Monday , August 26 2019
Breaking News
Home / ಗಲ್ಫ್ ವಿಶೇಷ / ಆಕೆ ತನ್ನ ಮಕ್ಕಳ ಹೊಟ್ಟೆ ತುಂಬಿಸಲು ಮದೀನಾದ ಬೀದಿಯಲ್ಲಿ ಟೀ ಮಾರುತ್ತಾಳೆ

ಆಕೆ ತನ್ನ ಮಕ್ಕಳ ಹೊಟ್ಟೆ ತುಂಬಿಸಲು ಮದೀನಾದ ಬೀದಿಯಲ್ಲಿ ಟೀ ಮಾರುತ್ತಾಳೆ

ಸಂದೇಶ ಇ-ಮ್ಯಾಗಝಿನ್: ಇದು ಅಸಹಾಯಕ ತಾಯಿಯೊಬ್ಬಳ ನೈಜ ಜೀವನಗಾಥೆ. ಪತಿ ಮರಣ ಹೊಂದಿದ ನಂತರ ತನ್ನ ಸಣ್ಣವರಾದ ಆರು ಮಕ್ಕಳನ್ನು ಸಾಕಲು ಜುಮಾನಾ ಮಕ್ಕಿ ಯವರು ಹಲವು ಕಡೆ ಕೆಲಸ ಹುಡುಕಿದರು. ಆದರೆ ಆಕೆಗೆ ಎಲ್ಲೂ ಕೆಲಸ ಸಿಗಲಿಲ್ಲ. ಕೊನೆಗೆ ಆಕೆಗೆ ಹೊಳೆದ ಉಪಾಯ ರಸ್ತೆ ಬದಿಯಲ್ಲಿ ಟೀ ಮಾರಾಟ ಮಾಡುವುದು. ಮದೀನಾದ ಕಿಂಗ್ ಅಬ್ದುಲ್ ಅಝೀಝ್ ರಸ್ತೆಯಲ್ಲಿ ಜುಮಾನಾ ಮಕ್ಕಿಯವರು ಕಟ್ಟಿಗೆ ಸೌದೆಗಳನ್ನು ಬಳಸಿ ತಮ್ಮ ಸಣ್ಣ ಗಾಡಿಯಲ್ಲಿ ವಿವಿಧ ರೀತಿಯ ಚಾ, ಕಾಫಿ, ಖಾವಾ ಮುಂತಾದ ಪಾನೀಯಗಳನ್ನು ತಯಾರಿಸಿ ಮಾರುತ್ತಾರೆ. ಜುಮಾನಾ ಮಕ್ಕಿಯವರಿಗೆ ನಾಲಕ್ಕು ಜನ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು. ಪತಿಯ ಮರಣದ ಬಳಿಕ ಎಲ್ಲಾ ಕಡೆ ಕೆಲಸಕ್ಕೆ ಪ್ರಯತ್ನ ಪಟ್ಟು ನಿರಾಸೆಯಾದಾಗ ತನ್ನ ದೊಡ್ಡ ಮಗಳ ಜೊತೆ ತಮ್ಮ ಜೀವನ ನಿರ್ವಹಣೆಗೆ ನಾವಿನ್ನು ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಹೊಳೆದ ಉಪಾಯವೇ ಚಾ ವ್ಯಾಪಾರ.

ಜುಮಾನಾ ಮಕ್ಕಿಯವರ ಇಬ್ಬರು ಹೆಣ್ಣು ಮಕ್ಕಳು ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿದ್ದು ಬಿಡುವಿನ ವೇಳೆಯಲ್ಲಿ ತಾಯಿಗೆ ಸಹಾಯ ಮಾಡುತ್ತಾರೆ. ಸಾಮಾನ್ಯವಾಗಿ ಸೌದಿ ಮಹಿಳೆಯರು ಇಂತಹ ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿ ಕೊಳ್ಳುವುದು ಅಪರೂಪ. ಜುಮಾನಾ ಅವರಿಗೂ ಈ ವ್ಯಾಪಾರ ಶುರು ಮಾಡುವಾಗ ಕುಟುಂಬಸ್ಥರಲ್ಲಿ ಹಲವರು ಆಕ್ಷೇಪಿಸಿದ್ದರಂತೆ. ಆದರೆ ನಾನು ಯಾರನ್ನೂ ಮೋಸ ಮಾಡುತ್ತಿಲ್ಲ. ದುಡಿದು ತಿನ್ನಲು ಹಿಂಜರಿಕೆ ಏಕೆ ಎಂದು ಜುಮಾನ ತಮ್ಮ ನಿರ್ಧಾರವನ್ನು ಬದಲಿಸಲಿಲ್ಲ.a

Check Also

ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

204ಸಂದೇಶ ಇ-ಮ್ಯಾಗಝಿನ್: ಯುಕೆ ರಾಷ್ಟ್ರೀಯಳಾದ ಮ್ಯಾಕ್ಸಿನ್ ಬ್ರಾಡಾಕ್ ಯುಎಇಯಲ್ಲಿ ತಮ್ಮ ಜೀವನದ ಒಂಬತ್ತನೇ ರಮದಾನ್ ಉಪವಾಸ ವೃತಾಚರಣೆ ಮಾಡುತ್ತಿದ್ದಾರೆ. ಇದು …

Leave a Reply

Your email address will not be published. Required fields are marked *