Thursday , June 20 2019
Breaking News
Home / ಭಾರತೀಯ ಮುಸ್ಲಿಮರು / ಮಹಿಳೆಯರ ಮಸೀದಿ ಪ್ರವೇಶ: ಕೋರ್ಟ್ ಏನೇ ಹೇಳಿದರೂ ನಮ್ಮ ತೀರ್ಮಾನ ಇದೇ ಆಗಿರುತ್ತೆ; ಕೇರಳ ಸುನ್ನಿ ಉಲೆಮಾಗಳ ಸ್ಪಷ್ಟನೆ

ಮಹಿಳೆಯರ ಮಸೀದಿ ಪ್ರವೇಶ: ಕೋರ್ಟ್ ಏನೇ ಹೇಳಿದರೂ ನಮ್ಮ ತೀರ್ಮಾನ ಇದೇ ಆಗಿರುತ್ತೆ; ಕೇರಳ ಸುನ್ನಿ ಉಲೆಮಾಗಳ ಸ್ಪಷ್ಟನೆ

ಸಂದೇಶ ಇ-ಮ್ಯಾಗಝಿನ್: ಮುಸ್ಲಿಮ್ ಮಹಿಳೆಯರ ಮಸೀದಿ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಮಂಗಳವಾರ ಪುಣೆ ಮೂಲದ ಮುಸ್ಲಿಮ್ ದಂಪತಿಗಳು ಹೈಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರಿಂ ಕೋರ್ಟಿನ ಜಸ್ಟಿಸ್ ಬೋಬಡೆ ಹಾಗೂ ಜಸ್ಟಿಸ್ ಅಬ್ದುಲ್ ನಝೀರ್ ಅವರ ದ್ವಿಸದಸ್ಯ ಪೀಠವು ಈ ವಿಚಾರವಾಗಿ ಕೇಂದ್ರ ಸರ್ಕಾರ, ಮುಸ್ಲಿಮ್ ಪರ್ಸನಲ್ ಲಾಬೋರ್ಡ್ ಹಾಗೂ ರಾಷ್ಟ್ರೀಯ ಮಹೀಳಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಇದೀಗ ಈ ವಿಚಾರದಲ್ಲಿ ರಂಗ ಪ್ರವೇಶ ಮಾಡಿರುವ ಕೇರಳ ಸಮಸ್ತದ ಸುನ್ನಿ ವಿದ್ವಾಂಸರು “ಮುಸ್ಲಿಮರ ಧಾರ್ಮಿಕ ವಿಷಯದಲ್ಲಿ ಕೋರ್ಟಿನ ಮಧ್ಯಪ್ರವೇಶವನ್ನು ನಾವು ಒಪ್ಪಲಾರೆವು, ಮುಸ್ಲಿಮ್ ಮಹಿಳೆಯರು ಮನೆಯ ಒಳಗೆ ನಮಾಝ್ ನಿರ್ವಹಿಸಬೇಕು. ಇದು 1,400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್(ಸ)ರವರು ಹೇಳಿದ ಮಾತಾಗಿದೆ ನಾವು ಅದಕ್ಕೆ ಬದ್ದರಾಗಿದ್ದೇವೆ. ಶಬರಿ ಮಲೆ ವಿಷಯದಲ್ಲೂ ನಮ್ಮ ಅಭಿಪ್ರಾಯ ಇದೇ ಆಗಿತ್ತು” ಎಂದು ಸಮಸ್ತದ ಜನರಲ್ ಸೆಕೆರೆಟರಿ ಕೆ. ಆಲಿಕುಟ್ಟಿ ಮುಸ್ಲಿಯಾರ್ ತಿಳಿಸಿದ್ದಾರೆ.

ಆಲ್ ಇಂಡಿಯಾ ಸುನ್ನಿ ಜಮೀಯತುಲ್ ಉಲೆಮಾದ ಜನರಲ್ ಸೆಕೆರೆಟರಿ ಎ.ಪಿ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ, “ನ್ಯಾಯಾಲಯವು ಧಾರ್ಮಿಕ ವಿಷಯಗಳಲ್ಲಿ ಕೈ ಹಾಕುವ ಮುನ್ನ ಧಾರ್ಮಿಕ ವಿದ್ವಾಂಸರೊಂದಿಗೆ ಸಮಾಲೋಚಿಸಬೇಕು. ಹಾಗೂ ಮುಸ್ಲಿಮ್ ಮಹಿಳೆಯರು ಮಕ್ಕಾದ ಮಸೀದಿಗೆ ಉಮ್ರಾ ಹಜ್ಜ್ ನಿರ್ವಹಿಸುವ ಸಲುವಾಗಿ ಪ್ರವೇಶಿಸುತ್ತಾರೆ. ಅದು ಇತರ ಮಸೀದಿಗಳಿಗೆ ಅನ್ವಯವಾಗಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Check Also

ಮುಂಬಯಿ: ತೀರದ ವರನ ಕಡೆಯವರ ವರದಕ್ಷಿಣೆ ದಾಹ; ವಧುವಿನ ತಂದೆ ತೆಗೆದರು ಮಹತ್ವದ ನಿರ್ಧಾರ

000ಸಂದೇಶ ಇ-ಮ್ಯಾಗಝಿನ್: ವರನ ಕಡೆಯವರ ಹೆಚ್ಚಿನ ವರದಕ್ಷಿಣೆ ದಾಹದಿಂದ ರೋಸಿ ಹೋದ ವಧುವಿನ ತಂದೆಯೊಬ್ಬರು ಮದುವೆಯನ್ನೇ ರದ್ದುಮಾಡಿ ಮಾಡಿದ ಪ್ರಕರಣ …

Leave a Reply

Your email address will not be published. Required fields are marked *