Tuesday , April 7 2020
Breaking News
Home / ಗಲ್ಫ್ ವಿಶೇಷ / ಪದವಿ ಪಡೆದ ತನ್ನ ಪತ್ನಿಗೆ ಪತಿ ನೀಡಿದ ಉಡುಗೊರೆ ಏನು ನೋಡಿ

ಪದವಿ ಪಡೆದ ತನ್ನ ಪತ್ನಿಗೆ ಪತಿ ನೀಡಿದ ಉಡುಗೊರೆ ಏನು ನೋಡಿ

ಸಂದೇಶ ಇ-ಮ್ಯಾಗಝಿನ್: ಸಾಮಾನ್ಯವಾಗಿ ಎಲ್ಲಾ ಪತಿಯಂತಿದಿರೂ ತಮ್ಮ ಪತ್ನಿಯರಿಗೆ ಏನಾದರೂ ಉಡುಗೊರೆಕೊಟ್ಟು ಅವರ ಮುಖದಲ್ಲಿ ನಗು ನೋಡಲು ಬಯಸುತ್ತಾರೆ. ಆದರೆ ಇಲ್ಲೊಬ್ಬ ಸೌದಿ ಪತಿ ತನ್ನ ಪತ್ನಿಗೆ ಉಡುಗೊರೆ ನೀಡಲು ಲಕ್ಷಾಂತರ ವ್ಯಯಿಸಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾನೆ. ನಾರ್ಥನ್ ಬಾರ್ಡರ್ ಯುನಿವರ್ಸಿಟಿಯಲ್ಲಿ ಪದವಿ ಪಡೆದ ಪತ್ನಿಯನ್ನು ಹೊಸ ಕಾರಿನಲ್ಲಿ ಪಿಕ್‌ಅಪ್ ಮಾಡಲು ಬಂದ ಪತಿ ಸ್ವಲ್ಪ ದೂರ ಹೋದ ನಂತರ ಆಕೆಯ ಬಳಿ ಇದು ನಾನು ನಿನಗೆ ಕೊಡುವ ಉಡುಗೊರೆ ಅಂತ ಹೇಳಿ ಸರ್ಪ್‌ರೈಸ್ ನೀಡಿದ್ದಾನೆ. ಈ ವಿಷಯವನ್ನು ಪತ್ನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, “ಹೆಂಡತಿ ತನ್ನ ಗಂಡನಿಂದ ಪಡೆಯುವ ಬೆಂಬಲಕ್ಕೆ ಯಾವುದೇ ಮಿತಿಯಿಲ್ಲ.” ಎಂದು ಹೇಳಿದ್ದಾಳೆ. ಇದನ್ನು ಸ್ಥಳೀಯ ವೆಬ್ ಸೈಟ್ ಐನ್ ಅಲ್ ಯವುಮ್ ವರದಿ ಮಾಡಿದೆ.

“ಆಕೆ ತನ್ನ ಪದವಿಯನ್ನು ಪೂರ್ತಿ ಗೊಳಿಸಿದ್ದರಿಂದ, ಆಕೆ ಗಿಂತಲೂ ಹೆಚ್ಚು ಖುಷಿ ಪಡುವವನು ನಾನು. ಇನ್ನೊಬ್ಬ ವ್ಯಕ್ತಿಯ ಮುಖದ ಮೇಲೆ ನಗು ತರಿಸುವವರನ್ನು ದೇವರು ಯಾವಾಗಲೂ ಆಶಿರ್ವದಿಸುತ್ತಾನೆ” ಎಂದು ಪತಿ ಹೇಳಿದ್ದಾಗಿ ವೆಬ್ ಸೈಟ್ ಉಲ್ಲೇಖಿಸಿದೆ. ಪತಿ ಪತ್ನಿಯರ ಈ ಪ್ರೀತಿ ವಿಶ್ವಾಸದ ಬಾಂಧವ್ಯಕ್ಕೆ ಸೋಶಿಯಲ್ ಮೀಡಿಯಾ ತಲೆ ಬಾಗಿದ್ದು, ಇಬ್ಬರ ಬಾಂಧವ್ಯ ಗಟ್ಟಿಯಾಗಿರಲಿ” ಎಂದು ಶುಭಹಾರೈಸಿದ್ದಾರೆ.

Check Also

ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

ಸಂದೇಶ ಇ-ಮ್ಯಾಗಝಿನ್: ಯುಕೆ ರಾಷ್ಟ್ರೀಯಳಾದ ಮ್ಯಾಕ್ಸಿನ್ ಬ್ರಾಡಾಕ್ ಯುಎಇಯಲ್ಲಿ ತಮ್ಮ ಜೀವನದ ಒಂಬತ್ತನೇ ರಮದಾನ್ ಉಪವಾಸ ವೃತಾಚರಣೆ ಮಾಡುತ್ತಿದ್ದಾರೆ. ಇದು …

Leave a Reply

Your email address will not be published. Required fields are marked *