Saturday , April 4 2020
Breaking News
Home / ಗಲ್ಫ್ ಸುದ್ದಿ / ರಮದಾನ್‌ನಲ್ಲಿ ಜನರಿಗೆ ನಮಾಝ್ ನಷ್ಟವಾಗದಿರಲು ಸೌದಿ ಅರೇಬಿಯಾ ಮಾಡಿದೆ ಈ ಉಪಾಯ

ರಮದಾನ್‌ನಲ್ಲಿ ಜನರಿಗೆ ನಮಾಝ್ ನಷ್ಟವಾಗದಿರಲು ಸೌದಿ ಅರೇಬಿಯಾ ಮಾಡಿದೆ ಈ ಉಪಾಯ

ಸಂದೇಶ ಇ-ಮ್ಯಾಗಝಿನ್: 5 ಹೊತ್ತಿನ ನಮಾಝ್ ಎಂಬುದು ಪ್ರತಿಯೊಬ್ಬ ಮುಸ್ಲಿಮರ ದಿನನಿತ್ಯದ ನಿರ್ಬಂಧ ಧಾರ್ಮಿಕ ಕರ್ತವ್ಯಗಳಲ್ಲಿ ಒಂದಾಗಿದೆ. ಐದು ಹೊತ್ತಿನ ನಮಾಝ್‌ಗಳನ್ನು ಅದರ ಕೃತ್ಯವಾದ ಸಮಯಕ್ಕೆ ನಷ್ಟವಾಗದಂತೆ ನಿರ್ವಹಿಸುವುದು ಅದರ ಆಧ್ಯತೆಯಾಗಿದೆ. ಆದರೆ ಹಲವಾರು ಅಗತ್ಯತೆಗಳಿಗಾಗಿ ಹಲವಾರು ಸ್ಥಳಗಳಿಗೆ ಭೇಟಿ ನೀಡುವ ಮುಸ್ಲಿಮರಿಗೆ ತಾವು ಭೇಟಿ ನೀಡಿದ ಸ್ಥಳಗಳಲ್ಲಿ ಅಂಗ ಶುದ್ದಿಗೆ ಬೇಕಾದ ನೀರು ಸ್ಥಳ ಮುಂತಾದ ಅಗತ್ಯತೆಗಳು ಇಲ್ಲದೆ ನಮಾಝ್ ನಿರ್ವಹಿಸಲು ಕಷ್ಟವಾಗಬಹುದು. ಈ ಕಾರಣದಿಂದಾಗಿ ಅವರ ನಮಾಝ್ ಸಮಯ ನಷ್ಟವಾಗುವ ಸಾಧ್ಯತೆ ಇದೆ. ಇಂತಹ ಅವಸ್ಥೆಗಳನ್ನು ತಪ್ಪಿಸಲು ಸೌದಿ ಅರೇಬಿಯಾ ಓಡಾಡುವ ಮಸೀದಿಗಳನ್ನು ಪ್ರಾರಂಭಿಸಿದೆ. ಮೊತ್ತ ಮೊದಲನೇಯದಾಗಿ ಬುರೈದಾದ ಶರ್ಕ್ ಜಾಲಿಯಾತ್ ಎಂಬ ಇಸ್ಲಾಮಿಕ್ ಸಂಸ್ಥೆಯ ಅಧೀನದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಸುಸಜ್ಜಿತ ಲಾರಿಯೊಂದರಲ್ಲಿ ನೀರು, ಕಾರ್ಪೆಟ್ ಮುಂತಾದ ಅಗತ್ಯ ವಸ್ತುಗಳನ್ನು ಇಟ್ಟು ಅಗತ್ಯವಿರುವ ಜಾಗಕ್ಕೆ ಭೇಟಿ ನೀಡಿ ಜನರಿಗೆ ನಮಾಝ್ ನಿರ್ವಹಿಸಲು ಸಹಾಯ ಮಾಡಲಾಗುತ್ತಿದೆ.

Check Also

ಸೌದಿಗೆ ತೆರಳಿ ಅತ್ಯಾಚಾರ ಆರೊಪಿಯನ್ನು ಬಂಧಿಸಿದ ಕೇರಳದ ಮಹಿಳಾ ಸೂಪರ್ ಕಾಪ್

ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ಅಪರಾಧ ಮಾಡಿ ವಿದೇಶಕ್ಕೆ ಪರಾರಿಯಾದವರನ್ನು ಪುನಃ ಕರೆತಂದು ಇಲ್ಲಿನ ಕಾನೂನಿನ ಮುಂದೆ ಹಾಜರಿ ಪಡಿಸಿದ್ದು ಬಹಳ …

Leave a Reply

Your email address will not be published. Required fields are marked *