Monday , July 22 2019
Breaking News
Home / ಗಲ್ಫ್ ಸುದ್ದಿ / ಇಸ್ರೇಲ್ ದಾಳಿಗೆ ಹುತಾತ್ಮರಾದ ಫೆಲಸ್ತೀನಿಗಳ ಕುಟುಂಬಸ್ಥರಿಗೆ ಸೌದಿ ರಾಜನಿಂದ ಅಮೋಘ ಕೊಡುಗೆ

ಇಸ್ರೇಲ್ ದಾಳಿಗೆ ಹುತಾತ್ಮರಾದ ಫೆಲಸ್ತೀನಿಗಳ ಕುಟುಂಬಸ್ಥರಿಗೆ ಸೌದಿ ರಾಜನಿಂದ ಅಮೋಘ ಕೊಡುಗೆ

ಸಂದೇಶ ಇ-ಮ್ಯಾಗಝಿನ್: ಇಸ್ರೇಲಿ ಆಕ್ರಮಣದಿಂದ ಹುತಾತ್ಮರಾದವರ ಫೆಲಸ್ತೀನಿ ಕುಟುಂಬದ ಸುಮಾರು 1,000 ಸದಸ್ಯರ ಹಜ್ ಗೆ ಆಥಿತ್ಯ ವಹಿಸುವುದಾಗಿ ಸೌದಿ ರಾಜ ಸಲ್ಮಾನ್ ಆದೇಶ ಹೊರಡಿಸಿದ್ದಾರೆ. ಸೌದಿ ಪ್ರೆಸ್ ಏಜೆನ್ಸಿಯ ಪ್ರಕಾರ, ಸೌದಿ ದೊರೆ ಸಲ್ಮಾನ್ ಅವರ ವಿಶೇಷ ಅತಿಥಿಗಳ ಕೋಟಾದಡಿಯಲ್ಲಿ ಫೆಲಸ್ತೀನಿಯರಿಗೆ ತೀರ್ಥಯಾತ್ರೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಫೆಲಸ್ತೀನ್ ಮತ್ತು ಫೆಲಸ್ತೀನ್ ನಾಗರಿಕರ ಬಗ್ಗೆ ಉದಾರತೆ ಮೆರೆದಿದ್ದಕ್ಕಾಗಿ ಇಸ್ಲಾಮಿಕ್ ವ್ಯವಹಾರಗಳ ಸಚಿವ ಅಬ್ದುಲ್ಲತೀಫ್ ಅಲ್-ಆಶೈಕ್ ದೊರೆ ಸಲ್ಮಾನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

“ಸಚಿವಾಲಯವು ತನ್ನ ವಿವಿಧ ಏಜೆನ್ಸಿಗಳ ಸಹಕಾರದೊಂದಿಗೆ, ವಿಶೇಷ ವಿಮಾನಗಳಲ್ಲಿ ಕರೆತರಲು, ಈಜಿಪ್ಟ್ ಮತ್ತು ಜೋರ್ಡಾನ್‌ನಲ್ಲಿರುವ ಸೌದಿ ರಾಯಭಾರ ಕಚೇರಿಗಳ ಮೂಲಕ ಕಾರ್ಯವಿಧಾನಗಳನ್ನು ಪೂರ್ಣಗೊಳಿಸುವ ಮೂಲಕ ಆದೇಶವನ್ನು ತ್ವರಿತವಾಗಿ ಕಾರ್ಯಗತಗೊಳಿಸಲಾಗುವುದು” ಎಂದು ಅವರು ಹೇಳಿದರು.

ಇದೇ ವರ್ಷ ಫೆಬ್ರವರಿಯಲ್ಲಿ ಫೆಲಸ್ತೀನಿನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸೌದಿ ಅರೇಬಿಯಾವು 60 ಮಿಲಿಯನ್ ಡಾಲರ್ ಮೊತ್ತವನ್ನು ಫೆಲಸ್ತೀನ್ ಹಣಕಾಸು ಸಚಿವಾಲಯದ ಖಾತೆಗೆ ಜಮಾ ಮಾಡಿದೆ. ಇದೀಗ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಫೆಲಸ್ತೀನಿ ಕುಟುಂಬಸ್ಥರಿಗೆ ರಾಜನ ಅತಿಥಿಗಳಾಗಿ ಹಜ್ ಮಾಡಲು ಅವಕಾಶ ಕಲ್ಪಿಸಿದೆ.

Check Also

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

000ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ …

Leave a Reply

Your email address will not be published. Required fields are marked *