Monday , September 16 2019
Breaking News
Home / ರಮದಾನ್ ವಿಶೇಷಾಂಕ / ಕಳೆದ 10 ವರ್ಷಗಳಿಂದ ಪ್ರತೀವರ್ಷ ರಂಝಾನ್ ವೃತ ಅನುಷ್ಟಿಸುತ್ತಿದ್ದಾರೆ ಸತೀಶ್ ಬಾಬು

ಕಳೆದ 10 ವರ್ಷಗಳಿಂದ ಪ್ರತೀವರ್ಷ ರಂಝಾನ್ ವೃತ ಅನುಷ್ಟಿಸುತ್ತಿದ್ದಾರೆ ಸತೀಶ್ ಬಾಬು

ಸಂದೇಶ ಇ-ಮ್ಯಾಗಝಿನ್: ರಂಝಾನ್ ಅಂದ್ರೆ ಹಾಗೆ ಇದರ ಬಗ್ಗೆ ಮುಸ್ಲಿಮೇತರರಿಗೂ ಒಲವಿದೆ. ಕೆಲವು ಕಡೆಗಳಲ್ಲಿ ಮುಸ್ಲಿಮರ ಹಾಗೆ ಮುಸ್ಲಿಮೇತರರೂ ರಂಝಾನ್ ಉಪವಾಸ ಆಚರಿಸುತ್ತಾರೆ. ಇದಕ್ಕೆ ಬೇರೆ ಬೇರೆ ಕಾರಣ ಇರಬಹುದು. ಅಂತೂ ನಾವು ಅಂತಹ ತುಂಬಾ ಜನರನ್ನು ಈಗಾಗಲೇ ನೋಡಿದ್ದೇವೆ. ಅಂತಹ ಜನರಲ್ಲೇ ಒಬ್ಬರಾದ ಕೇರಳ ಮೂಲದ ಗಲ್ಫ್ ಪ್ರವಾಸಿ ಸತೀಶ್ ಬಾಬು ಸುಮಾರು 10 ವರ್ಷಗಳಿಂದ ಉಪವಾಸ ವೃತ ಆಚರಿಸುತ್ತಾ ಇದ್ದಾರೆ. ಸೌದಿ ಅರೇಬಿಯಾದ ಜಿದ್ದಾದ ಶರಫಿಯಾದಲ್ಲಿ ಕುಕ್ ಆಗಿರುವ ಸತೀಶ್ ಬಾಬು ಮೊದ ಮೊದಲು ತಮ್ಮ ಮುಸ್ಲಿಮ್ ಸ್ನೇಹಿತರ ಜೊತೆ ಗೂಡಿ ತಾನೂ ಉಪವಾಸ ವೃತ ಆಚರಿಸುವುದಕ್ಕೆ ಪ್ರಾರಂಭಿಸಿದರು. ಆ ಬಳಿಕ ಉಪವಾಸದಿಂದ ತನಗೆ ದೈಹಿಕ ಆರೋಗ್ಯ ಹಾಗೂ ಮನಶ್ಶಾಂತಿ ಸಿಗುತ್ತಿದೆ ಎಂಬುದನ್ನು ಅರಿತ ಸತೀಶ್ ಬಾಬು ಕಳೆದ 10 ವರ್ಷಗಳಿಂದ ಪ್ರತೀ ವರ್ಷ ರಂಝಾನ್‌ನಲ್ಲಿ ಉಪವಾಸ ವೃತ ಆಚರಿಸುತ್ತಿದ್ದಾರೆ.

ಉಪವಾಸವನ್ನು ಒಂದು ಉತ್ತಮ ಅನುಭವ ಹಾಗೂ ದೈಹಿಕ ಉಲ್ಲಾಸ ಎಂದು ಬಣ್ಣಿಸಿರುವ ಸತೀಶ್ ತನ್ನ ಗೆಳೆಯರಾದ ಸಿದ್ದೀಕ್, ಅನ್ವರ್, ನಾಸರ್ ಮುಂತಾದವರ ಜೊತೆಗೂಡಿ ಸಹರಿಗೆ ಎದ್ದೇಳುತ್ತಾರೆ. ಆನಂತರ ಮಗ್ರಿಬ್ ಆಝಾನ್‌ಗೆ ಮುಸ್ಲಿಮರ ಹಾಗೆ ಇಫ್ತಾರ್ ಮಾಡುತ್ತಾರೆ. ಸದ್ಯ ಇದೀಗ ಈದ್ ಹಬ್ಬಕ್ಕೆ ಊರಿಗೆ ಹೊರಡಲು ಅಣಿಯಾಗುತ್ತಿದ್ದಾರೆ ಸತೀಶ್ ಬಾಬು.

Check Also

ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

001ಸಂದೇಶ ಇ-ಮ್ಯಾಗಝಿನ್: ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಎದೆಯುಬ್ಬಿಸಿ ನಿಲ್ಲುವುದು ತನ್ನ ಜಾತ್ಯಾತೀಯ, ಧರ್ಮಾತೀತ ಪರಂಪರೆಯ ಕಾರಣಕ್ಕಾಗಿ, ಈ …

Leave a Reply

Your email address will not be published. Required fields are marked *