Sunday , September 22 2019
Breaking News
Home / ರಾಷ್ಟ್ರೀಯ / ಎಕ್ಸಿಟ್ ಪೋಲ್‌ಗಳ ಬಗ್ಗೆ ಪ್ರಕಾಶ್ ತಮ್ಮ ಅಭಿಪ್ರಾಯ ಹೇಳಿದ್ದು ಹೀಗೆ

ಎಕ್ಸಿಟ್ ಪೋಲ್‌ಗಳ ಬಗ್ಗೆ ಪ್ರಕಾಶ್ ತಮ್ಮ ಅಭಿಪ್ರಾಯ ಹೇಳಿದ್ದು ಹೀಗೆ

ಸಂದೇಶ ಇ-ಮ್ಯಾಗಝಿನ್: 2019 ರ ಲೋಕಸಭಾ ಚುನಾವಣೆಯ ಕೊನೆಯ ಹಾಗೂ ಏಳನೇ ಹಂತ ನಿನ್ನೆ ಮುಕ್ತಾಯವಾಗಿದ್ದು, ನಿನ್ನೆ ಸಂಜೆಯೇ ವಿವಿಧ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಹೊರಬಿದ್ದಿದ್ದು, ಎಲ್ಲಾ ಸಮೀಕ್ಷೆಗಳೂ ಕೂಡ ಆಡಳಿತಾರೂಢ ಎನ್‌‍ಡಿಎ ಮೈತ್ರಿಕೂಟಕ್ಕೆ ಸ್ಪಷ್ಟವಾದ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದೆ. ಸಮೀಕ್ಷೆಯ ಬಂದ ಬಳಿಕ ಬಿಜೆಪಿ ಕಾರ್ಯಕರ್ತರು ಬಹಳ ಹುಮ್ಮಸ್ಸಿನಲ್ಲಿದ್ದಂತೆ ಕಂಡು ಬಂದರೆ, ವಿರೋಧ ಪಕ್ಷಗಳ ಕಾರ್ಯಕರ್ತರಲ್ಲಿ ವಿಷಾದದ ಛಾಯೆ ಮೂಡಿದೆ. ಇವೆಲ್ಲದರ ಮಧ್ಯೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಟ ಪ್ರಕಾಶ್ ರೈ ಟ್ವೀಟ್ ಮಾಡಿ “ಕೆಲವರು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳ ಹೆಸರಿನಲ್ಲಿ ಕೆಲವು ದಿನ ಸಂಭ್ರಮಿಸಿ ಹಗಲುಗನಸು ಕಾಣಲಿ ಬಿಡಿ. ಮೇ 23 ರಂದು ಈ ಎಲ್ಲಾ ಹಗಲುಗನಸುಗಳು ಸುಳ್ಳಾಗಿತ್ತು ಎಂದು ಜನತೆ ಸಾಬೀತು ಪಡಿಸುತ್ತಾರೆ. ಅಲ್ಲಿಯವರೆಗೆ ಗಾಂಧೀಜಿಯವರ ‘ರಘುಪತಿ ರಾಘವ್ ರಾಜಾರಾಮಾ’ ಹಾಡನ್ನು ಹಾಡಿ ಸಂಭ್ರಮಿಸೋಣ ಎಂದು ವೀಡಿಯೋ ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರೈಯವರ ಈ ಟ್ವೀಟ್‌ಗೆ ಬಿಜೆಪಿ ಕಾರ್ಯಕರತರು ಬಹಿರಂಗ ಸವಾಲು ಹಾಕಿದ್ದು, ನಿಮ್ಮ ಎಲ್ಲಾ ವಿಫಲವಾದ ಬಳಿಕ ಇದೀಗ ವಿರೋಧ ಪಕ್ಷಗಳ ಮೊರೆ ಹೋಗಿದ್ದೀರಿ. ಈ ಟ್ವೀಟನ್ನು ಸೇವ್ ಮಾಡಿ ಇಟ್ಟು 23 ಕ್ಕೆ ಸಂಭ್ರಮಿಸುತ್ತೇವೆ. ಆಗ ನೀವು ಇವಿಎಂ ಹ್ಯಾಕ್ ಅಂತ ಹೇಳ್ಕೊಂಡು ಜಸ್ಟ್ ಆಸ್ಕಿಂಗ್ ಅಂತ ಬರಬೇಡಿ ಎಂದು ಟಾಂಗ್ ನೀಡಿದ್ದಾರೆ.

Check Also

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

001ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರದ ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. …

Leave a Reply

Your email address will not be published. Required fields are marked *