Tuesday , April 7 2020
Breaking News
Home / ಮಹಿಳೆ / ಅಂಗವಿಕಲ ಅಮೀರ್ ಬಾಳನ್ನು ಬೆಳಗಿಸಿ ತ್ಯಾಗಮಯಿಯಾದ ಸಹ್ಲಾ

ಅಂಗವಿಕಲ ಅಮೀರ್ ಬಾಳನ್ನು ಬೆಳಗಿಸಿ ತ್ಯಾಗಮಯಿಯಾದ ಸಹ್ಲಾ

ಸಂದೇಶ ಇ-ಮ್ಯಾಗಝಿನ್: ಮಲಪ್ಪುರಂ ಜಿಲ್ಲೆಯ ಕಲಿಕಾವುವಿನ ಕಲ್ಲಮೂಲಾ ಅಮೀರ್ ಅವರು ಏಳು ವರ್ಷಗಳ ಹಿಂದೆ ಅಡಿಕೆ ಮರದಿಂದ ಬಿದ್ದು ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಮೂರು ವರ್ಷ ಕೇವಲ ಜೀವಂತ ಶವದ ಹಾಗೆ ಅಮೀರ್ ಹತಾಶವಾಗಿ ಜೀವನಕ್ಕಾಗಿ ಹೆಣಗಾಡುತ್ತಿರುವ ಹಾಸಿಗೆಯಲ್ಲಿಯೇ ಮಲಗಿದ್ದರು. ಆದಾಗ್ಯೂ ಯಾರೊಬ್ಬರೂ ನಿರೀಕ್ಷಿಸದ ರೀತಿಯಲ್ಲಿ ಕೊನೆಗೂ ಅಮೀರ್ ತಕ್ಕ ಮಟ್ಟಿಗೆ ಇದೀಗ ಚೇತರಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಹುಟ್ಟು ಅಂಗವಿಕಲರಾಗಿರುವ ರಝಾಕ್ ಹಾಗೂ ಅಮೀರ್ ‘ಥನಾಲ್’ ವಾಟ್ಸಾಪ್ ಗುಂಪಿನ ಸದಸ್ಯರು. ಈ ಗುಂಪು ದೈಹಿಕ ದೌರ್ಬಲ್ಯದಿಂದ ಬಳಲುತ್ತಿರುವ ಜನರನ್ನು ಸಂಪರ್ಕಿಸಿ ಅವರಿಗೆ ಸಹಾಯ ಒದಗಿಸುವ ಒಂದು ಸಹೃದಯಿ ಗೆಳೆಯರ ಸಾಮಾಜಿಕ ಜಾಲತಾಣದ ಗುಂಪಾಗಿದೆ. ರಝಾಕ್ ರ ಮಗಳಾದ ಸಹ್ಲಾಳನ್ನು ಇದೀಗ ಅಮೀರ್ ವರಿಸಿದ್ದಾರೆ. ಸಹ್ಲಾ ಅಂಗವಿಕಲೆಯಲ್ಲ, ಎಲ್ಲರ ಹಾಗೆ ದೈಹಿಕ ದೌರ್ಬಲ್ಯಗಳಿಲ್ಲದ ಆರೋಗ್ಯವಂತ ಯುವತಿ, ಅದಾಗ್ಯೂ ಸಹ್ಲಾ ಅಮೀರ್ ರನ್ನು ವರಿಸಿದ್ದಾಳೆ.

ಥನಾಲ್ ಸದಸ್ಯರು ಇಬ್ಬರ ವಿವಾಹ ಪ್ರಸ್ತಾಪವನ್ನು ರಝಾಕ್ ಮುಂದೆ ಪ್ರಸ್ತಾಪಿಸಿದ್ದು, ಬಳಿಕ ಸಹ್ಲಾ ಮತ್ತು ರಝಾಕ್ ಮದುವೆಗೆ ಒಪ್ಪಿದರು. ಮದುವೆಗೆ ಒಪ್ಪಿದ ಬಗ್ಗೆ ಸಹ್ಲಾ, ದುರ್ಬಲಗೊಂಡ ದೇಹದಲ್ಲೂ ಪ್ರೀತಿಸುವ ಹೃದಯವಿದೆ. ತನ್ನ ತಂದೆಯನ್ನು ಶುಶ್ರೂಷೆ ಮಾಡಿದ ಅನುಭವ ಇರುವುದರಿಂದ ಅಮೀರ್‌ನನ್ನು ನೋಡಿಕೊಳ್ಳುವುದು ನನಗೆ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಇವರಿಬ್ಬರ ನಿಕಾಹ್ ಅನ್ನು ಕರುವಾರಕ್ಕುಂಡು ಮಸೀದಿಯಲ್ಲಿ ಶುಕ್ರವಾರ ನಡೆಸಲಾಯಿತು.

Check Also

ತಂದೆ ಇಲ್ಲದೆ ಬೆಳೆದ ಇಲ್ಮಾ ಅಫ್ರೋಝ ಅವರ ಯಶಸ್ವಿ IPS ಪಯಣ

ಸಂದೇಶ ಇ-ಮ್ಯಾಗಝಿನ್: ನಾನು ಬಡ ಕುಟುಂಬದಲ್ಲಿ ಹುಟ್ಟಿದ್ದು, ನನ್ನ ಬಡತನವೇ ನನ್ನ ಸಾಧನೆಗೆ ಅಡ್ಡಿ ಇಲ್ಲದಿದ್ದಲ್ಲಿ ಸಾಧನೆ ಮಾಡುತ್ತಿದ್ದೆ ಎಂದು …

Leave a Reply

Your email address will not be published. Required fields are marked *