Sunday , January 26 2020
Breaking News
Home / ಪ್ರವಾದಿ ಚಿಕಿತ್ಸೆ / ಬಾಳೆಹಣ್ಣು ಸೇವನೆಯ ಪ್ರಯೋಜನಗಳು -ಪ್ರವಾದಿ ಚಿಕಿತ್ಸೆ

ಬಾಳೆಹಣ್ಣು ಸೇವನೆಯ ಪ್ರಯೋಜನಗಳು -ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಬಾಳೆಹಣ್ಣು ಒಂದು ಉತ್ತಮ ಆಹಾರ ಇದರ ಸೇವನೆಯ ಆರೋಗ್ಯಕಾರಕ ಪ್ರಯೋಜನಗಳನ್ನು ಪ್ರವಾದಿ ಮುಹಮ್ಮದ್(ಸ)ರವರ ಹದೀಸ್ ಗಳಲ್ಲೂ ಹೇಳಲಾಗಿದೆ.

ಪವಿತ್ರ ಕುರ್‌ಆನಿನ ಅಧ್ಯಾಯ ಸೂರಃ ವಾಕಿಅಃ ದಲ್ಲಿ 29ನೇ ಸೂಕ್ತದಲ್ಲಿ ಹೇಳಲಾಗಿರುವ “ತಲ್‌ಹ” ಎಂಬ ಪದದ ಅರ್ಥವು ಬಾಳೆಹಣ್ಣಾಗಿದೆ ಎಂದು ಸಲಫುಸ್ಸಾಲೀಹೀನ್(ಸಜ್ಜನ ಪುರ್ವಿಕರು)ಗಳಲ್ಲಿ ಸೇರಿದ ವಿದ್ವಾಂಸರು ಬಲವಾದ ಅಭಿಪ್ರಾಯವನ್ನು ಹೊಂದಿದ್ದಾರೆ.

ಬಾಳೆ ಹಣ್ಣುಗಳು ಉಷ್ಣ ಮತ್ತು ಆರ್ದ್ರವಾಗಿರುತ್ತದೆ. ಕಳಿತ ಮತ್ತು ಸಿಹಿಯಾದ ಬಾಳೆಹಣ್ಣು ಸೇವಿಸಲು ಉತ್ತಮವಾಗಿದೆ. ಎದೆ ಮತ್ತು ಶ್ವಾಸಕೋಶದ ಗಡಸುತನದ ವಿರುದ್ಧ ಬಾಳೆಹಣ್ಣು ಸಹಾಯ ಮಾಡುತ್ತದೆ.

ಬಾಳೆ ಹಣ್ಣಿನ ಸೇವನೆಯಿಂದಾಗಿ ಕೆಮ್ಮು ನಿವಾರಣೆಯಾಗುತ್ತದೆ ಮತ್ತು ಮೂತ್ರಪಿಂಡದ ಹುಣ್ಣುಗಳ ಸಮಸ್ಯೆಯ ವಿರುದ್ಧ ಬಾಳೆ ಹಣ್ಣಿನ ಸೇವನೆಯು ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ. ಬಾಳೆ ಹಣ್ಣಿನ ಸೇವನೆಯಿಂದಾಗಿ ಶರೀರದಲ್ಲಿ ಮೂತ್ರದ ಉತ್ಪತ್ತಿಯು ಹೆಚ್ಚುತ್ತದೆ.

ಬಾಳೆ ಹಣ್ಣಿನ ಸೇವನೆಯಿಂದಾಗಿ ಗಂಡಸರ ಶರೀರದಲ್ಲಿ ವೀರ್ಯದ ಉತ್ಪಾದನೆಯು ಹೆಚ್ಚಿ, ಲೈಂಗಿಕ ಕಾರ್ಯ ಕ್ಷಮತೆಯು ಹೆಚ್ಚುತ್ತದೆ.

ಆದರೂ ಕೂಡ ಬಾಳೆ ಹಣ್ಣಿನ ಅತಿಯಾದ ಸೇವನೆಯು ಹೊಟ್ಟೆಗೆ ಸ್ವಲ್ಪ ಮಟ್ಟಿಗೆ ಹಾನಿ ಮಾಡುವ ಸಾಧ್ಯತೆ ಇದೆ. ಪಿತ್ತರಸ ಮತ್ತು ಕಫವು ಹೆಚ್ಚಾಗಬಹುದು. ಆದುದರಿಂದ ಜೇನಿನೊಂದಿಗೆ ಬಾಳೆ ಹಣ್ಣಿನ ಸೇವನೆಯು ಈ ಅಡ್ಡ ಪರಿಣಾಮವನ್ನು ತಪ್ಪಿಸುತ್ತದೆ ಎಂದು ಪ್ರವಾದಿ ಮುಹಮ್ಮದ್(ಸ)ರವರು ತಮ್ಮ ಸಮುದಾಯಕ್ಕೆ ಮಾರ್ಗದರ್ಶನ ಮಾಡಿದ್ದಾರೆ.

Check Also

ಪಾರಿವಾಳದ ಮಾಂಸ- ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ನಿಮಗೆ ಪಾರಿವಾಳ ತಿಳಿದಿದೆಯೇ? ಯಾರಿಗೆ ತಾನೆ ತಿಳಿದಿಲ್ಲ ಅಲ್ಲವೇ! ಈ ಪಕ್ಷಿ ನೋಡಲು ತುಂಬಾ ಸುಂದರವಾಗಿರುತ್ತದೆ. ತನ್ನ …

Leave a Reply

Your email address will not be published. Required fields are marked *