Sunday , January 26 2020
Breaking News
Home / ವಿಶೇಷ / 30 ವರ್ಷಗಳ ನಂತರ ದುಬಾಯಿಯಿಂದ ಊರಿಗೆ ಬರುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಮೃತ್ಯು

30 ವರ್ಷಗಳ ನಂತರ ದುಬಾಯಿಯಿಂದ ಊರಿಗೆ ಬರುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಮೃತ್ಯು

ಸಂದೇಶ ಇ-ಮ್ಯಾಗಝಿನ್: ವಿಧಿಯ ಲೀಲೆಯನ್ನು ಯಾರೂ ಬಲ್ಲವರಿಲ್ಲ ಎನ್ನುತ್ತಾರೆ. ಈ ಮಾತು ಅಕ್ಷರಶಃ ಸತ್ಯ. ಆ ವ್ಯಕ್ತಿ ದುಬಾಯಿಯಲ್ಲಿ 30 ವರ್ಷಗಳಿಂದ ದುಡಿಯುತ್ತಿದ್ದರು. ಒಮ್ಮೆಯೂ ಊರಿಗೆ ಬಂದಿರಲಿಲ್ಲ. ನಿನ್ನೆ ತನ್ನ ಹೆಂಡತಿ ಮಕ್ಕಳನ್ನು ನೋಡಲು ಊರಿಗೆ ಬಂದರು. ಆದರೆ ಮನೆಯ ಕೆಲವೇ ಕೆಲವು ಕಿಲೋಮೀಟರ್ ದೂರದಲ್ಲಿ ಅಪಘಾತದಿಂದ ಮೃತರಾದರು. ಕೇರಳದ ರಾಜನ್ ಪಿಳ್ಳೈ ತನ್ನ ಊರಾದ ಕೇರಳದ ಕೊಲ್ಲಂಗೆ ತೆರಳಲು ಆದಿತ್ಯವಾರ ತಿರುವನಂತ ಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ರಾಜನ್ ಪಿಳ್ಳೈ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಅವರ ಮಗ ಅಮಲ್ ಬಂದಿದ್ದರು. ತನ್ನ ತಂದೆಯನ್ನು ಮೂವತ್ತು ವರ್ಷಗಳ ನಂತರ ನೋಡಿದಾಗ ಅಮಲ್ ಖುಷಿಯಾಗಿದ್ದರು. ನಂತರ ಇಬ್ಬರೂ ತಂದೆ ಮಗ ತಾಯಿ ವಿಜಯಶ್ರೀಯನ್ನು ನೋಡಲು ಕಾರಿನಲ್ಲಿ ಮನೆಗೆ ತೆರಳುತ್ತಾರೆ. ಆದರೆ ಕೆಲವೇ ಕೆಲವು ಕ್ಷಣಗಳಲ್ಲಿ ಅವರ ಖುಷಿ ದುರಂತವಾಗಿ ಬದಲಾಯಿತು. ರಾಜನ್ ಮತ್ತು ಅವರ ಮಗ ಅಮಲ್ ಸಂಚರಿಸುತ್ತಿದ್ದ ಕಾರು ಟೂರಿಸ್ಟ್ ಬಸ್ ಒಂದಕ್ಕೆ ಢಿಕ್ಕಿ ಹೊಡೆದಿತ್ತು. ತಂದೆ ರಾಜನ್ ಪಿಳ್ಳೈ ಸ್ಥಳದಲ್ಲೇ ಮೃತ ಪಟ್ಟರೆ ಮಗ ಆಸ್ಪತ್ರೆಯಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜನ್ ಪಿಳ್ಳೈ ಅವರ ದುರಂತ ಸಾವಿಗೆ ಅವರ ಯುಎಇಯ ಸಹೋದ್ಯೋಗಿಗಳು ಸಂತಾಪ ಸೂಚಿಸಿದ್ದು, ಮೂವತ್ತು ವರ್ಷಗಳ ನಂತರ ತನ್ನ ಹೆಂಡತಿ ಮಗನನ್ನು ನೋಡಲು ತೆರಳುವ ಖುಷಿಯಲ್ಲಿದ್ದ ರಾಜನ್ ಪಿಳ್ಳೈ ಇನ್ನು ಊರಿನಲ್ಲೇ ಬದುಕು ಕಟ್ಟಿಕೊಳ್ಳುವುದಾಗಿ ನಮ್ಮಲ್ಲಿ ಹೇಳಿದ್ದರು ಅಂತ ನೆನೆದು ದುಃಖಿಸಿದರು.

Check Also

ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ಸಂದೇಶ ಇ-ಮ್ಯಾಗಝಿನ್: ಕೇರಳದ ಮಲಪ್ಪುರಂನ ಕಾಳಿಕಾವ್‌ನ ಅನಿವಾಸಿ ಭಾರತೀಯರಾದ ಶ್ರೀಧರನ್ ಅವರ ಫೇಸ್‌ಬುಕ್ ಪೋಸ್ಟ್, “ನನ್ನ ಉಮ್ಮಾ (ತಾಯಿ) ಅಲ್ಲಾಹನ …

Leave a Reply

Your email address will not be published. Required fields are marked *