Monday , August 26 2019
Breaking News
Home / ಅಂತಾರಾಷ್ಟ್ರೀಯ / ರೋಹಿಂಗ್ಯಾಗಳ ಮೇಲೆ ನಡೆದ ದೌರ್ಜನ್ಯವನ್ನು ಬಯಲಿಗೆಳೆದಿದ್ದ ರಾಯ್ಟರ್ಸ್‌ನ 2 ಪತ್ರಕರ್ತರಿಗೆ 511 ದಿನಗಳ ಬಳಿಕ ಜಾಮೀನು

ರೋಹಿಂಗ್ಯಾಗಳ ಮೇಲೆ ನಡೆದ ದೌರ್ಜನ್ಯವನ್ನು ಬಯಲಿಗೆಳೆದಿದ್ದ ರಾಯ್ಟರ್ಸ್‌ನ 2 ಪತ್ರಕರ್ತರಿಗೆ 511 ದಿನಗಳ ಬಳಿಕ ಜಾಮೀನು

ಸಂದೇಶ ಇ-ಮ್ಯಾಗಝಿನ್: 2017ರಲ್ಲಿ ಮಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದ ಮೇಲೆ ಅಲ್ಲಿನ ಸೇನೆ ಹಾಗೂ ಬೌದ್ಧ ಧರ್ಮೀಯ ಉಗ್ರಗಾಮಿಗಳು ನಡೆಸಿದ ದೌರ್ಜನ್ಯ ಹಾಗೂ ಸಮೂಹ ಕೊಲೆಗಳನ್ನು ಮೊತ್ತ ಮೊದಲಬಾರಿಗಶೊರ ಜಗತ್ತಿನ ಮುಂದೆ ತಂದಿಟ್ಟ ಕಾರಣ ಬಂಧನಕ್ಕೀಡಾಗಿದ್ದ ರಾಯ್ಟರ್ಸ್ ಸುದ್ದಿ ಸಂಸ್ಥೆಯ ಇಬ್ಬರು ಪತ್ರಕರ್ತರನ್ನು ಮಾನ್ಮಾರ್ ಸರಕಾರವು ಕೊನೆಗೂ 511 ದಿನಗಳ ಬಳಿಕ ಬಿಡುಗಡೆ ಮಾಡಿದೆ. ಎಪ್ರಿಲ್ 17 ರಂದು ಪ್ರಾರಂಭವಾಗುವ ಮಾನ್ಮಾರ್ ನವ ವರ್ಷದ ಮುಂಚಿತವಾಗಿ ಪತ್ರಕರ್ತರಿಗೆ ಮಾಫಿ ನೀಡಲು ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ. ಈ ಇಬ್ಬರು ಪತ್ರಕರ್ತರ ಮೇಲೆ 2017 ರ ರೋಹಿಂಗ್ಯನ್ ದೌರ್ಜನ್ಯದ ಸಂದರ್ಭದಲ್ಲಿ ಸರಕಾರದ ಗೌಪ್ಯತೆಯ ಕಾನೂನನ್ನು ಮುರಿದ ಆರೋಪದಲ್ಲಿ ಮೊಕದ್ದಮೆ ನಡೆದು, ಇಬ್ಬರಿಗೂ ತಲಾ 8 ವರ್ಷಗಳ ಕಠಿಣ ಸಜೆ ನೀಡಲಾಗಿತ್ತು.

ಬಿಡುಗಡೆಯಾದ ಪತರಕರತ್ರಲ್ಲಿ ಒಬ್ಬರಾದ ‘ವಾ’ ಎಂಬವರು ನಾವು ಯಾವುದೇ ಕಾನೂನು ಮುರಿದಿಲ್ಲ. ನಾವು ಪತ್ರಕರ್ತರಾಗಿ ನಮ್ಮ ಕೆಲಸ ನಿರ್ವಹಿಸಿದ್ದೇವೆಯೇ ಹೊರತು ಇನ್ನೇನೂ ಮಾಡಿಲ್ಲ. ಇದೀಗ ನನ್ನ ಕೆಲಸಕ್ಕೆ ಮರಳಲು ಕಾತರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಮಾನ್ಮಾರ್ ಸರಕಾರದ ಕ್ರಮವನ್ನು ರಾಯ್ಟರ್ಸ್ ಸ್ವಾಗತಿಸಿದೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *