Monday , August 26 2019
Breaking News
Home / ಅಂತಾರಾಷ್ಟ್ರೀಯ / ಸೌದಿ ಅರೇಬಿಯಾ ಈ ಬಾರಿ ತಪ್ಪಾಗಿ ಈದ್ ಆಚರಿಸಿದೆ ಎಂದು ಆರೋಪಿಸಿದ ಪಾಕಿಸ್ತಾನಿಗಳು

ಸೌದಿ ಅರೇಬಿಯಾ ಈ ಬಾರಿ ತಪ್ಪಾಗಿ ಈದ್ ಆಚರಿಸಿದೆ ಎಂದು ಆರೋಪಿಸಿದ ಪಾಕಿಸ್ತಾನಿಗಳು

ಸಂದೇಶ ಇ-ಮ್ಯಾಗಝಿನ್: ಈ ಬಾರಿ ಸೌದಿ ಅರೇಬಿಯಾ ಭಾರತ ಹಾಗೂ ಪಾಕಿಸ್ತಾನದಕ್ಕಿಂತ ಒಂದು ದಿನ ಮುಂಚಿತವಾಗಿ ಈದ್ ಆಚರಿಸಿದ್ದು, ಜೂನ್ 3 ರಂದು ಸೌದಿ ಅರೇಬಿಯಾದಲ್ಲಿ ಚಂದ್ರ ದರ್ಶನವಾಗಿದೆ ಎಂದು ಹೇಳಲಾಗಿತ್ತು. ಅದರಂತೆ ಸೌದಿ ಅರೇಬಿಯಾದಲ್ಲಿ ಮತ್ತು ಯುಎಇ , ಕತರ್ ಮುಂತಾದ ಎಲ್ಲಾ ಜಿಸಿಸಿ ದೇಶ ಗಳು ಜೂನ್ 4 ರಂದು ಈದ್ ಆಚರಿಸಿದ್ದವು. ಅರಬ್ ರಾಷ್ಟ್ರಗಳ ಪೈಕಿ ಓಮಾನ್ ಮಾತ್ರ ಎಂದಿನ ಹಾಗೆ ಈ ಗುಂಪಿನಿಂದ ಹೊರಗುಳಿದು ಜೂನ್ 5 ರಂದು ಈದ್ ಆಚರಿಸಿತ್ತು. ಇದೀಗ ಸೌದಿ ಅರೇಬಿಯಾದಲ್ಲಿ ಜೂನ್ ಮೂರರಂದು ಚಂದ್ರ ದರ್ಶನವೇ ಆಗಿರಲಿಲ್ಲ. ಸೌದಿ ಸರಕಾರದಿಂದ ದೊಡ್ಡ ತಪ್ಪಾಗಿದೆ. ಒಂದು ಉಪವಾಸವನ್ನು ಕಳೆದುಕೊಂಡಿರುವ ಕಾರಣ ಸೌದಿ ಸರಕಾರ ಇದಕ್ಕಾಗಿ ಕಫ್ಪಾರ ಕೂಡ ನೀಡಿದೆ ಎಂದು ಪಾಕಿಸ್ತಾನದ ನ್ಯೂಸ್ ಚಾನಲ್ ಗಳು ವರದಿ ಮಾಡಿದೆ.

ಆದರೆ ಸೌದಿ ಅರೇಬಿಯಾ, ಯುಎಇ, ಕತರ್, ಕುವೈತ್ ಸೇರಿದಂತೆ ಯಾವುದೇ ಅರಬ್ ದೇಶಗಳ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿಲ್ಲ. ಪಾಕಿಸ್ತಾನದ ಎಲ್ಲಾ ಅಧಿಕೃತ ಸುದ್ದಿ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿದೆ ಎಂಬುದು ವಿಶೇಷ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *