Monday , August 26 2019
Breaking News
Home / ಗಲ್ಫ್ ಸುದ್ದಿ / ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್ ಆದೇಶ ನೀಡಿದ್ದಾರೆ. ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವ ಶೇಖ್ ಅಬ್ದುಲ್ ಲತೀಫ್ ಬಿನ್ ಅಬುಲ್ ಅಝೀಝ್ ಅಲ್-ಅ ಶೇಖ್ ಮಂಗಳವಾರ ಈ ಘೋಷಣೆ ಮಾಡಿದ್ದಾರೆ. ಸೌದಿ ಅರೇಬಿಯಾ ಕ್ರೈಸ್ಟ್ ಚರ್ಚ್ ದಾಳಿಯ ಸಂತ್ರಸ್ತರ ಕುಟುಂಬಗಳಿಗೆ ಹಜ್ ಆತಿಥ್ಯ ವಹಿಸುವುದು ಭಯೋತ್ಪಾದನೆಯನ್ನು ವಿರೋಧಿಸುತ್ತಿರುವ ಸೌದಿ ಅರೇಬಿಯಾ ದೇಶದ ಪ್ರಯತ್ನದ ಒಂದು ಭಾಗವಾಗಿದೆ ಎಂದು ಅವರು ಹೇಳಿದರು. ಸಂತ್ರಸ್ತರ ಕುಟುಂಬ ಸದಸ್ಯರು ರಾಜನ ಅತಿಥಿಯಾಗಿ ಹಜ್ ನಿರ್ವಹಿಸಲು ಬೇಕಾದ ತಯಾರಿಯನ್ನು ಖಚಿತಪಡಿಸಿಕೊಳ್ಳಲು ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಮತ್ತು ನ್ಯೂಜಿಲೆಂಡ್‌ನ ಸೌದಿ ರಾಯಭಾರ ಕಚೇರಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಮಾರ್ಚ್ ತಿಂಗಳಲ್ಲಿ, ನ್ಯೂಜಿಲೆಂಡ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಆಸ್ಟ್ರೇಲಿಯಾ ಮೂಲದ ಭಯೋತ್ಪಾದಕನೋರ್ವ ಕ್ರೈಸ್ಟ್‌ಚರ್ಚ್ ನಗರದಲ್ಲಿ ಶುಕ್ರವಾರ ಪ್ರಾರ್ಥನೆ ವೇಳೆ ಎರಡು ಮಸೀದಿಗಳಿಗೆ ನುಗ್ಗಿ ಗುಂಡಿನ ದಾಳಿ ನಡೆಸಿ ಲೈವ್ ವೀಡಿಯೋ ಮಾಡಿದ್ದ, ಈ ದಾಳಿಯನ್ನು 51 ಮಂದಿ ಸಾವನ್ನಪ್ಪಿದ್ದರು.

Check Also

ಹಜ್: ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮ; ಸಚಿವ ಸಂಪುಟದ ತೀರ್ಮಾನ

000ಸಂದೇಶ ಇ-ಮ್ಯಾಗಝಿನ್: ಹಜ್ ಅನ್ನು ರಾಜಕೀಯಗೊಳಿಸುವ ಯಾವುದೇ ಕೃತ್ಯವು ಸ್ವೀಕಾರಾರ್ಹವಲ್ಲ ಎಂದು ಮಂಗಳವಾರ ಜಿದ್ದಾದಲ್ಲಿ ನಡೆದ ಸೌದಿ ಮಂತ್ರಿ ಪರಿಷತ್ತಿನ …

Leave a Reply

Your email address will not be published. Required fields are marked *