Thursday , June 20 2019
Breaking News
Home / ಅಂತಾರಾಷ್ಟ್ರೀಯ / ಆಸ್ಟ್ರಿಯಾ: ಪ್ರಾಥಮಿಕ ಶಾಲೆಗಳಲ್ಲಿ ಹಿಜಾಬ್‍‌ಗೆ ನಿಷೇಧ ಹೇರಿದ ಬಲಪಂಥೀಯ ಸರಕಾರ

ಆಸ್ಟ್ರಿಯಾ: ಪ್ರಾಥಮಿಕ ಶಾಲೆಗಳಲ್ಲಿ ಹಿಜಾಬ್‍‌ಗೆ ನಿಷೇಧ ಹೇರಿದ ಬಲಪಂಥೀಯ ಸರಕಾರ

ಸಂದೇಶ ಇ-ಮ್ಯಾಗಝಿನ್: ಹಿಜಾಬ್ ಭಯೋತ್ಪಾದನೆಯ ಸಂಕೇತ ಎಂದು ಮುಸ್ಲಿಮ್ ಸ್ತ್ರೀಯರು ಧರಿಸುವ ಹಿಜಾಬ್ ಬ್ಯಾನ್ ಮಾಡುವ ಚರ್ಚೆ ದೇಶ ವಿದೇಶಗಳಲ್ಲಿ ನದೇಯುತ್ತಿದ್ದ ಹಾಗೆ ಆಸ್ಟ್ರಿಯಾದ ಪ್ರಾಥಮಿಕ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಲಾಗಿದೆ. ಆಸ್ಟ್ರಿಯಾದಲ್ಲಿ ಆಡಳಿತಾತ್ಮಕ ಬಲಪಂಥೀಯ ಸರ್ಕಾರ ಬುಧವಾರ ಈ ಪ್ರಸ್ತಾಪವನ್ನು ಮಂಡಿಸಿತ್ತು, ಬಳಿಕ ಅದು ಸಂಸದೀಯ ಸಭೆಯಲ್ಲಿ ಅದು ಅಂಗೀಕರಿಸಲ್ಪಟ್ಟಿತು. ಮುಸ್ಲಿಂ ವಿರೋಧಿ ಎಂಬ ಆರೋಪದಿಂದ ತಪ್ಪಿಸಲು ಇಸ್ಲಾಂ ಧರ್ಮ ಅಥವಾ ಹಿಜಾಬ್ ಹೆಸರನ್ನು ಕಾನೂನಿನಲ್ಲಿ ನೇರವಾಗಿ ಉಲ್ಲೇಖಿಸದಿದ್ದರೂ ಸಹ ಕಾನೂನಿನಲ್ಲಿ ಯಾವುದೇ ಸಿದ್ಧಾಂತ ಅಥವಾ ಧರ್ಮದಿಂದ ಪ್ರಭಾವಿತವಾಗಿರುವ ತಲೆ ಮುಚ್ಚುವ ವಸ್ತ್ರ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಕಾನೂನಿನಲ್ಲಿ ಹಿಜಾಬ್ ಬದಲಿಗೆಭೆಡ್ ಸ್ಕಾರ್ಫ್ ಎಂಬ ಪದವನ್ನು ಬಳಸಲಾಗಿದೆ.

ಆದರೆ ಸಿಖ್ ಮಕ್ಕಳು ಧರಿಸಿರುವ ಪಟ್ಕ ಮತ್ತು ಯಹೂದ್ಯರ ಕಿಪ್ಪವನ್ನು ಕಾನೂನಿನಿಂದ ಹೊರಗಿಡಲಾಗಿದೆ. ಆಸ್ಟ್ರಿಯಾದಲ್ಲಿ ಪೀಪಲ್ಸ್ ಪಾರ್ಟಿ ಮತ್ತು ಫ್ರೀಡಂ ಪಾರ್ಟಿ ಒಕ್ಕೂಟದ ಸರ್ಕಾರ ಅಧಿಕಾರಲ್ಲಿದೆ. ಯಾವುದೇ ರೀತಿಯ ಅಹಿತಕರ ಘಟನೆಯಿಂದ ಬಾಲಕಿಯರನ್ನು ರಕ್ಷಿಸಲು ಇದು ಅಗತ್ಯವೆಂದು ಎರಡೂ ಪಕ್ಷಗಳು ಹೇಳಿವೆ. ಮುಸ್ಲಿಂ ಸಂಘಟನೆಗಳು ಈ ಕಾನೂನನ್ನು ವಿಭಜನ ಕಾರಿ ಎಂದು ಟೀಕಿಸಿದೆ.

Check Also

ಸೌದಿ ಅರೇಬಿಯಾ ಈ ಬಾರಿ ತಪ್ಪಾಗಿ ಈದ್ ಆಚರಿಸಿದೆ ಎಂದು ಆರೋಪಿಸಿದ ಪಾಕಿಸ್ತಾನಿಗಳು

0110ಸಂದೇಶ ಇ-ಮ್ಯಾಗಝಿನ್: ಈ ಬಾರಿ ಸೌದಿ ಅರೇಬಿಯಾ ಭಾರತ ಹಾಗೂ ಪಾಕಿಸ್ತಾನದಕ್ಕಿಂತ ಒಂದು ದಿನ ಮುಂಚಿತವಾಗಿ ಈದ್ ಆಚರಿಸಿದ್ದು, ಜೂನ್ …

Leave a Reply

Your email address will not be published. Required fields are marked *