Thursday , June 20 2019
Breaking News
Home / ರಾಷ್ಟ್ರೀಯ / ನಮಾಝಿಗರ ಮೇಲೆ ಕಾರು ಹರಿಸಿದ ಅರೋಪಿಯ ಬಂಧನ; ಮಹತ್ವದ ಸುಳಿವು ಪತ್ತೆ ಹಚ್ಚಿದ ಪೊಲೀಸರು

ನಮಾಝಿಗರ ಮೇಲೆ ಕಾರು ಹರಿಸಿದ ಅರೋಪಿಯ ಬಂಧನ; ಮಹತ್ವದ ಸುಳಿವು ಪತ್ತೆ ಹಚ್ಚಿದ ಪೊಲೀಸರು

ಸಂದೇಶ ಇ-ಮ್ಯಾಗಝಿನ್: ಬುಧವಾರ ದೆಹಲಿಯ ಜಗದಪುರಿ ಪ್ರದೇಶದಲ್ಲಿ ಈದ್ ನಮಾಝ್ ನಿರ್ವಹಿಸುತ್ತಿದ್ದವರ ಮೇಲೆ ಹೆಚ್ಚಿನ ವೇಗದಲ್ಲಿ ಹೋಂಡಾ ಸಿಟಿ ಕಾರನ್ನು ಹರಿಸಿ 17 ಮಂದಿ ನಮಾಝಿಗರನ್ನು ಜಖಂ ಗೊಳಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಶಾರುಖ್ (25) ಎಂದು ಗುರುತಿಸಲಾಗಿದೆ. ಆನಂದ್ ವಿಹಾರ್ ಪ್ರದೇಶದಿಂದ ಈತ ಚಲಾಯಿಸುತ್ತಿದ್ದ ಹೋಂಡಾ ಸಿಟಿ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಾರೂಖ್ ಮಧು ವಿಹಾರ್ ಪ್ರದೇಶದಿಂದ ಮೇ 30 ರಂದು ಈ ಕಾರನ್ನು ಅಪಹರಿಸಿದ್ದ ಎನ್ನಲಾಗಿದ್ದು, ನಿನ್ನೆ ಈದ್ ನಮಾಝ್ ಸಮಯದಲ್ಲಿ ಜಗದಪುರಿ ಪ್ರದೇಶದಲ್ಲಿ ಬಂದಿದ್ದ ಆರೋಪಿ ಶಾರೂಖ್ ಜನಜಂಗುಳಿಯಲ್ಲಿ ತಾನು ನಿಧಾನವಾಗಿ ಹೋದರೆ ತಾನು ಕದ್ದಿರುವ ಕಾರನ್ನು ಮತ್ತು ತನ್ನನ್ನು ಪೊಲೀಸರು ಹಿಡಿದುಬಿಡುತ್ತಾರೆ ಎಂದು ಭಾವಿಸಿ ಬ್ಯಾರಿಕೇಡ್ ಮುರಿದು ನಮಾಝಿಗರ ಮೇಲೆ ಕಾರು ಹರಿಸಿ ಪರಾರಿಯಾಗಲು ಯತ್ನಿಸಿದ್ದ, ಈ ಸಮಯದಲ್ಲಿ ಸ್ಥಳದಲ್ಲಿ ನಮಾಝ್ ನಿರ್ವಹಿಸುತ್ತಿದ್ದ 17 ಮಂದಿಗೆ ಗಂಭೀರ ಗಾಯಗಳಾಗಿದ್ದವು.

ಕಾರು ನಂಬರ್ ಆಧಾರದಲ್ಲಿ ಈ ಕಾರಿನ ಮಾಲಕ ರಾಮ್ ಸಿಂಗ್ ಎಂದು ಪೊಲೀಸರು ಗುರುತಿಸಿದ್ದು, ಆತ ಬಾರಾ ಹಿಂದೂರಾದ ದತ್ರಿಗಂಜ್‌ನಲ್ಲಿ ವಾಸಿಸುತ್ತಿದ್ದಾರೆ. 5 ದಿನ ಮೊದಲು ಮಧುವಿಹಾರ್ ಪ್ರದೇಶದಿಂದ ರಾಮ್ ಸಿಂಗ್ ಅವರ ಕಾರನ್ನು ಕದಿಯಲಾಗಿದ್ದು, ಮಧುವಿಹಾರದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು. ಕಾರಿನ ಮಾಲಕ ಹಿಂದೂ ಆಗಿದ್ದರಿಂದ ಸ್ಥಳದಲ್ಲಿ ಕೋಮು ದ್ವೇಷ ಹರಡುವ ಸಾಧ್ಯತೆ ಇತ್ತು. ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಬೇಗನೆ ಆರೋಪಿಯನ್ನು ಬಂಧಿಸಲಾಗಿದೆ.

Check Also

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

101ಸಂದೇಶ ಇ-ಮ್ಯಾಗಝಿನ್: ಜೂನ್ 12 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *