ಸಂದೇಶ ಇ-ಮ್ಯಾಗಝಿನ್: ಅಮೆರಿಕನ್ ಮೂಲದ ಮಹಿಳೆಯೊಬ್ಬರು ತನ್ನ ಮಾಜಿ ಪತಿ ತನ್ನ ಬಿಕಿನಿ ಫೋಟೋಗಳನ್ನು ಉಲ್ಲೇಖಿಸಿ ಆಕೆ ಮಕ್ಕಳನ್ನು ಸಾಕಲು ಯೋಗ್ಯಳಲ್ಲ ಎಂದು ವಾದ ಮಾಡಿದ್ದರಿಂದ ಕಾನೂನು ಹೋರಾಟದಲ್ಲಿ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ. ಬೆಥನಿ ವಿಯೆರಾಳ ಮಾಜಿ ಪತಿ ಆಕೆಯ ಬಿಕಿನಿಯ ಯೋಗ ಮಾಡುವ ಫೋಟೋ ಮತ್ತು ಕೂದಲು ತೆರೆದಿಟ್ಟ ಫೋಟೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ತನ್ನ ಹಾಗೂ ಬೆಥನಿ ವಿಯೆರಾಳ ಮಗಳಾದ ಝೈನಾ( 4 ವರ್ಷ)ಳನ್ನು ಬೆಳೆಸಲು ಬೆಥನಿ ಅನರ್ಹಳು ಎಂದು ನ್ಯಾಯಾಧೀಶರ ಮುಂದೆ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆದರೆ ತನ್ನ ವಾದದಲ್ಲಿ ಬೆಥನಿ ಈ ಫೋಟೋಗಳನ್ನು ಯುಎಸ್ ನಲ್ಲಿ ಕ್ಲಿಕ್ ಮಾಡಲಾಗಿದೆ ಮತ್ತು ಇದನ್ನು ನನ್ನ ಮಾಜಿ ಪತಿ ಸಾಮಾಜಿಕ ತಾಣದ ಖಾತೆಗಳಿಂದ ತೆಗೆದಿದ್ದಾರೆ ಎಂದು ಹೇಳಿದ್ದಾರೆ. ಆದರೆ ಸಂಪ್ರದಾಯವಾದಿ ಸೌದಿ ನ್ಯಾಯಾಲಯ ಆಕೆಯ ವಾದಕ್ಕೆ ಮನ್ನಣೆ ನೀಡಿಲ್ಲ. ಸೌದಿಯಲ್ಲಿ ನಿಷೇಧಿತ ವಸ್ತ್ರಧಾರಣೆ ಮತ್ತು ಮಾದಕ ವ್ಯಸನದ ಕಾರಣವನ್ನು ನೀಡಿ ಮಹಿಳೆ ತನ್ನ ಮಗಳನ್ನು ಸಾಕಲು ಅರ್ಹಳಲ್ಲ ಎಂದು ತೀರ್ಪು ನೀಡಿದೆ.
ಸೌದಿ ಅರೇಬಿಯಾದ ಕಾನೂನಿನ ಪ್ರಕಾರ ತಾಯಂದಿರಿಗೆ ಸಾಮಾನ್ಯವಾಗಿ ಗಂಡು ಮಕ್ಕಳನ್ನು 9 ವರ್ಷ ವಯಸ್ಸಿನವರೆಗೆ ಮತ್ತು ಹೆಣ್ಣುಮಕ್ಕಳನ್ನು 7 ವರ್ಷದವರೆಗೆ ನೀಡಲಾಗುತ್ತದೆ. ಆ ಅವಧಿಯಲ್ಲಿ ತಂದೆಯಂದಿರುವ ಮಕ್ಕಳ ಕಾನೂನು ಪಾಲಕರಾಗಿರುತ್ತಾರೆ. ಇದೀಗ ನ್ಯಾಯಾಲಯದ ದಾಖಲೆಗಳ ಪ್ರಕಾರ, ಬೆಥನಿ ವಿಯೆರಾ ಅವರ ಮಾಜಿ ಪತಿಗೆ ಅನುಕೂಲಕರ ತೀರ್ಪು ದೊರಕಿದ್ದು, ಮಗಳನ್ನು ಸಾಕುವ ಜವಾಬ್ದಾರಿ ತಾಯಿ ಕಳೆದುಕೊಂಡಿದ್ದಾರೆ.