Sunday , January 19 2020
Breaking News
Home / ಲೇಖನ / ಜಗತ್ತಿಗೆ ಅಧ್ಬುತ ದೃಷ್ಟಾಂತವಾಗುಳಿದ ಫರೋವನ ಮೃತ ಶರೀರದ ರಹಸ್ಯಗಳು

ಜಗತ್ತಿಗೆ ಅಧ್ಬುತ ದೃಷ್ಟಾಂತವಾಗುಳಿದ ಫರೋವನ ಮೃತ ಶರೀರದ ರಹಸ್ಯಗಳು

ಪ್ರಾಚೀನ ಈಜಿಪ್ಟನ್ನು ಹಲವಾರು ಫರೋವಾಗಳು ಆಳಿದ್ದರು. ಅವರಲ್ಲಿ ಪ್ರವಾದಿ ಮೂಸಾ ಅಥವಾ ಬೈಬಲ್, ತೋರಾ ಗಳಲ್ಲಿ ಹೇಳಲಾಗುವ ಮೋಸೆಸ್ ಕಾಲದಲ್ಲಿ ಈಜಿಪ್ಟನ್ನು ಆಳಿದ್ದ ನಿರಂಕುಶ, ಅತೀ ಕ್ರೂರಿ ಮತ್ತು ತನ್ನನ್ನು ತಾನೇ ದೇವನೆಂದು ಘೋಷಿಸಿಕೊಂಡು ಜನರಿಂದ ಬಲಾತ್ಕಾರವಾಗಿ ಆರಾಧಿಸಲ್ಪಡುತ್ತಿದ್ದ ಫರೋವ (Rasmsses 2) ನ ಕಥೆಯೇ ವಿಶಿಷ್ಟ.

ಆತನ ಜೀವನ ಅಂತ್ಯದ ಚಿತ್ರಣದ ಹಾಗೂ ಆತನ ಮೃತದೇಹದ ವೈಶಿಷ್ಟ್ಯತೆಯ ಬಗ್ಗೆ ಕೇವಲ 1600 ವರ್ಷಗಳ ಹಿಂದೆ ಅವತೀರ್ಣಗೊಂಡ ಖುರ್ಹಾನ್ ಸ್ಪಷ್ಟವಾಗಿ ವಿವರಿಸಿರುವುದು 200 ವರ್ಷಗಳ ಹಿಂದೆ ವಿಶ್ವದ ಹಲವು ವಿಜ್ಞಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿತ್ತು.

ಜಗತ್ತಿನ ಅನೇಕ ವಿಜ್ಞಾನಿಗಳಲ್ಲಿ ಆಶ್ಚರ್ಯ ಮತ್ತು ಕುತೂಹಲ ಹುಟ್ಟಲು ಕಾರಣ, 1898 ರಲ್ಲಿ ಕೆಂಪು ಸಮುದ್ರದ ದಂಡೆಯಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು. 3,000 ವರ್ಷಗಳ ಹಿಂದೆ ಮೃತಪಟ್ಟ ಫರೋವನ ಮೃತದೇಹ ಕೆಟ್ಟಿರಲಿಲ್ಲ, ನಾಶವಾಗಿರಲಿಲ್ಲ. ಈಜಿಪ್ಟಿನ ಇತರೆ ಫರೋವ ರಾಜರುಗಳ ಮೃತದೇಹದ ರೀತಿಯಲ್ಲಿ ಮಮ್ಮಿಫಿಕೇಷನ್ ಈ ಮೃತದೇಹದಲ್ಲಿ ಮಾಡಲಾಗಿರಲಿಲ್ಲ. ಮೆದುಳು, ಶ್ವಾಸಕೋಶ, ಕರುಳು, ಲಿವರ್, ಕಿಡ್ನಿ ಸೇರಿದಂತೆ ಯಾವುದೇ ಅಂಗಗಳನ್ನು ಕೀಳಲಾಗಿರಲಿಲ್ಲ. ತಲೆಕೂದಲುಗಳು ನಾಶವಾಗಿರಲಿಲ್ಲ.

ಯಾವುದೇ ಮಮ್ಮಿಫಿಕೇಷನ್ ಗೂ ಒಳಗಾಗದೆ ಒಂದು ಶವ 3,000 ವರ್ಷಗಳಿಂದ ಕೆಡದೆ, ನಾಶವಾಗದೆ ಇರಲು ಹೇಗೆ ಸಾಧ್ಯ ಎಂಬುವುದು ಜಗತ್ತಿಗೆ ಆಶ್ಚರ್ಯವಲ್ಲದೆ ಮತ್ತಿನ್ನೇನು?. ಅದಕ್ಕಿಂತಲೂ ದೊಡ್ಡ ಆಶ್ಚರ್ಯ ಇತ್ತೀಚಿಗೆ 200 ವರ್ಷಗಳ ಹಿಂದೆ ಲಭಿಸಿದ ಮೃತದೇಹವೊಂದರ ಬಗ್ಗೆ 1400 ವರ್ಷಗಳ ಹಿಂದೆ ಅವತೀರ್ಣಗೊಂಡ ಧರ್ಮ ಗ್ರಂಥವೊಂದು ವಿವರಿಸಿರುವುದು.

ಆ ಗ್ರಂಥದಲ್ಲಿ ಆತನ ಸಾವು ಮಾತ್ರವಲ್ಲದೆ ಮೃತದೇಹದ ಸ್ಥಿತಿಯ ಬಗ್ಗೆಯೂ, ಮೃತದೇಹವನ್ನು ಲೋಕ ಅವಸಾನದ ವರೆಗೆ ಸಂರಕ್ಷಿಸಿ ಇಡಲಾಗುವ ಬಗ್ಗೆಯೂ, ಯಾಕಾಗಿ ಸಂರಕ್ಷಿಸಿ ಇಡಲಾಗುತ್ತದೆ ಎಂದೂ, ತದನಂತರ ಪುನರುತ್ಥಾನ ದಿನದಲ್ಲಿ ಆತ ಏನಾಗುವನೆಂದೂ ವಿವರಿಸಲಾಗಿದೆ.

1898 ರಲ್ಲಿ ಸಿಗಲಾದ ಫರೋವನ ಮೃತದೇಹ ಮತ್ತು ಅದುವರೆಗೂ ಅಗೆದು ತೆಗೆಯಲಾದ ನೂರಾರು ಮಮ್ಮಿಗಳನ್ನು 1947 ರಲ್ಲಿ ಮೆಡಿಕಲ್ ಸ್ಕೂಲ್ ಓಫ್ ಕೈರೋ ಯುನಿವೆರ್ಸಿಟಿಯಲ್ಲಿ ಇಡಲಾಗಿತ್ತು. ಅದಾಗಲೇ ಜಗತ್ತಿನಾದ್ಯಂತ ಪ್ರಚಾರ ಪಡೆಯಿತು. ಜಗತ್ತಿನ ಅನೇಕ ವಿಜ್ಞಾನಿಗಳು 3000 ವರ್ಷ ಪ್ರಾಯದ ಮೃತದೇಹದ ಮೇಲೆ ಅಧ್ಯಯನ ನಡೆಸಲು ಉತ್ಸುಕರಾಗಿದ್ದರು.

1981 ರಲ್ಲಿ ಫ್ರಾನ್ಸಿನಲ್ಲಿ ಫ್ರಾನ್ಸಿಸ್ಕೋ ಮಿತ್ರಾ ಅಧ್ಯಕ್ಷರಾದಾಗ ಫ್ರಾನ್ಸ್ ಸರಕಾರ ಈಜಿಪ್ಟ್ ಸರಕಾರದೊಂದಿಗೆ ಲ್ಯಾಬೊರೇಟರಿ ಮತ್ತು ಜಿಯೋಲಾಜಿಕಲ್ ಪರೀಕ್ಷೆ ಮತ್ತು ಅಧ್ಯಯನ ನಡೆಸುವ ಸಲುವಾಗಿ ಫರೋವನ ಮೃತ ಶರೀರವನ್ನು ನೀಡುವಂತೆ ವಿನಂತಿಸಲಾಗಿ ಈಜಿಪ್ಟ್ ಸರಕಾರ ಒಪ್ಪಿತು.

