Tuesday , December 10 2019
Breaking News
Home / ನಮಾಝ್ / ನಮಾಝ್‌ನಿಂದಾಗಿ ಬೆನ್ನು ನೋವು ಶಮನ: ವಿಜ್ಞಾನಿಗಳ ಸಂಶೋಧನೆ

ನಮಾಝ್‌ನಿಂದಾಗಿ ಬೆನ್ನು ನೋವು ಶಮನ: ವಿಜ್ಞಾನಿಗಳ ಸಂಶೋಧನೆ

ಸಂದೇಶ ಇ-ಮ್ಯಾಗಝಿನ್: ಮುಸ್ಲಿಮರು ನಿರ್ವಹಿಸುವ ಐದು ಹೊತ್ತಿನ ನಮಾಝನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಬೆನ್ನಿನ ಭಾಗಕ್ಕೆ ಅತ್ಯುತ್ತಮ ವ್ಯಾಯಾಮವಾಗಿದೆ ಎಂದು ಲಂಡನ್ ಮೂಲದ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಈ ವಿಜ್ಞಾನಿಗಳ ಅಭಿಪ್ರಾಯವನ್ನು ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿದ್ದು, ಈ ಸಂಶೋಧನೆಯನ್ನು ಕಂಪ್ಯೂಟರ್-ರಚಿತ ಮಾನವ ಶರೀರದ ಮಾದರಿಗಳ ಮೂಲಕ ಮಾಡಲಾಗಿದ್ದು, ಕಡಿಮೆ ಬೆನ್ನುನೋವಿನ ಸಮಸ್ಯೆ ಇರುವವರಿಗೆ ಬಹಳ ಸಹಕಾರಿ ಎಂದು ವಿಶ್ಲೇಷಿಸಿದ್ದಾರೆ ಎನ್ನಲಾಗಿದೆ.

ನಮಾಝ್‌‍ನಲ್ಲಿ ‘ಸಜ್‌ದ’ ಎಂದು ಕರೆಯಲಾಗುವ ಸಾಷ್ಟಾಂಗದ ಸ್ಥಿತಿಯು, ಅಧ್ಯಯನದ ಪ್ರಕಾರ ಕೀಲುಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಲಾಗಿದೆ. ದಿನದಲ್ಲಿ ಒಮ್ಮೆ ಮಾಡುವುದರಿಂದಲೂ ಇದು ಪಯೋಜನವಿದೆ ಎಂದಿರುವ ವಿಜ್ಞಾನಿಗಳು ದಿನಕ್ಕೆ ಐದು ಬಾರಿ ಮಾಡುವುದರಿಂದ ಇನ್ನಷ್ಟು ಪ್ರಯೋಜನಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ಅಧ್ಯಯನದ ಸಹ ಲೇಖಕರಾದ ಪ್ರೊಫೆಸರ್ ಖಸಾವ್ನೆಹ್ ಹೇಳುವ ಪ್ರಕಾರ, ನಮಾಝ್‌ನಲ್ಲಿ ಬರುವ ಸಜ್‌ದಾ ಎಂಬ ಈ ಚಲನೆಯು ಯೋಗವನ್ನು ಅಥವಾ ಬೆನ್ನು ನೋವಿನ ಸಮಸ್ಯೆ ಇರುವವರಿಗೆ ಫಿಸಿಯೋಗಳು ಮಾಡಿಸುವ ದೈಹಿಕ ವ್ಯಾಯಾಮವನ್ನು ಹೋಲುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಎಲ್ಲಾ ಅಂಗಗಳನ್ನು ಕ್ರಮ ಪ್ರಕಾರವಾಗಿ ಅಂದರೆ ಉದಾಹರಣೆಗೆ ಸಾಷ್ಟಾಂಗ ಮಾಡುವಾಗ ಕಾಲಿನ ಹೆಬ್ಬೆರಳನ್ನು ಮುಂದಕ್ಕೆ ಮಡಚಿ ಮೊಣಕಾಲನ್ನು ಸರಿಯಾಗಿ ನೆಲದ ಮೇಲೆ ಊರಿದಾಗ ಮಾತ್ರ ಇದರ ಪರಿಣಾಮ ಕಾಣಲು ಸಾಧ್ಯ ಎಂದೂ ಇದೇ ಲೇಖನದಲ್ಲಿ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

Leave a Reply

Your email address will not be published. Required fields are marked *