Tuesday , October 15 2019
Breaking News
Home / ವೀಡಿಯೋ / ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ ಸುಳಿಗೆ ಸಿಳುಕಿದ್ದಾರೆ. ಗುರುವಾರ ಮಾಲೇಗಾಂವ್ ಸ್ಫೋಟ ಪ್ರಕರಣದ ವಿಚಾರಣೆಗಾಗಿ ಮುಂಬೈ ಎನ್‌ಐಎ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ಅಧಿಕ ರಕ್ತದ ಒತ್ತಡ ಹಾಗೂ ಹೊಟ್ಟೆ ನೋವಿನ ಕಾರಣ ಹೇಳಿ ವಿಚಾರಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಂಡಿದ್ದರು. ಆದರೆ ನಿನ್ನೆ ಮಧ್ಯಾಹ್ನ ಭೋಪಾಲ್‌ನಲ್ಲಿ ನಡೆದ ಮಹಾರಾಣಾ ಪ್ರತಾಪ್ ಅವರ ಜಯಂತಿಯಲ್ಲಿ ಭಾಗವಹಿಸಿ ಸಾಧ್ವಿಯವರು ಘೋಷಣೆ ಕೂಗಿದ್ದಾಗಿ ಆಜ್ ತಕ್ ವರದಿ ಮಾಡಿದೆ. ಆ ನಂತರ ಸಂಜೆ ಬಿಜೆಪಿ ಮುಖಂಡರ ಜೊತೆ ಗೂಡಿ ಭೋಪಾಲದ ಖಾಝಿ ಸೈಯ್ಯದ್ ಮುಸ್ತಾಕ್ ಅಲಿ ನದ್ವಿಯವರ ಮನೆಗೆ ಹೋಗಿ ಈದ್ ಶುಭಾಶಯ ಹೇಳಿದರು. ಈ ಸಂದರ್ಭದಲ್ಲಿ ಸಾಧ್ವಿ ಪ್ರಜ್ಞಾ ಖಾಝಿಯವರಿಗೆ ಸ್ವೀಟ್ಸ್ ಹಾಗೂ ಡ್ರೈಪ್ರೂಟ್ಸ್ ಉಡುಗೊರೆಯಾಗಿ ನೀಡಿದರು. ಬಳಿಕ ಮಕ್ಕಳೊಂದಿಗೆ ಈದ್ ಸ್ವೀಟ್ ತಿನ್ನಿಸಿ ಖುಷಿ ಹಂಚಿಕೊಂಡರು. ಮಾಲೇಗಾಂವ್ ಪ್ರಕರಣದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಕನಿಷ್ಠ ವಾರಕ್ಕೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಲು ಎಲ್ಲ ಆರೋಪಿಗಳಿಗೆ ಆದೇಶ ನೀಡಿದೆ ಎಂದು ಗಮನಿಸಬೇಕಾಗಿದೆ.

साध्वी प्रज्ञा ने ईद के दिन काजी के घर पर क्या किया? #NewsTak

साध्वी प्रज्ञा ने ईद के दिन काजी के घर पर क्या किया? #NewsTak

Posted by News Tak on Wednesday, 5 June 2019

Check Also

ಟೋಪಿ ಧರಿಸಿ ಈದ್ ಶುಭಾಶಯ ಕೋರಿದ ಪೊಲೀಸ್; ಕ್ರಮಕ್ಕೆ ಆಗ್ರಹಿಸಿದ ರಾಜಾಸಿಂಗ್

000ಸಂದೇಶ ಇ-ಮ್ಯಾಗಝಿನ್: ತನ್ನ ಮುಸ್ಲಿಮ್ ವಿರೋಧಿ ನಿಲುವು ಹಾಗೂ ವಿವಾದಿತ ಹೇಳಿಕೆಗಳಿಂದಲೇ ಹೆಚ್ಚು ಪ್ರಚಾರದಲ್ಲಿರುವ ಹೈದರಾಬಾದ್ ಘೋಷಾಮಹಲ್ ಶಾಸಕ ರಾಜಾಸಿಂಗ್ …

Leave a Reply

Your email address will not be published. Required fields are marked *