Saturday , April 4 2020
Breaking News
Home / ಆರೋಗ್ಯ / ನಿಂತು ನೀರು ಕುಡಿಯುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು

ನಿಂತು ನೀರು ಕುಡಿಯುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು

Image result for hashim amla drinking water in sitting

ನೀರನ್ನು ಜೀವನ ಎನ್ನುತ್ತಾರೆ. ನೀರಿಲ್ಲದೆ ಬದುಕೇ ಇಲ್ಲ. ನೀರು ನಮ್ಮ ಜೀವನಕ್ಕೆ ಅಲ್ಲಾಹನ ಅತೀದೊಡ್ಡ ಅನುಗ್ರಹವಾಗಿದೆ. ದಿನಾಲೂ ಸಾಮಾನ್ಯವಾಗಿ ಒಂದರಿಂದ ಎರಡು ಅಥವಾ ಮೂರು ಗ್ಲಾಸ್ ನೀರನ್ನು ಕುಡಿದರೆ ಆರೋಗ್ಯ ಕಾಪಾಡಿಕೊಂಡು ಬರಬಹುದೆಂದು ವೈದ್ಯರೂ ಸಲಹೆ ನೀಡುತ್ತಾರೆ. ಆದರೆ ಇದೇ ಜೀವಜಲವನ್ನು ನಾವು ಕುಡಿಯುವ ರೀತಿಯ ಕಾರಣದಿಂದಾಗಿ ನಮ್ಮ ಅನಾರೋಗ್ಯಕ್ಕೆ ಕಾರಣ ವಾಗುತ್ತದೆ ಅಂದ್ರೆ ನಿಮಗೆ ಆಶ್ಚರ್ಯ ಅನಿಸದಿರದು. ಹೌದು, ಸಾಮಾನ್ಯವಾಗಿ ಹೆಚ್ಚಿನವರು ನಿಂತೇ ನೀರು ಕುಡಿಯುತ್ತಾರೆ. ಆದರೆ ಈ ವಿಷಯದಲ್ಲಿ ನಡೆದ ಹಲವಾರು ಸಂಶೋಧನೆಗಳಿಂದ ತಿಳಿದು ಬರುವುದೇನೆಂದರೆ, ಈ ನಿಂತು ನೀರು ಕುಡಿಯುವ ಅಭ್ಯಾಸವು ನಮ್ಮ ದೇಹದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ವೈದ್ಯಕೀಯ ವಿಜ್ಞಾನವು ಪಟ್ಟಿಮಾಡಿರುವ ಕಾರಣಗಳು ಈ ಕೆಳಗೆ ಕೊಡಲಾಗಿದೆ,

1. ಸಂಧಿವಾತಕ್ಕೆ ಕಾರಣವಾಗಬಹುದು: ನಿಂತು ಕುಡಿಯುವ ನೀರು ಕುಡಿಯುವ ಅಭ್ಯಾಸವು ನಿಮಗೆ ಸಂಧಿವಾತವನ್ನು ಉಂಟುಮಾಡಬಹುದು. ಹೌದು ನಿಂತು ನೀರು ಕುಡಿಯುವ ಅಭ್ಯಾಸದವರಾಗಿದ್ದರೆ ನೀವು ಮುಂದೆ ಜೀವನದಲ್ಲಿ ಸಂಧಿವಾತದಿಂದ ಪ್ರಭಾವಿತರಾಗಬಹುದು. ನೀರನ್ನು ನಿಂತು ಕುಡಿಯುವ ಮೂಲಕ ನಿಮ್ಮ ದೇಹದಲ್ಲಿ ದ್ರವಗಳ ಸಮತೋಲನವನ್ನು ನೀವು ಅಡ್ಡಿಪಡಿಸುತ್ತೀರಿ, ಮತ್ತು ಇದು ಕೀಲುಗಳಲ್ಲಿ ದ್ರವಗಳ ಹೆಚ್ಚಿನ ಶೇಖರಣೆಗೆ ಕಾರಣವಾಗುತ್ತದೆ ಇದರಿಂದ ಸಂಧಿವಾತವನ್ನು ಪ್ರಚೋದಿಸುತ್ತದೆ.

Image result for Arthritis

2. ಹೊಟ್ಟೆ ಗೋಡೆಯ ಮೇಲೆ ನೀರಿನ ಒತ್ತಡದಿಂದ ಕೂಡಿದ ಹೊಡೆತ: ನಿಂತಿರುವ ಸ್ಥಿತಿಯಲ್ಲಿ ನೀರು ಕುಡಿಯುವಾಗ ಹೊಟ್ಟೆ ಗೋಡೆಯ ಮೇಲೆ ನೀರು ರಭಸದಿಂದ ಒತ್ತಡದಲ್ಲಿ ಹೊಡೆಯುತ್ತದೆ. ಈ ನೀರಿನ ಒತ್ತಡದಿಂದ ಕೂಡಿದ ಹೊಡೆತವು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ದೀರ್ಘಾವಧಿಯ ಹಾನಿಯನ್ನು ಉಂಟುಮಾಡಬಹುದೆಂದು ಆರೋಗ್ಯ ತಜ್ಞರು ಹೇಳುತ್ತಾರೆ.

Image result for drinking water in standing effect on stomach wall

3. ನೀರು ಕುಡಿದ ನಂತರವೂ ಬಾಯಾರಿಕೆ ಶಮನವಾಗಲಾರದು: ನೀವು ಬಾಯಾರಿಕೆಯಾದಾಗ ನಿಂತ ಸ್ಥಿತಿಯಲ್ಲಿ ನೀರು ಕುಡಿದರೆ ನಿಮ್ಮ ದಾಹವು ಸಂಪೂರ್ಣವಾಗಿ ನೆನೆಸುವುದಿಲ್ಲ. ನಿಮಗೆ ಆಗಾಗ್ಗೆ ಹೆಚ್ಚು ನೀರು ಕುಡಿಯುವಂತೆ ಅನಿಸುತ್ತದೆ. ಆದ್ದರಿಂದ ಒಂದು ಸ್ಥಳದಲ್ಲಿ ಕುಳಿತುಕೊಂಡು ನೀರನ್ನು ಸಣ್ಣ ಸಣ್ಣ ಗುಟುಕುಗಳಾಗಿ ಕುಡಿಯುವುದು ಉತ್ತಮ.

Image result for Thirst

4. ಅಜೀರ್ಣ ಸಮಸ್ಯೆ: ನೀವು ಕುಳಿತ ಸ್ಥಿತಿಯಲ್ಲಿ ನೀರು ಕುಡಿಯುವಾಗ ನಿಮ್ಮ ಸ್ನಾಯುಗಳು ಮತ್ತು ನರಮಂಡಲಗಳು ಹೆಚ್ಚು ಸಡಿಲಗೊಂಡಿರುತ್ತದೆ ಮತ್ತು ದ್ರವವನ್ನು ಇತರ ಆಹಾರ ಪದಾರ್ಥಗಳೊಂದಿಗೆ ತ್ವರಿತವಾಗಿ ಜೀರ್ಣಿಸಿಕೊಳ್ಳಲು ಇದು ಸಹಾಯಕವಾಗುತ್ತದೆ.

Image result for Indigestion

5. ನಿಮ್ಮ ಮೂತ್ರಪಿಂಡಕ್ಕೆ ಹಾನಿಯಾಗುತ್ತದೆ: ನಿಂತ ಸ್ಥಿತಿಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ಮೂತ್ರ ಪಿಂಡಗಳಿಗೆ(ಕಿಡ್ನಿ) ನೀರನ್ನು ಸರಿಯಾಗಿ ಶೋಧಿಸುವ ಪ್ರಕ್ರಿಯೆಗೆ ಸಹಾಯ ಮಾಡುವುದಿಲ್ಲ. ಇದು ಮೂತ್ರಪಿಂಡಗಳ ಮತ್ತು ಮೂತ್ರಕೋಶಗಳ ಅಸ್ವಸ್ಥತೆಗೆ ಕಾರಣವಾಗಬಹುದು ಮತ್ತು ಈ ಅಸ್ವಸ್ಥತೆಯು ಮೂತ್ರಪಿಂಡಗಳಿಗೆ ಶಾಶ್ವತ ಹಾನಿಯುಂಟು ಮಾಡುವ ಸಾಧ್ಯತೆ ಇದೆ.

Image result for kidney

6. ನಿಂತ ಸ್ಥಿತಿಯಲ್ಲಿ ಕುಡಿಯುವ ನೀರು ದೇಹದಲ್ಲಿ ಆಮ್ಲ ಮಟ್ಟವನ್ನು ದುರ್ಬಲಗೊಳಿಸುವುದಿಲ್ಲ: ಆಯುರ್ವೇದವು ಕೂಡ ನಿಧಾನವಾಗಿ ಸಣ್ಣ ಸಣ್ಣ ಗುಟುಕಾಗಿ(ಸಿಪ್) ನೀರು ಸೇವಿಸಬೇಕೆಂದು ತಿಳಿಸುತ್ತದೆ. ಕುಳಿತು ನೀರು ಕುಡಿಯುವುದರಿಂದ ನೀರು ನಿಧಾನವಾಗಿ ದೇಹವನ್ನು ಸೇರುತ್ತದೆ ಆ ಮೂಲಕ ದೇಹದಲ್ಲಿನ ಆಮ್ಲ ಮಟ್ಟವನ್ನು ಸರಿಯಾಗಿ ದುರ್ಬಲಗೊಳಿಸಲು ಇದು ಸಹಾಯ ಮಾಡುತ್ತದೆ.

7. ನಿಂತು ನೀರು ಕುಡಿಯುವ ಅಭ್ಯಾಸವು ಹೊಟ್ಟೆಯಲ್ಲಿ ಅಲ್ಸರ್( ಹೊಟ್ಟೆ ಹುಣ್ಣು) ಮತ್ತು ಎದೆ ಉರಿತಕ್ಕೆ ಕಾರಣವಾಗಬಹುದು: ನಿಂತ ಸ್ಥಿತಿಯಲ್ಲಿ ನೀರನ್ನು ಕುಡಿಯುವಾಗ ಅದು ಅನ್ನನಾಳದ ಕೆಳಭಾಗವನ್ನು ತುಂಬಾ ಕಠಿಣವಾಗಿಸುತ್ತದೆ. ಇದು sphincter (ಹೊಟ್ಟೆ ಮತ್ತು ಅನ್ನನಾಳವನ್ನು ಜೋಡಿಸುವಂತಹ ಸ್ಥಳ) ಅನ್ನು ಹಾನಿಗೊಳಿಸುತ್ತದೆ. ಇದರ ಪರಿಣಾಮವಾಗಿ ಎದೆ ಉರಿತ, ಹೊಟ್ಟೆ ಹುಣ್ಣು ಮುಂತಾದ ಸಮಸ್ಯೆಗಳು ತಲೆದೂರುವ ಸಾಧ್ಯತೆಗಳಿವೆ.

Related image

8. ನಿಂತು ನೀರು ಕುಡಿಯುವಾಗ ನಿಮ್ಮ ನರಗಳು ಉದ್ವಿಗ್ನಗೊಳ್ಳುತ್ತದೆ: ನೀವು ನಿಂತು ನೀರು ಕುಡಿಯುವಾಗ ದೇಹದಲ್ಲಿ ನರಗಳಿಗೆ ಒತ್ತಡವನ್ನು ಉಂಟುಮಾಡುತ್ತದೆ. ಆದರೆ ನೀವು ಕುಳಿತು ನೀರು ಕುಡಿಯುವಾಗ ನಿಮ್ಮ ಎಲ್ಲಾ ಇಂದ್ರಿಯಗಳು ಶಾಂತವಾಗಿರುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವಂತೆ ಮಾಡುತ್ತದೆ.

Related image

ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ ಪ್ರವಾದಿ ಮಹಮ್ಮದ್(ಸ) ರವರು 1400 ವರ್ಷಗಳ ಮುಂಚೆಯೇ ಕುಳಿತು ನೀರು ಕುಡಿಯುವುದನ್ನು ಅನುಯಾಯಿಗಳಿಗೆ ತಮ್ಮ ಚರ್ಯೆಯಾಗಿ ಕಲಿಸಿಕೊಟ್ಟಿದ್ದಾರೆ. ಈಗ ವೈದ್ಯಕೀಯ ಸಂಶೋಧನೆಗಳೂ ಕೂಡ ಅದನ್ನು ಬೆಂಬಲಿಸುತ್ತಿದೆ. ಆದುದರಿಂದ ಸಮಸ್ಯೆಗಳು ಪ್ರಾರಂಭವಾಗುವ ಮುಂಚೆ ನಮ್ಮ ನಿಂತು ನೀರು ಕುಡಿಯುವ ಅಭ್ಯಾಸವನ್ನು ನಿಲ್ಲಿಸುವುದು ಜಾಣತನವಲ್ಲವೇ. ದಯವಿಟ್ಟು ಈ ಸಂದೇಶವನ್ನು ಅರಿಯದವರಿಗೆ ತಲುಪಿಸಿ.

Check Also

ಜೇನು ಶುದ್ಧವೋ ಅಶುದ್ಧವೋ ಅಂತ ಈ 4 ವಿಧಾನಗಳಿಂದ ಪರೀಕ್ಷೆ ಮಾಡಿ ನೋಡಿ

ಸಂದೇಶ ಇ-ಮ್ಯಾಗಝಿನ್: ಜೇನು ಎಂಬುದು ಪ್ರಾಕೃತಿಕವಾಗಿ ದೊರೆಯುವಂತಹ ಒಂದು ಶುದ್ಧ ಆಹಾರ ಪದಾರ್ಥವಾಗಿದೆ. ಇದು ಸ್ವಾದದಲ್ಲಿ ಎಷ್ಟು ಸಿಹಿಯೋ ಅಷ್ಟೇ …

Leave a Reply

Your email address will not be published. Required fields are marked *