Tuesday , April 7 2020
Breaking News
Home / ವೀಡಿಯೋ / ಸಾವರ್ಕರ್ ಯಾಕೆ ಭಾರತ ರತ್ನಕ್ಕೆ ಅರ್ಹನಲ್ಲ ಎಂದು ಅಶುತೋಷ್ ನೀಡಿದ 4 ಪ್ರಮುಖ ಕಾರಣಗಳು

ಸಾವರ್ಕರ್ ಯಾಕೆ ಭಾರತ ರತ್ನಕ್ಕೆ ಅರ್ಹನಲ್ಲ ಎಂದು ಅಶುತೋಷ್ ನೀಡಿದ 4 ಪ್ರಮುಖ ಕಾರಣಗಳು

ಸಂದೇಶ ಇ-ಮ್ಯಾಗಝಿನ್: ಮಹಾರಾಷ್ಟ್ರ ರಾಜ್ಯದ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಆರೆಸ್ಸೆಸ್ ಮುಖಂಡ ವಿ.ಡಿ. ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ನೀಡುವುದಾಗಿ ತಿಳಿಸಿದೆ. ಇತಿಹಾಸದಲ್ಲಿ ಅತ್ಯಂತ ವಿವಾದಿತ ವ್ಯಕ್ತಿಯಾಗಿರುವ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವುದಾಗಿ ಘೋಷಿಸಿದ ನಂತರ ಹಲವಾರು ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸತ್ಯ ಹಿಂದಿ ಡಾಟ್ ಕಾಮ್ ನ ಅಶುತೋಷ್ ಅವರು ಸಾವರ್ಕರ್ ಯಾಕೆ ಭಾರತ ರತ್ನಕ್ಕೆ ಅರ್ಹರಲ್ಲ ಎಂದು ನಾಲ್ಕು ಕಾರಣಗಳನ್ನು ನೀಡಿದ್ದಾರೆ.

1. ಬ್ರಿಟೀಷರಿಗೆ ಪತ್ರ ಬರೆದು ಕ್ಷಮೆ ಕೇಳಿದ್ದ ಸಾವರ್ಕರ್:
ಸಾವರ್ಕರ್‌ಗೆ ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಗಾಗಿ ಕಳುಹಿಸಿದ ನಂತರ ಸಾವರ್ಕರ್ ಅಂದಿನ ಬ್ರಿಟೀಷ್ ಸರಕಾರಕ್ಕೆ 5 ಕ್ಷಮಾಪಣಾ ಪತ್ರವನ್ನು ಬರೆಯುತ್ತಾರೆ. ಅದರಲ್ಲಿ ಅವರು ಸ್ಪಷ್ಟವಾಗಿ ಹೇಳುವುದೇನೆಂದರೆ ನಾನು ಸ್ವಾತಂತ್ರ್ಯ ಹೋರಾಟ ಮಾಡಿದ್ದಕ್ಕಾಗಿ ಕ್ಷಮೆ ಕೇಳುವೆ. ಇನ್ನು ಮುಂದೆ ನಾನು ಯಾವತ್ತೂ ಬ್ರಿಟೀಷ್ ಸರಕಾರದ ವಿರುದ್ಧ ನಡೆಯುವ ಆಂದೋಲನದಲ್ಲಿ ಪಾಲುಗೊಳ್ಳಲಾರೆ. ಇನ್ನು ಮುಂದೆ ನಾನು ಯಾವತ್ತೂ ಬ್ರಿಟೀಷ್ ಸರಕಾರದ ಪರವಾಗಿರುವೆ ಎಂದು ಹೇಳಿದ್ದರು. 1921 ರಲ್ಲಿ ಸಾವರ್ಕರನ್ನು ಅಂಡಮಾನಿನ ಜೈಲಿಂದ ತಂದು ರತ್ನಗಿರಿಯ ಜೈಲಲ್ಲಿ ಇಡಲಾಗುತ್ತದೆ. ಆ ಬಳಿಕ 1924 ರಲ್ಲಿ ಸಾವರ್ಕರನ್ನು ರತ್ನಗಿರಿ ಜೈಲಿಂದಲೂ ಬಿಡುಗಡೆ ಗೊಳಿಸಲಾಗುತ್ತದೆ.

