Monday , August 26 2019
Breaking News
Home / ಅಂತಾರಾಷ್ಟ್ರೀಯ / ಈ ದೇಶದಲ್ಲಿ ಇನ್ನು ಮುಂದೆ 10 ಗಿಡ ನೆಟ್ಟರೆ ಮಾತ್ರ ವಿದ್ಯಾರ್ಥಿಗಳಿಗೆ ವಿವಿಗಳು ಪದವಿ ಪ್ರಧಾನ ಮಾಡುತ್ತದೆ

ಈ ದೇಶದಲ್ಲಿ ಇನ್ನು ಮುಂದೆ 10 ಗಿಡ ನೆಟ್ಟರೆ ಮಾತ್ರ ವಿದ್ಯಾರ್ಥಿಗಳಿಗೆ ವಿವಿಗಳು ಪದವಿ ಪ್ರಧಾನ ಮಾಡುತ್ತದೆ

ಸಂದೇಶ ಇ-ಮ್ಯಾಗಝಿನ್: ಜಗತ್ತಿನಲ್ಲಿ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಮರಗಳನ್ನು ರಕ್ಷಿಸಲು ವಿವಿಧ ರೀತಿ ಉಪಾಯಗಳನ್ನು ಮಾಡಲಾಗುತ್ತಿದೆ. ಆದರೆ ಯಾವುದು ಫಲಗೊಡುತ್ತಿಲ್ಲ. ಪ್ರಕೃತಿಯ ಮೇಲೆ ಮನುಷ್ಯನ ಅತ್ಯಾಚಾರ ದಿಂದ ದಿನಕ್ಕೆ ಏರುತ್ತಲೇ ಇದೆ. ಫಿಲಿಫೈನ್ ದೇಶವು ಇದಕ್ಕಾಗಿ ನೂತನವಾದ ಒಂದು ಯೋಜನೆಯನ್ನು ಪ್ರಾರಂಭಿಸಿದೆ. ಇಲ್ಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಬೇಕಾದರೆ ವಿದ್ಯಾರ್ಥಿಗಳು ಕಡಿಮೆ ಎಂದರೆ 10 ಗಿಡವನ್ನಾದರೂ ನೆಡಬೇಕು ಎಂದು ಸರಕಾರ ಕಾನೂನು ಮಾಡಿದೆ. ಫಿಲಿಫೆನ್ಸ್ ಒಂದು ಸುಂದರ ದೇಶವಾಗಿದ್ದು, ಪ್ರಕೃತಿಯ ರಮಣೀಯ ಈ ದ್ವೀಪ ರಾಷ್ಟ್ರದಲ್ಲಿ ಈ ಹಿಂದೆ ದೇಶದ 70 % ಭೂಭಾಗವು ಅರಣ್ಯವಾಗಿತ್ತು. ಆದರೆ ನಿರಂತರವಾಗಿ ಕಾಡು ನಾಶವಾದ ಕಾರಣ ಇಲ್ಲಿ ಇದೀಗ ಕೇವಲ 20% ಭೂಭಾಗದಲ್ಲಿ ಮಾತ್ರ ಕಾಡಿದೆ. ಈ ಅಸಮತೂಲನೆಯನ್ನು ಸರಿದೂಗಿಸಲು ಸರಕಾರ ಈ ಕ್ರ್ಮ ಕೈಗೊಂಡಿದೆ ಎನ್ನಲಾಗಿದೆ.

‘ಗ್ರೇಜುವೇಶನ್ ಲೀಗೇಸಿ ಫಾರ್ ದಿ ಎನ್ವಾಯರ್ಮೆಂಟ್ ಆಕ್ಟ್’ ಹೆಸರಿನ ಈ ಕಾನೂನಿನಲ್ಲಿ ಸರಕಾರವು 170 ಮಿಲಿಯನ್ ಗಿಡ ನೆಟ್ಟು ಮುಂದಿನ 10 ವರ್ಷದಲ್ಲಿ ದಟ್ಟ ಅರಣ್ಯಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಪದವಿ ಪಡೆಯಲು ಇಛ್ಛಿಸುವ ಯಾವುದೇ ವಿದ್ಯಾರ್ಥಿಯೂ ಈ ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಕಾರಣ ಯೋಜನೆ ಯಶಸ್ವಿಯಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *