Sunday , January 26 2020
Breaking News
Home / ಪ್ರವಾದಿ ಚಿಕಿತ್ಸೆ / ಥರೀರಾ(ಸ್ವೀಟ್ ಫ್ಲ್ಯಾಗ್‌) ದಿಂದ ಮೊಡವೆಗಳಿಗೆ ಪರಿಹಾರ – ಪ್ರವಾದಿ ಚಿಕಿತ್ಸೆ

ಥರೀರಾ(ಸ್ವೀಟ್ ಫ್ಲ್ಯಾಗ್‌) ದಿಂದ ಮೊಡವೆಗಳಿಗೆ ಪರಿಹಾರ – ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಇಬ್ನ್ ಅಸ್ಸುನ್ನಿ ತಮ್ಮ ಗ್ರಂಥದಲ್ಲಿ ಹೇಳುತ್ತಾರೆ; ಪ್ರವಾದಿ ವರ್ಯರ ಪತ್ನಿಯಲ್ಲಿ ಒಬ್ಬರು ಹೇಳುತ್ತಾರೆ, ಒಮ್ಮೆ ಪ್ರವಾದಿ ಮುಹಮ್ಮದ್(ಸ)ರವರು ನನ್ನ ಬಳಿ ಇದ್ದಾಗ ನನ್ನ ಬೆರಳಿನಲ್ಲಿ ಮೊಡವೆಗಳನ್ನು ನೋಡಿದರು. ಪ್ರವಾದಿ ಮುಹಮ್ಮದ್(ಸ)ರವರು ನಂತರ ನನ್ನಲ್ಲಿ ಕೇಳಿದರು; ನಿನ್ನ ಬಳಿ ಥರೀರಾ (ಅರುಮ್) ಇದೆಯಾ? ನಾನು ಇದೆ ಎಂದೆ. ನಿನ್ನ ಮೊಡವೆ ಇರುವ ಜಾಗಕ್ಕೆ ಅದನ್ನು ಹಚ್ಚು ಎಂದರು.

ಥರೀರಾ ಎಂಬುದು ಅರಮ್ ಕಡ್ಡಿಯಿಂದ ಮಾಡುವ ಒಂದು ಭಾರತೀಯ ಮದ್ದು ಅಥವಾ ಪರಿಹಾರವಾಗಿದೆ. ಅರುಮ್ ಬಿಸಿ ಮತ್ತು ಶುಷ್ಕವಾಗಿರುತ್ತದೆ ಮತ್ತು ಹೊಟ್ಟೆ ಮತ್ತು ಯಕೃತ್ತಿನಲ್ಲಿ ಬೆಳೆಯುವ ಗೆಡ್ಡೆಗಳಿಗೆ ಪರಿಹಾರವಾಗಿದೆ. ಇದು ಹೃದಯದ ಕಾರ್ಯ ಚಟುವಟಿಕೆಗೆ ಬಲ ತುಂಬುತ್ತದೆ.

ಸಹೀಹ್ ಆಗಿ ಬಂದ ಒಂದು ವರದಿಯಲ್ಲಿ ಪ್ರವಾದಿ ಪತ್ನಿ ಆಯಿಶಾ(ರ) ಹೇಳುತ್ತಾರೆ; “ನಾನು ವಿದಾಯದ ಹಜ್ಜ್‌ನ ಸಮಯದಲ್ಲಿ ಪ್ರವಾದಿ ಮುಹಮ್ಮದ್(ಸ)ರವರಿಗೆ ಥರೀರಾಹ್ ಅನ್ನು ಬಳಸಿ ನನ್ನ ಕೈಯಿಂದ ಸುಗಂಧವನ್ನು ಹಚ್ಚಿದ್ದೇನೆ.”

ನಮ್ಮ ಮುಖದಲ್ಲಿ ಮತ್ತು ದೇಹದ ಇತರ ಭಾಗಗಳಲ್ಲಿ ಮೊಡವೆಗಳ ಬೆಳವಣಿಗೆಯಾಗುವುದು ದೇಹದಿಂದ ಹೊರಬರುವ ಬಿಸಿ ಹಾನಿಕಾರ ಸೆಪ್ಟಿಕ್ ಪದಾರ್ಥಗಳಿಂದಾಗಿದೆ. ಈ ಪದಾರ್ಥಗಳು ಅಥವಾ ಕಲ್ಮಶಗಳು ಚರ್ಮದ ಕಡೆಗೆ ತಳ್ಳಲ್ಪಡುತ್ತದೆ. ನಂತರ ಇದು ದೇಹದಿಂದ ಹೊರಬರುವ ಮಾರ್ಗವನ್ನು ತಾನಾಗಿಯೇ ಕಂಡುಕೊಳ್ಳುತ್ತದೆ. ಅದೇ ಮೊಡವೆಗಳ ರೂಪದಲ್ಲಿ ಬೆಳೆಯುತ್ತದೆ. ಇಂತಹ ಮೊಡವೆಗಳು ತೆರೆಯಲು ಮತ್ತು ತನ್ನಲ್ಲಿರುವ ಕಲ್ಮಶವನ್ನು ಹೊರಚೆಲ್ಲಲು ಅದು ಪ್ರೌಢಾವಸ್ಥೆಗೆ ಬರಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ಅದು ಉರಿಯುವುದು ಬಾತು ಕೊಳ್ಳುವುದು ಮೊದಲಾಗಿ ಕಿರಿ ಕಿರಿ ಉಂಟು ಮಾಡುತ್ತದೆ. ಥರೀರಾವನ್ನು ಬಳಸುವುದರಿಂದ ಮೊಡವೆಗಳಿಂದ ಹಾನಿಕಾರಕ ಕಲ್ಮಶಗಳು ಬಹುಬೇಗನೆ ಹೊರ ಬರುತ್ತದೆ. ಮೊಡವೆಯಲ್ಲಿರುವ ಉಷ್ಣಾಂಶವನ್ನು ಥರೀರಾ ಹೀರಿ ಕೊಳ್ಳುತ್ತದೆ. ಮತ್ತು ನೋವು ಕೂಡ ಮಾಯವಾಗುತ್ತದೆ. ಜೊತೆಗೆ ಇದು ಉತ್ತಮ ಸುವಾಸನೆಯನ್ನೂ ನೀಡುತ್ತದೆ.

ಬೆಂಕಿಯಲ್ಲಿ ಉರಿದ ಚರ್ಮದ ಭಾಗಕ್ಕೂ ಥರೀರಾವನ್ನು ಬಳಸುವುದರಿಂದ ಆರಾಮದಾಯಕ ಮತ್ತು ಬಹುಬೇಗನೆ ನೋವು ಗುಣವಾಗಲು ಕಾರಣವಾಗುತ್ತದೆ.

ಈ ಥರೀರಾವನ್ನು ಆಂಗ್ಲ ಭಾಷೆಯಲ್ಲಿ ‘ಸ್ವೀಟ್ ಫ್ಲ್ಯಾಗ್’ ಅಂತ ಕರೆಯುತ್ತಾರೆ. ಉರ್ದು ಭಾಷೆಯಲ್ಲಿ ಇದನ್ನು ‘ಚರೈತಾ’ ಅಂತ ಕರೆಯುತ್ತಾರೆ.

Check Also

ಬಾಳೆಹಣ್ಣು ಸೇವನೆಯ ಪ್ರಯೋಜನಗಳು -ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಬಾಳೆಹಣ್ಣು ಒಂದು ಉತ್ತಮ ಆಹಾರ ಇದರ ಸೇವನೆಯ ಆರೋಗ್ಯಕಾರಕ ಪ್ರಯೋಜನಗಳನ್ನು ಪ್ರವಾದಿ ಮುಹಮ್ಮದ್(ಸ)ರವರ ಹದೀಸ್ ಗಳಲ್ಲೂ ಹೇಳಲಾಗಿದೆ. …

Leave a Reply

Your email address will not be published. Required fields are marked *