ಆ ಬಳಿಕ ರತ್ನಗಿರಿಯಲ್ಲೇ ಇದ್ದ ಸಾವರ್ಕರ್, ಗಾಂಧೀಜಿಯವರ ಕರೆಯಂತೆ ದೇಶದ ಯುವಕರು ಬ್ರಿಟೀಷರ ವಿರುದ್ಧ ಆಂದೋಲನ ನಡೆಸುತ್ತಿರುವಾಗ, ಜೈಲುವಾಸ ಅನುಭವಿಸುತ್ತಿರುವಾಗ ಸಾವರ್ಕರ್ ಯಾವುದೇ ಚಳುವಳಿಯಲ್ಲಿ ಭಾಗವಹಿಸಲಿಲ್ಲ. ಮತ್ತು ಒಮ್ಮೆಯೂ ಜೈಲಿಗೆ ಹೋಗಿಲ್ಲ. ಬದಲಾಗಿ ಬ್ರಿಟೀಷ್ ಆಡಳಿತಕ್ಕೆ ಪರವಾಗಿದ್ದರು. ಇಂತಹ ವ್ಯಕ್ತಿಗೆ ಭಾರತ ರತ್ನ ನೀಡುವುದು ಸರಿಯೇ ಎಂದು ಅಶುತೋಷ್ ಪ್ರಶ್ನಿಸಿದ್ದಾರೆ.

2. ಭಗತ್ ಸಿಂಗ್ ಯಾವತ್ತೂ ಬ್ರಿಟೀಷರೊಂದಿಗೆ ಕ್ಷಮೆ ಕೇಳಲು ಒಪ್ಪಲಿಲ್ಲ:
ಬ್ರಿಟೀಷರೊಂದಿಗೆ ಕ್ಷಮೆ ಕೇಳಿ ಜೈಲಿಂದ ಬಿಡುಗಡೆಯಾದ ಸಾವರ್ಕರ್ ಆ ಬಳಿಕ ಯಾವುದೇ ಚಳುವಳಿಯಲ್ಲಿ ಭಾಗವಹಿಸಲಿಲ್ಲ. ಸ್ವಾತಂತ್ರ್ಯ ಹೋರಾಟವನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಆದರೆ ಇದಕ್ಕೆ ತದ್ವಿರುದ್ದ ವಾಗಿದ್ದ 22 ವರ್ಷದ ಯುವಕ ಭಗತ್ ಸಿಂಗ್ ಬ್ರಿಟೀಷರೊಂದಿಗೆ ಕ್ಷಮಾಪಣೆ ಕೇಳಲು ಒಪ್ಪಲಿಲ್ಲ. ಭಗತ್ ಸಿಂಗ್ ಹೊರಗೆ ಬಂದು ಇನ್ನು ಶಸ್ತ್ರಾಸ್ತ್ರ ಬಳಸಲ್ಲ ಎಂದು ಬರೆದು ಕೊಡಬೇಕು ಹಾಗಾದರೆ ಜೈಲಿಂದ ಬಿಡುಗಡೆ ಗೊಳಿಸುವುದಾಗಿ ಬ್ರಿಟೀಷ್ ಸರಕಾರ ಹೇಳಿತ್ತು. ಅರುಣಾ ಅಸಫ್ ಅಲಿ ಕೂಡ ಭಗತ್ ಸಿಂಗ್ ರಲ್ಲಿ ಈ ಬಗ್ಗೆ ಮನವಿ ಮಾಡಿದ್ದರು. ಭಗತ್ ಸಿಂಗ್ ರ ತಂದೆ ಕೂಡ ಅವರ ಮರಣದಂಡನೆ ಶಿಕ್ಷೆಗೆ ತಡೇ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಭಗತ್ ಸಿಂಗ್ ಯಾರ ಮಾತೂ ಕೇಳಲಿಲ್ಲ. ನಗುತ್ತಾ ನೇಣುಗಂಭ ಏರಿದರು.

3. ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಆಂಗ್ಲರ ಸೈನ್ಯಕ್ಕೆ ಜನರನ್ನು ಸೇರಿಸಲು ದೇಶಾದ್ಯಂತ ಸುತ್ತಾಡಿದ ಸಾವರ್ಕರ್:
ಮಹಾತ್ಮಾ ಗಾಂಧೀಜಿ ಬ್ರಿಟೀಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿದಾಗ ದೇಶದ ದೇಶಭಕ್ತ ಯುವಕರು ಹುರುಪಿನಿಂದ ಮುನ್ನುಗ್ಗಿದರು. ಆದರೆ ಸಾವರ್ಕರ್ ಮತ್ತು ಅವರ ಹಿಂಧೂಮಹಾಸಭಾ ಈ ಸಮಯದಲ್ಲಿ ಚಳುವಳಿಗೂ ನಮಗೂ ಸಂಭಂಧವೇ ಇಲ್ಲ ಎಂಬಂತೆ…ದೇಶಾದ್ಯಂತ ಸಂಚರಿಸಿ ಬ್ರಿಟೀಶರ ಸೇನೆಗೆ ಯುವಕರನ್ನು ಸೇರಿಸುವ ಅಭಿಯಾನದಲ್ಲಿ ಪಾಲ್ಗೊಂಡಿತ್ತು.

ಆದರೆ ಇದಕ್ಕೆ ತದ್ವಿರುದ್ದವಾಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಶ್ ಬ್ರಿಟೀಷರ ವಿರುದ್ಧ ಆಜಾದ್ ಹಿಂದ್ ಫೌಜ್ ಎಂಬ ಸೇನೆ ಸ್ಥಾಪಿಸಿದರು. ಇದಕ್ಕಾಗಿ ಯುವಕರನ್ನು ಸೇರಿಸಲು ದೇಶಾದ್ಯಂತ ಸಂಚರಿಸಿದರು. ಯಾರಿಗೆ ಭಾರತ ರತ್ನ ಸಿಗಬೇಕು ನೀವೇ ಯೋಚಿಸಿ ಎಂದು ಅಶುತೋಷ್ ಅವರು ಜನರನ್ನು ಚಿಂತನೆಗೆ ಹಚ್ಚಿದ್ದಾರೆ.

4. ಮಹಾತ್ಮಾ ಗಾಂಧಿಜಿಯವರ ಹತ್ಯೆಯ ಆರೋಪಿಗಳಲ್ಲಿ ಸಾವರ್ಕರ್ ಕೂಡ ಸೇರಿದ್ದರು:
ಮಹಾತ್ಮಾ ಗಾಂಧೀಜಿಯವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಗೈದಾಗ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಸಾವರ್ಕರ್ ರನ್ನು ಅರೆಸ್ಟ್ ಮಾಡಲಾಗಿತ್ತು. ಆ ಬಳಿಕ ಕೂದಳೆಲೆ ಅಂತರದಲ್ಲಿ ಸಾವರ್ಕರ್ ಗಲ್ಲು ಶಿಕ್ಷೆಯಿಂದ ಪಾರಾಗಿದ್ದರು. ಅವರ ಇಬ್ಬರು ಸಾಥಿಗಳಾದ ನಾಥೂರಾಮ್ ಗೋಡ್ಸೆ ಹಾಗೂ ನಾರಾಯಣ್ ಎಂಬ ಇಬ್ಬರಿಗೆ ಗಲ್ಲು ಶಿಕ್ಷೆ ಜಾರಿಯಾಗಿತ್ತು.

ಅಶುತೋಷ್ ಅವರ ವೀಡಿಯೋ ನೋಡಬಯಸುವವರಿಗೆ ಕೆಳಗೆ ಲಿಂಕ್ ಕೊಟ್ಟಿದ್ದೇವೆ…

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *