Tuesday , December 10 2019
Breaking News
Home / ಮುಫ್ತಿ ಟಾಕ್ / ಅನುಮತಿ ಇಲ್ಲದೆ ಫೋನ್ ಕಾಲ್ ರೆಕಾರ್ಡ್ ಮಾಡುವುದು ಅಪರಾಧ: ದಾರುಲ್ ಉಲೂಮ್

ಅನುಮತಿ ಇಲ್ಲದೆ ಫೋನ್ ಕಾಲ್ ರೆಕಾರ್ಡ್ ಮಾಡುವುದು ಅಪರಾಧ: ದಾರುಲ್ ಉಲೂಮ್

ಸಂದೇಶ ಇ-ಮ್ಯಾಗಝಿನ್: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳನ್ನು ಮಾತನಾಡುವಾಗ ಇನ್ನೊಬ್ಬರ ಮಾತನ್ನು ಅವರಿಗೆ ಅರಿವೇ ಇಲ್ಲದಂತೆ ರೆಕಾರ್ಡ್ ಮಾಡಿ ಆ ನಂತರ ಅದನ್ನು ವೈರಲ್ ಮಾಡುವುದು ಸಾಮಾನ್ಯವಾದ ಸಂಗತಿಯಾಗಿಬಿಟ್ಟಿದೆ. ಉತ್ತರ ಪ್ರದೇಶದ ಸಹರನ್ ಪುರ್‌ನಲ್ಲಿರುವ ದಾರುಲ್ ಉಲೂಮ್ ದೇವ್ಬಂಧ್ ಫತ್ವ ಕಮಿಟಿಯು ಈ ಬಗ್ಗೆ ಫತ್ವಾ ಹೊರಡಿಸಿದ್ದು, ಇನ್ನೊಬ್ಬರ ಅನುಮತಿ ಇಲ್ಲದೆ ಅವರ ಫೋನ್ ಕಾಲ್ ರೆಕಾರ್ಡ್ ಮಾಡುವುದು ಇಸ್ಲಾಮಿನ ಶರೀಅತ್ತ್ ಪ್ರಕಾರ ಅಪರಾಧವಾಗಿದೆ ಎಂದು ಹೇಳಿದೆ. ಇದೊಂದು ಹಳೆಯ ಫತ್ವವಾಗಿದ್ದು, ಇದೀಗ ವೈರಲ್ ಮಾಡಲಾಗಿದೆ.

ಆಸಕ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ದೇವ್ಬಂದ್ ಫತ್ವಾ ಕಮಿಟಿ ಉಲೆಮಾಗಳು, ಇಬ್ಬರ ನಡುವೆ ರಹಸ್ಯವಾಗಿ ನಡೆಯುವ ಮಾತುಕತೆ ಅಮಾನತ್ ಆಗಿದೆ. ಅದನ್ನು ರೆಕಾರ್ಡ್ ಮಾಡಿ ಬೇರೆಯವರಿಗೆ ಕೇಳಿಸಿ ಆ ವ್ಯಕ್ತಿಯನ್ನು ತಮಾಷೆ ಮಾಡುವ ಅಥವಾ ಬ್ಲಾಕ್ ಮೇಲ್ ಮಾಡುವ ಅಧಿಕಾರ ಯಾರಿಗೂ ಇಲ್ಲ. ಇದು ಇಸ್ಲಾಮಿನ ಶರೀಅ ಕಾನೂನಿನ ಪ್ರಕಾರ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

Check Also

ಸೂಫಿ ಎಂದರೆ ಯಾರು…ಇಸ್ಲಾಮಿನಲ್ಲಿ ಈ ಸಿದ್ಧಾಂತಕ್ಕಿರುವ ಮಾನ್ಯತೆ ಏನು?

ಸೂಫಿಗಳು ಭಾರತಕ್ಕೆ ಇಸ್ಲಾಮ್ ಧರ್ಮವನ್ನು ತಂದಿದ್ದಾರೆ ಅಂತ ಕೆಲವರು ಹೇಳುತ್ತಾರೆ. ಕೆಲವರು ಈ ಸೂಫಿ ಸಿದ್ಧಾಂತವನ್ನು ವಿರೋಧಿಸುತ್ತಾರೆ. ಅದಕ್ಕೂ ಇಸ್ಲಾಮಿಗೂ …

Leave a Reply

Your email address will not be published. Required fields are marked *