Thursday , June 20 2019
Breaking News
Home / ವಿಶೇಷ / ತನ್ನನ್ನು ಪ್ರಥಮ ಬಾರಿಗೆ ಎತ್ತಿದ್ದ ಅದೇ ಕೈಗಳನ್ನು 49 ವರ್ಷಗಳ ಬಳಿಕ ಮತ್ತೊಮ್ಮೆ ಸ್ಪರ್ಷಿಸಿದ ರಾಹುಲ್-ಭಾವುಕ ಕ್ಷಣ

ತನ್ನನ್ನು ಪ್ರಥಮ ಬಾರಿಗೆ ಎತ್ತಿದ್ದ ಅದೇ ಕೈಗಳನ್ನು 49 ವರ್ಷಗಳ ಬಳಿಕ ಮತ್ತೊಮ್ಮೆ ಸ್ಪರ್ಷಿಸಿದ ರಾಹುಲ್-ಭಾವುಕ ಕ್ಷಣ

ಸಂದೇಶ ಇ-ಮ್ಯಾಗಝಿನ್: 49 ವರ್ಷಗಳ ಹಿಂದೆ ರಾಜಮ್ಮ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾಗ ಅದೇ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿಯವರು ರಾಹುಲ್ ಗಾಂಧಿಯವರಿಗೆ ಜನ್ಮ ನೀಡಿದ್ದರು. ಮಗುವನ್ನು ಪ್ರಥಮ ಬಾರಿಗೆ ಎತ್ತಿದ್ದು ಇದೇ ರಾಜಮ್ಮ. ಇದೀಗ 49 ವರ್ಷಗಳ ನಂತರ ರಾಹುಲ್ ಗಾಂಧಿ ರಾಜಮ್ಮ ಅವರನ್ನು ಮತ್ತೆ ಭೇಟಿಯಾಗಿ ಆಲಂಗಿಸಿದ್ದಾರೆ. ಆದರೆ ಈ ಭೇಟಿಯಲ್ಲಿ ಭಾವುಕತೆ ಇತ್ತು.

ರಾಜಮ್ಮ ಕೇರಳದ ವಯನಾಡ್ ಮೂಲದವರು. ಸೇವಾ ನಿವೃತ್ತಿಯ ಬಳಿಕ ವಯನಾಡ್ ನಲ್ಲೇ ನೆಲೆಸಿದ್ದಾರೆ. ರಾಹುಲ್ ಇದೀಗ ವಯನಾಡ್ ಸಂಸದ. ತನ್ನನ್ನು ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದ ರಾಹುಲ್ ಹಾಗೆ ರಾಜಮ್ಮ ಅವರನ್ನು ಭೇಟಿಯಾದರು.

ರಾಜಮ್ಮ ವಾವತ್ತಿಲ್ ಅವರಿಗೆ ಇದೀಗ 72 ವರ್ಷ ಪ್ರಾಯ. ರಾಹುಲ್ ವಯನಾಡಿನಿಂದ ಸಂಸತ್‌ಗೆ ಸ್ಪರ್ಧಿಸುತ್ತಿದ್ದಾರೆ ಎಂದಾಗಲೇ ರಾಜಮ್ಮ ರಾಹುಲ್ ಅವರನ್ನು ಭೇತಿಯಾಗುವ ಆಗ್ರಹ ವ್ಯಕ್ತಪಡಿಸಿದ್ದರು. ವಯನಾಡಿನ ಅತಿಥಿ ಗೃಹವೊಂದರಲ್ಲಿ ರಾಹುಲ್ ತಂಗಿದ್ದಾಗ ಅಲ್ಲಿಗೆ ಬಂದ ರಾಜಮ್ಮರನ್ನು ಆಲಂಗಿಸಿದ ರಾಹುಲ್ ಅವರ ಕುಟುಂಬಸ್ಥರನ್ನೂ ಭೇಟಿಯಾದರು.

ತಮ್ಮ ನಿಗದಿಯಾದ ಸಮಯದ ಭೇಟಿಯ ಸಂದರ್ಭದಲ್ಲೂ ರಾಹುಲ್ ಗಾಂಧಿಯವರು ರಾಜಮ್ಮ ಹಾಗೂ ಅವರ ಪರಿವಾರದವರೊಡನೆ ಭೇಟಿಯಾಗಿ ಒಂದಷ್ಟು ಸಮಯ ಅವರೊಂದಿಗೆ ಕುಷಲೋಪರಿ ನಡೆಸುತ್ತಾ ಕಳೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಮ್ಮ, ರಾಹುಲ್‌ಗೆ ಏನಾದರೂ ಗಿಫ್ಟ್ ಕೊಡುವ ಎಂದು ನಾನು ಭಾವಿಸಿದೆ. ಅದಕ್ಕಾಗಿ ನನ್ನ ಕೈಯಿಂದಲೇ ಸಿದ್ಧಪಡಿಸಿದ ಚಿಪ್ಸ್ ಹಾಗೂ ಕೆಲವೊಂದಷ್ಟು ಮಿಠಾಯಿಗಳನ್ನು ತಂದಿದ್ದೆ. ರಾಹುಲ್ ನನ್ನ ಎದುರೇ ಅದನ್ನು ತಿಂದರು ತುಂಬಾ ಖುಷಿಯಾಯಿತು ಎಂದರು.

ನಿವೃತ್ತ ನರ್ಸ್ ಕೇರಳದ ವಯನಾಡ್ ನಿವಾಸಿ ರಾಜಮ್ಮ ಜನಿಸಿದ ತಕ್ಷಣ ರಾಹುಲ್ ಗಾಂಧಿಯನ್ನು ಮೊದಲ ಬಾರಿಗೆ ಎತ್ತಿದವರಂತೆ. ರಾಹುಲ್ ಗಾಂಧಿ ಜೂನ್ 19 , 1970 ರಲ್ಲಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ್ದರು. ಈ ಸಮಯದಲ್ಲಿ ಅದೇ ಆಸ್ಪತ್ರೆಯಲ್ಲಿ ರಾಜಮ್ಮ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಂದು ಪ್ರಧಾನ ಮಂತ್ರಿಯವರ ಮೊಮ್ಮಗ ಜನಿಸಿದ್ದಕ್ಕೆ ಎಲ್ಲರೂ ಸಂತೋಷ ಹಂಚಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಪ್ರಥಮ ಬಾರಿಗೆ ಮಗುವನ್ನು ಎತ್ತಿ ಕೊಳ್ಳುವ ಅದೃಷ್ಟ ನನಗೆ ಲಭಿಸಿತ್ತು. ಆತ ತುಂಬಾ ಸುಂದರವಾಗಿದ್ದ, ತಾಯಿ ಸೋನಿಯಾರಿಗೆ ಚಿಕಿತ್ಸೆ ನಡೆಯುತ್ತಿತ್ತು. ಹೊರಗೆ ರಾಜೀವ್ ಹಾಗೂ ಸಂಜಯ್ ಇಬ್ಬರೂ ಕಾಯುತ್ತಿದ್ದರು. ಆ ಬಳಿಕ ಮಗು ಜನಿಸಿದ ಸುದ್ದಿ ತಿಳಿದು ಪ್ರಧಾನಿ ಇಂದಿರಾ ಗಾಂಧಿಯವರು ಆಸ್ಪತ್ರೆಗೆ ಭೇಟಿ ನೀಡಿದರು ಎಂದು ರಾಜಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲೇ ಕೆಲಸ ಮಾಡುತ್ತಿದ್ದಾಗ ರಾಜಮ್ಮ ಅವರು ವಯನಾಡ್ ಮೂಲದವರಾದ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದ ವಾವತ್ತಿಲ್ ರಾಜಪ್ಪನ್ ಎಂಬವರನ್ನು ವಿವಾಹವಾಗಿ ಆ ಬಳಿಕ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಕೆಲಸ ಬಿಟ್ಟು ಮಿಲಿಟರಿ ಆಸ್ಪತ್ರೆಯಲ್ಲೇ ಕೆಲಸಕ್ಕೆ ಸೇರಿದರು. ಇದೀಗ ಗಂಡ ಹೆಂಡತಿ ಇಬ್ಬರೂ ನಿವೃತ್ತರಾಗಿದ್ದು, ಈ ದಂಪತಿಗಳ ಒಬ್ಬನೇ ಮಗ ರಾಜೇಶ್ ಕುವೈಟ್‌ನಲ್ಲಿ ಸೆಟಲ್ ಆಗಿದ್ದಾರೆ.

Check Also

ಮುಸ್ಲಿಮರ ನಮಾಝ್‌ಗಾಗಿ ತಮ್ಮ ವ್ಯಾಪಾರವನ್ನೇ ತ್ಯಜಿಸಿದ ಹಿಂದೂಗಳು

4011ಸಂದೇಶ ಇ-ಮ್ಯಾಗಝಿನ್: ಬಲವಾದ ಸಾಮುದಾಯಿಕ ಸೌಹಾರ್ದ ಮತ್ತು ಬಂಧನವನ್ನು ಎತ್ತಿ ತೋರಿಸುವ ಸುದ್ದಿಯೊಂದು ಮಧ್ಯಪ್ರದೇಶದ ರಾಜಧಾನಿ ಭುಪಾಲ್‌ನಿಂದ ವರದಿಯಾಗಿದೆ. ಇಲ್ಲಿ …

Leave a Reply

Your email address will not be published. Required fields are marked *