Friday , November 15 2019
Breaking News
83-cowNew_5
Home / ರಾಷ್ಟ್ರೀಯ / ಗುಜರಾತ್: ಆಕಸ್ಮಿಕವಾಗಿ ರೈಲು ಹಸುವಿಗೆ ಢಿಕ್ಕಿ: ಸ್ವಯಂ ಘೋಷಿತ ಗೋರಕ್ಷಕರಿಂದ ಚಾಲಕನಿಗೆ ಥಳಿತ

ಗುಜರಾತ್: ಆಕಸ್ಮಿಕವಾಗಿ ರೈಲು ಹಸುವಿಗೆ ಢಿಕ್ಕಿ: ಸ್ವಯಂ ಘೋಷಿತ ಗೋರಕ್ಷಕರಿಂದ ಚಾಲಕನಿಗೆ ಥಳಿತ

ಸಂದೇಶ ಇ-ಮ್ಯಾಗಝಿನ್: ಆಕಸ್ಮಿಕವಾಗಿ ಚಲಿಸುವ ರೈಲೊಂದಕ್ಕೆ ಅಡ್ಡ ಬಂದ ದನಕ್ಕೆ ಢಿಕ್ಕಿಯಾಗಿ ಆ ಬಳಿಕ ಗೋರಕ್ಷರ ಗುಂಪೊಂದು ರೈಲು ಚಾಲಕನಿಗೆ ಹಲವು ಬಾರಿ ಥಳಿಸಿದ ಘಟನೆ ಗುಜರಾತಿನಿಂದ ವರದಿಯಾಗಿದೆ. ಗ್ವಾಲಿಯರ್-ಅಹ್ಮದಾಬಾದ್ ನಡುವೆ ಚಲಿಸುವ ಸುಪರ್ ಫಾಸ್ಟ್ ರೈಲಿಗೆ ಶನಿವಾರ ಸಿಂಧಪುರ್ ಜಂಕ್ಷನ್ ಎಂಬಲ್ಲಿಗೆ ತಲುಪಿದಾಗ ದನವೊಂದು ಅಡ್ಡ ಬಂದಿದ್ದು, ಸ್ಟೇಷನ್ ಮಾಸ್ಟರ್ ಕೆಂಪು ದೀಪ ತೋರಿಸಿದರೂ ಕೂಡ ಚಾಲಕ ರೈಲು ನಿಲ್ಲಿಸುವಾಗ ಸ್ವಲ್ಪ ತಡವಾಗಿ ರೈಲು ದನಕ್ಕೆ ಢಿಕ್ಕಿ ಹೊಡೆದಿತ್ತು. ಬಳಿಕ ರೈಲು ಚಾಲಕ ಜಿಎ ಜಾಲಾ ಎಂಬವರು ರೈಲ್ವೇ ಸಿಬ್ಬಂದಿಗಳಿಗೆ ದನದ ಮೃತದೇಹವನ್ನು ಟ್ರ್ಯಾಕ್ ನಿಂದ ತೆಗೆಯುವಂತೆ ವಿನಂತಿಸಿದ್ದಾರೆ. ಅಷ್ಟರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಿಪಿನ್ ರಾಜ್‌ಪೂತ್ ಎಂಬ ಸ್ವಯಂ ಘೋಷಿತ ಗೋರಕ್ಷಕ ಚಾಲಕನನ್ನು ನಿಂದಿಸಲು ಪ್ರಾರಂಭಿಸಿದ್ದ. ಸ್ವಲ್ಪ ಸಮಯದಲ್ಲೇ ಸುಮಾರು 150 ರಷ್ಟು ಸ್ವಯಂ ಘೋಷಿತ ಗೋರಕ್ಷಕರು ಸ್ಥಳಕ್ಕಾಗಮಿಸಿದ್ದು, ಚಾಲಕನಿಗೆ ನಿಂದಿಸಿ ಥಳಿಸಲು ಪ್ರಾರಂಭಿಸಿದ್ದಾರೆ.

ರೈಲು ಆ ಬಳಿಕ ತನ್ನ ಪ್ರಯಾಣವನ್ನು ಮುಂದುವರಿಸಿದರೂ ಕೂಡ ಬಿಪಿನ್ ರಾಜ್‌ಪೂತ್ ಮುಂದಿನ ಎರಡು ಸ್ಟೇಷನ್‌ಗಳಲ್ಲೂ ಚಾಲಕನನ್ನು ನಿಂದಿಸಿ ಥಳಿಸಿದ್ದಾನೆನ್ನಲಾಗಿದೆ. ಆ ಬಳಿಕ ಸ್ವಯಂ ಘೋಷಿತ ಗೋರಕ್ಷಕನ ಕಾಟ ತಾಳಲಾರದೆ ಮೆಹಸಾನಾ ಎಂಬಲ್ಲಿ ಚಾಲಕ ರೈಲ್ವೇ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಬಿಪಿನ್ ರಾಜ್‌ಪೂತ್ ಮತ್ತೆ ಚಾಲಕನಿಗೆ ಥಳಿಸಿದ್ದಾನೆನ್ನಲಾಗಿದೆ. ಬಳಿಕ ಬಿಪಿನ್ ರಾಜಪೂತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *