Friday , November 15 2019
Breaking News
Home / ರಾಷ್ಟ್ರೀಯ / ಭಾರತದ ಅತಿ ದೊಡ್ಡ ದಾನಿ ಪ್ರೇಮ್ ಜಿ ಜುಲಾಯಿಯಲ್ಲಿ ನಿವೃತ್ತರಾಗಲಿದ್ದಾರೆ

ಭಾರತದ ಅತಿ ದೊಡ್ಡ ದಾನಿ ಪ್ರೇಮ್ ಜಿ ಜುಲಾಯಿಯಲ್ಲಿ ನಿವೃತ್ತರಾಗಲಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಐಟಿ ದಿಗ್ಗಜ ವಿಪ್ರೋ ಮಾಲಕ ಅಜೀಂ ಪ್ರೇಮ್ ಜಿ ಯವರು ಇದೇ ಬರುವ ಜುಲಾಯಿ 30 ರಂದು ತಮ್ಮ ಕಾರ್ಯಾಲಯವನ್ನು ಕೊನೆಗೊಳಿಸಲಿದ್ದಾರೆ. ಭಾರತದ ಅತೀ ದೊಡ್ಡ ದಾನಿ ಎಂದು ಗುರುತಿಸಿಕೊಂಡಿರುವ ಪ್ರೇಮ್ ಜಿ ಜುಲಾಯಿಯಲ್ಲಿ ನಿವೃತ್ತಿಯಾಗುತ್ತಿರುವ ವಿಷಯ ಅವರ ಕಾರ್ಯಾಲಯ ಸ್ಪಷ್ಟಪಡಿಸಿದೆ. ಅಜೀಂ ಪ್ರೇಮ್ ಜಿ ಯವರ ಉತ್ತರಾಧಿಕಾರಿಯಾಗಿ ಅವರ ಮಗ ರಿಶಾದ್ ಪ್ರೇಮ್ ಜಿ ವಿಪ್ರೋ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇತ್ತೀಚೆಗಷ್ಟೆ ಪ್ರೇಮ್ ಜಿಯವರು ಕಂಪೆನಿಯಲ್ಲಿರುವ ತನ್ನ ಶೇರಿನ 34% ಅನ್ನು ದತ್ತಿ ಕಾರ್ಯಕ್ಕೆ ಬಳಸುವುದಾಗಿ ಘೋಷಿಸಿದ್ದರು. ಈ 34 % ಶೇರಿನ ಮೊತ್ತವು ಸುಮಾರು 7.5 ಬಿಲಿಯನ್ ಡಾಲರ್ ಅಂದರೆ 52,750 ಕೋಟಿ ರೂಪಾಯಿ ಎನ್ನಲಾಗಿದೆ. 18.6 ಬಿಲಿಯನ್ ಡಾಲರ್ ಒಟ್ಟು ಸಂಪತ್ತಿನ ಒಡೆಯರಾಗಿರುವ ಪ್ರೇಮ್ ಜಿ ಭಾರತದ ಎರಡನೇ ಅತಿದೊಡ್ಡ ಶ್ರೀಮಂತರಾಗಿದ್ದು, ದತ್ತಿ ಕಾರ್ಯದಲ್ಲಿ ಭಾರತದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

‘ಇದು ನನ್ನ ಪಾಲಿಗೆ ಅತೀ ಮಹತ್ವದ ಸಂತೋಷದಾಯಕ ಪಯಣವಾಗಿತ್ತು. ಭವಿಷ್ಯದ ಬಗ್ಗೆ ಹೇಳುವುದಾದರೆ ನನ್ನ ಬದುಕಿನ ಉಳಿದ ಸಮಯವನ್ನು ಸಮಾಜಸೇವೆ , ದತ್ತಿ ಕಾರ್ಯ ಮುಂತಾದ ಜನೋಪಯೋಗಿ ಸೇವಾಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂಬ ಯೋಜನೆ ರೂಪಿಸಿಕೊಂಡಿದ್ದೇನೆ. ರಿಶಾದ್ ನಾಯಕತ್ವದಲ್ಲಿ ನನಗೆ ಸಂಪೂರ್ಣ ಭರವಸೆ ಇದೆ. ಆತ ಕಂಪೆನಿಯನ್ನು ಇನ್ನೊಂದು ಮಹತ್ವದ ಸ್ಥಾನಕ್ಕೆ ಕೊಂಡೊಯ್ಯಲಿದ್ದಾನೆ’ ಎಂದು ಪ್ರೇಮ್ ಜಿ ಹೇಳಿದ್ದಾರೆ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *