Friday , May 24 2019
Breaking News
Home / ಗಲ್ಫ್ ವಿಶೇಷ / ದುಬೈಯಲ್ಲಿ ನಿಧನರಾದ ಕೇರಳದ ಪ್ಲಂಬರ್: ಮನೆಗೆ ಬಂದು ನೆರವು ನೀಡಿದ ಕಂಪೆನಿ ಮಾಲಿಕ

ದುಬೈಯಲ್ಲಿ ನಿಧನರಾದ ಕೇರಳದ ಪ್ಲಂಬರ್: ಮನೆಗೆ ಬಂದು ನೆರವು ನೀಡಿದ ಕಂಪೆನಿ ಮಾಲಿಕ

ಸಂದೇಶ ಇ-ಮ್ಯಾಗಝಿನ್: ಗಲ್ಫ್ ನಾಡಿನಲ್ಲಿ ತಮ್ಮ ಕುಟುಂಬಸ್ಥರ ಸ್ವಸ್ಥ ಜೀವನಕ್ಕಾಗಿ ಪ್ರವಾಸಿ ಜೀವನದಲ್ಲಿ ತಮ್ಮ ಆಯುಷ್ಯವನ್ನು ವ್ಯಯಿಸುತ್ತಿರುವ ಪ್ರವಾಸಿಗಳ ಬಗ್ಗೆ ನಿಮಗೆ ಗೊತ್ತಿದೆ. ಅವರ ಕಷ್ಟ ಕಾರ್ಪಣ್ಯಗಳು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಹದ್ದೇ ಆಗಿರುತ್ತದೆ. ಇದೇ ರೀತಿ ಗಲ್ಫ್ ನಾಡು ದುಬಾಯಲ್ಲಿ ಪ್ರವಾಸಿಯಾಗಿ ದುಡಿಯುತ್ತಿದ್ದ ಕೇರಳದ ಚೇಗನ್ನೂರ್‌ನ ಬಿಜು ಎಂಬವರು ಇತ್ತೀಚೆಗೆ ಹೃದಯಾಘಾತದಿಂದ ನಿಧರಾಗಿದ್ದರು. ಬಿಜು ಕುಟುಂಬ ತೀರ ಬಡವರಾಗಿದ್ದು ಮನೆಯಲ್ಲಿರುವ ಗಂಡು ಮಕ್ಕಳಿಗೆ ಅಂತಹ ಹೇಳಿಕೊಳ್ಳುವಂತಹ ಉದ್ಯೋಗವೇನೂ ಇರಲಿಲ್ಲ. ಆದರೆ ಬಿಜು ಕೆಲಸ ಮಾಡುತ್ತಿದ್ದ ಕಂಪೆನಿಯ ಮಾಲಿಕನ ಹೃದಯ ವೈಶಾಲ್ಯದಿಂದಾಗಿ ಇದೀಗ ಬಿಜು ಕುಟುಂಬಕ್ಕೆ ಒಂದು ನೆಲೆಯಾಗಿದೆ.

ಕೇರಳದ ಸೋಶಿಯಲ್ ಮೀಡಿಯಾದಲ್ಲಿ ಕಂಪೆನಿ ಮಾಲಿಕ ಹಂಬರ್ಟ್ ಲೀಯವರು ಕೇರಳದ ಚೇಗನ್ನೂರ್‌ನ ಚೆರಿಯನಾಡ್‌ನಲ್ಲಿರುವ ಬಿಜು ಮನೆಗೆ ಬಂದು 33.5ಲಕ್ಷದ ಚೆಕ್ ನೀಡಿದ್ದಾರೆ. ಇವರ ಮಾನವೀಯತೆಯ ಬಗ್ಗೆ ಮಲಯಾಳಿಗಳು ಸಕ್ಕತ್ ಕೊಂಡಾಡಿದ್ದಾರೆ.

ಕಂಪೆನಿ ಮಾಲಿಕ ಹಂಬರ್ಟ್ ಲೀಯವರು ಬಿಜು ಮನೆಗೆ ಭೇಟಿ ನೀಡಿ ಬಿಜು ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿ ಪರಿಹಾರ ಧನವನ್ನು ವಿತರಿಸಿದ್ದಾರೆ. ಈ ಪರಿಹಾರದ ಮೊತ್ತದಲ್ಲಿ ಸ್ವಲ್ಪ ಹಣ ಬಿಜು ಅವರ ಪ್ರಾವಿಡೆಂಟ ಫಂಡ್‍‌ಗೆ ಸೇರಿದ್ದಾಗಿದ್ದು, ಇನ್ನು ಸ್ವಲ್ಪ ಹಣವನ್ನು ಕಂಪೆನಿಯ ಸಿಬ್ಬಂದಿ ಹಾಗೂ ಕಾರ್ಮಿಕರಿಂದ ಸಂಗ್ರಹಿಸಿದ ಹಣವಾಗಿದೆ.

ತಮ್ಮ ಕಂಪೆನಿಯಲ್ಲಿ ಬಿಜು ಅವರು ಹಲವಾರು ವರ್ಷಗಳಿಂದ ಪ್ಲಂಬರ್ ಕೆಲಸ ಮಾಡುತ್ತಿದ್ದರು ಮತ್ತು ಕಂಪೆನಿಯಲ್ಲಿ ಬಹಳ ಉತ್ತಮ ಹೆಸರನ್ನು ಗಳಿಸಿದ್ದರು ಎಂದು ಕಂಪೆನಿ ಮಾಲಿಕ ಹಂಬರ್ಟ್ ಲೀಯವರು ಹೇಳಿದ್ದಾರೆ.

ಜೀವಂತ ಇರುವವರಿಗೇ ಸಂಬಳ ಕೊಡಲು ಪೀಡಿಸುವ ಕಂಪೆನಿ ಮಾಲೀಕರುಗಳಿರುವ ಈ ಕಾಲದಲ್ಲಿ ಈ ಕಂಪೆನಿ ಮಾಲೀಕನ ಈ ಮಾನವೀಯತೆಯನ್ನು ಹೊಗಳಿ ಸಾಜನ್ ಚಾಕೋ ಎಂಬವರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ ಮಾಡಿದ್ದು ವೈರಲ್ ಆಗಿದೆ.

Check Also

ಮದೀನಾದ ಮಸೀದಿಯ 8 ಅಚ್ಚರಿದಾಯಕ ಅಪೂರ್ವ ಸಂಗತಿಗಳು

003ಸಂದೇಶ ಇ-ಮ್ಯಾಗಝಿನ್: ಇಸ್ಲಾಮಿನ ಪವಿತ್ರ ನಗರವಾದ ಮದೀನಾವೆಂದರೆ ಪ್ರತಿಯೊಬ್ಬ ಮುಸಲ್ಮಾನನಿಗೂ ಒಂದು ತೆರನಾದ ಉತ್ಸಾಹ ಗರಿಗೆದರುತ್ತದೆ. ಮರುಭೂಮಿಯಾದರೂ ಅಲ್ಲಿನ ಸುಂದರ …

Leave a Reply

Your email address will not be published. Required fields are marked *