Sunday , September 22 2019
Breaking News
rahul-gandhi
Home / ರಾಷ್ಟ್ರೀಯ / ಕುತೂಹಲಕ್ಕೆ ತೆರೆ: ಅಮೇಥಿಯ ಜೊತೆಗೆ ಈ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ರಾಹುಲ್

ಕುತೂಹಲಕ್ಕೆ ತೆರೆ: ಅಮೇಥಿಯ ಜೊತೆಗೆ ಈ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ರಾಹುಲ್

ಸಂದೇಶ ಇ-ಮ್ಯಾಗಝಿನ್: ಕಾಂಗ್ರೇಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಬಾರಿ ಸಾಂಪ್ರದಾಯಿಕ ಅಮೇಥಿಯ ಜೊತೆ ದಕ್ಷಿಣ ಭಾರತದ ಮತ್ತೊಂದು ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಇದಕ್ಕಾಗಿ ತಮಿಳು ನಾಡು, ಆಂದ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಯಾವುದಾದರೂ ಒಂದು ಕ್ಷೇತ್ರವನ್ನು ಆಯ್ಕೆ ಮಾಡುವುದಾಗಿ ಹೇಳಲಾಗಿತ್ತು. ಈ ಹೆಸರಿನಲ್ಲಿ ಮುಂಚೂಣಿಯಲ್ಲಿದ್ದುದು, ಕೇರಳ ಪ್ರಾಕೃತಿಕ ಸೊಬಗಿನ ಸುಂದರ ಬೀಡಾದ ವಯನಾಡ್ ಲೋಕಸಭಾ ಕ್ಷೇತ್ರ. ಈ ಬಗ್ಗೆ ಇದು ವರೆಗೆ ಕಾಂಗ್ರೇಸ್ ಅಧಿಕೃತ ಮಾಹಿತಿ ನೀಡಿರಲಿಲ್ಲ. ಆದರೆ ಭಾನುವಾರ ಬೆಳಗ್ಗೆ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೇಸ್ ಮುಖಂಡ ಎ.ಕೆ.ಆಂಟನಿ ರಾಹುಲ್ ಗಾಂಧಿಯವರು ಅಮೇಥಿಯ ಜೊತೆಗೆ ಎರಡನೆ ಕ್ಷೇತ್ರವಾಗಿ ಕೇರಳದ ವಯನಾಡ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ. ತಮಿಳು ನಾಡು, ಕರ್ನಾಟಕ ಹಾಗೂ ಕೇರಳ ರಾಜ್ಯದ ಪಕ್ಷದ ಕಾರ್ಯಕರ್ತರ ತೀವ್ರ ಒತ್ತಡದ ಮೇರೆಗೆ ದಕ್ಷಿಣ ರಾಜ್ಯದ ಒತ್ತಾಯವನ್ನು ಕಡೆಗಣಿಸಬಾರದು ಎಂದು ರಾಹುಲ್ ವಯನಾಡ್‌ನಲ್ಲಿ ಸ್ಪರ್ಧಿಸಲು ಒಪ್ಪಿದ್ದಾರೆ ಎಂದು ಆಂಟನಿ ತಿಳಿಸಿದರು.

ಅಮೇಥಿಯಲ್ಲಿ ರಾಹುಲ್ ಗಾಂಧಿಯ ವಿರುದ್ಧ ಬಿಜೆಪಿಯ ಕೇಂದ್ರ ಮಂತ್ರಿ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದು, ವಯನಾಡ್‌ನಲ್ಲಿ ಕೂಡ ಸ್ಮೃತಿ ಇರಾನಿಯವರನ್ನೇ ಸ್ಪರ್ಧೆಗಿಳಿಸಲು ಬಿಜೆಪಿ ತೀರ್ಮಾನಿಸಿದೆ. ಆದರೂ ವಯನಾಡ್‌ನಲ್ಲಿ ಕಾಂಗ್ರೇಸ್ ಪಕ್ಷದ ನೇರ ಪ್ರತಿಸ್ಪರ್ಧಿ ಎಡಪಕ್ಷಗಳಾಗಿದ್ದು, ಇಲ್ಲಿ ಸ್ಪರ್ಧಿಸಿದರೂ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ.

Check Also

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

001ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರದ ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. …

Leave a Reply

Your email address will not be published. Required fields are marked *