Friday , May 24 2019
Breaking News
Home / ಕ್ರೀಡೆ / ವಿಶಿಷ್ಟ ರೀತಿಯಲ್ಲಿ ರಮದಾನ್ ಮುಬಾರಕ್ ಹೇಳಿ; ಕ್ರಿಕೆಟ್ ಪ್ರೇಮಿಗಳ ಮನಗೆದ್ದರು ಶಿಖರ್ ಧವನ್

ವಿಶಿಷ್ಟ ರೀತಿಯಲ್ಲಿ ರಮದಾನ್ ಮುಬಾರಕ್ ಹೇಳಿ; ಕ್ರಿಕೆಟ್ ಪ್ರೇಮಿಗಳ ಮನಗೆದ್ದರು ಶಿಖರ್ ಧವನ್

ಸಂದೇಶ ಇ-ಮ್ಯಾಗಝಿನ್: ಕ್ರೀಡೆ ಎಂಬುದು ಜೀವನೋಲ್ಲಾಸವಾಗಿದೆ. ಇಲ್ಲಿ ಯಾರೂ ಶತ್ರುಗಳಲ್ಲ. ಎಲ್ಲರೂ ಸ್ನೇಹಿತರೇ. ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸನ್ನು ಪ್ರತಿನಿಧಿಸುತ್ತಿರುವ ಶಿಖರ್ ಧವನ್ ತಮ್ಮಲ್ಲಿರುವ ಇಂತಹ ಕ್ರೀಡಾ ಸ್ಫೂರ್ತಿ ಯಿಂದಲೇ ನಿನ್ನೆ ಕ್ರೀಡಾ ಪ್ರೇಮಿಗಳ ಮನಗೆದ್ದಿದ್ದಾರೆ. ವಿಶಾಖಪಟ್ಟಣಂ ಸ್ಟೇಡಿಯಂ ನಲ್ಲಿ ನಡೆದ ದೆಹಲಿ ಕ್ಯಾಪಿಟಲ್ಸ್-ಸನ್ ರೈಸರ್ಸ್ ಹೈದರಾಬಾದ್ ತಂಡದ ನಡುವಿನ ಪಂದ್ಯದಲ್ಲಿ ದೆಹಲಿ ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 2 ವಿಕೆಟ್ ಅಂತರದಲ್ಲಿ ಸೋಲಿಸಿತ್ತು. ಪಂದ್ಯ ಮುಗಿದ ತಕ್ಷಣ ಧವನ್ ಉಪವಾಸ ಹಿಡಿದು ಆಡುತ್ತಿದ್ದ ಹೈದರಾಬಾದ್ ಸನ್‌ರೈಸರ್ಸ್ ತಂಡದ ಆಟಗಾರರಾದ ಅಫ್ಘಾನ್ ಮೂಲದ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಇಬ್ಬರನ್ನು ಆಲಂಗಿಸಿ ಫೋಟೋ ಕ್ಲಿಕ್ಕಿಸಿದ್ದರು. ಬಳಿಕ ಫೋಟೋವನ್ನು ತಮ್ಮ ಟ್ವಿಟ್ಟರ್ ಖತೆಯಲ್ಲಿ ಪೋಸ್ಟ್ ಮಾಡಿ, “ಎಲ್ಲರಿಗೂ ರಮದಾನ್ ಮುಬಾರಕ್, ನಿಮ್ಮ ಬಗ್ಗೆ ಹೆಮ್ಮೆ ಇದೆ. ಉಪವಾಸ ಹಿಡಿದು ಆಡುವುದು ಅಷ್ಟೊಂದು ಸುಲಭದ ಮಾತಲ್ಲ. ಆದರೂ ನೀವು ಮಾಡಿ ತೋರಿಸಿದ್ದೀರಿ. ನಿಮ್ಮ ದೇಶಕ್ಕೆ ಮತ್ತು ಕ್ರಿಕೆಟ್ ಜಗತ್ತಿಗೆ ಇದು ಪ್ರೇರಣೆಯಾಗಿದೆ. ನಿಮ್ಮ ಶಕ್ತಿಯು ಎಲ್ಲರೂ ದೊಡ್ಡ ಕನಸು ಕಾಣುವಂತೆ ಪ್ರೇರೇಪಿಸುತ್ತದೆ. ಅಲ್ಲಾಹುವಿನ ಆಶೀರ್ವಾದಗಳು ನಿಮ್ಮೊಂದಿಗೆ ಇರಲಿ! ” ಎಂದು ಪೋಸ್ಟ್ ಮಾಡಿದ್ದಾರೆ.

Check Also

ಈ ರೀತಿ ಆದಲ್ಲಿ ಇರ್ಫಾನ್ ಪಠಾಣ್ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ‍ ರಚಿಸಲಿದ್ದಾರೆ

000ಸಂದೇಶ ಇ-ಮ್ಯಾಗಝಿನ್: ಟಿ-20 ಕ್ರಿಕೆಟ್ ಬಂದ ನಂತರ ಕ್ರಿಕೆಟ್ ಆಟದ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆ. ಇದೇ ಕಾರಣದಿಂದಾಗಿ ಬೇರೆ ಬೇರೆ …

Leave a Reply

Your email address will not be published. Required fields are marked *