಾಗೂ ಪಾಕಿಸ್ತಾನದಕ್ಕಿಂತ ಒಂದು ದಿನ ಮುಂಚಿತವಾಗಿ ಈದ್ ಆಚರಿಸಿದ್ದು, ಜೂನ್ …

Leave a Reply

Your email address will not be published. Required fields are marked *