ಅಂದಿನ ಫ್ರಾನ್ಸ್ ಕಾನೂನಿನಂತೆ ಮೃತ ಶರೀರಕ್ಕೆ ಪಾಸ್ಪೋರ್ಟ್ ಮಾಡಲಾಯಿತು. ವಿಶೇಷ ವಿಮಾನದ ಮೂಲಕ ಫರೋವನ ಮೃತದೇಹ ಮತ್ತು ಇತರ ಕೆಲ ಮಮ್ಮಿಗಳನ್ನು ರಾಜಕೀಯ ನಾಯಕರಿಗೆ ನೀಡಲಾಗುವ ಪ್ರೋಟೋಕಾಲ್ ಮೂಲಕ ವಿಶಿಷ್ಟವಾಗಿ ಸಾಗಿಸಲಾಯಿತು. ಫ್ರಾನ್ಸ್ ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ಮತ್ತು ಮಂತ್ರಿಗಳು ಮಮ್ಮಿಗಳಿಗೆ ಗೌರವದಿಂದ ತಲೆಬಾಗಿದ್ದರು ಎನ್ನಲಾಗಿದೆ.

ನಂತರ ಫರೋವನ ಶರೀರವನ್ನು ಆರ್ಕಿಯೊಲೊಜಿಕಲ್ ಸೆಂಟರ್ ಓಫ್ ಫ್ರಾನ್ಸ್ ನ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೋಣೆಯಲ್ಲಿಟ್ಟು ಆ ದೇಶದ ಖ್ಯಾತ ಆರ್ಕಿಯೊಲೊಜಿಕಲ್ ಮತ್ತು ಅನಾಟೊಮಿಕಲ್ ವಿಭಾಗದ ವಿಜ್ಞಾನಿಗಳಿಂದ ಪರೀಕ್ಷೆಗಳು, ಸಂಶೋಧನೆಗಳು ಮತ್ತು ಅಧ್ಯಯನಗಳು ನಡೆದವು.

ಡಾ. ಮೌರಿಸ್ ಬುಕಾಯಿಲ್ಲೆ ಅವರು ವಿಜ್ಞಾನಿಗಳ ತಂಡದ ನೇತೃತ್ತ್ವವನ್ನು ವಹಿಸಿದ್ದ ವಿಜ್ಞಾನಿ. ಕ್ಷಣ ಕ್ಷಣಕ್ಕೂ ಅದ್ಭುತಗಳ ಮೇಲೆ ಅದ್ಭುತಗಳು ಪರೀಕ್ಷೆ ಮತ್ತು ಅಧ್ಯಯನಗಳಲ್ಲಿ ಸಾಭೀತಾದವು. ಫರೋವನ ಮೃತ ಶರೀರ ಮಮ್ಮಿ ಅಲ್ಲವೆಂದು ದೃಢಪಟ್ಟಿತು. ಶರೀರ ಸಮುದ್ರದ ಉಪ್ಪು ನೀರಿನಲ್ಲಿತ್ತು ಎನ್ನುವುದು ನಿಶ್ಚಯವಾಯಿತು. ನಂತರ ಬುಕಾಯಿಲ್ಲೆ ಯವರ ಅಧ್ಯಯನ ಖುರ್ಹಾನ್ ಕಡೆ ತಿರುಗಿ ಕುತೂಹಲಕ್ಕೊಳಗಾದರು.

ಬುಕಾಯಿಲ್ಲೆ ಯವರ ಕನ್ಫ್ಯೂಶನ್ ಗಳನ್ನು ಖುರ್ಹಾನ್ ವೈಜ್ಞಾನಿಕವಾಗಿ ನಿವಾರಿಸಿತು. ಫರೋವ ಸಮುದ್ರದಲ್ಲಿ ಮುಳುಗಿ ಸತ್ತನೆಂದೂ, ಆತನ ಮೃತದೇಹವನ್ನುಆತನ ನಂತರದ ಜನರಿಗೆ ದ್ರಿಷ್ಟಾಂತವಾಗಿ ಲೋಕವಸಾನದ ವರೆಗೆ ಸಂರಕ್ಷಿಸಲಾಗುವುದೆಂದೂ ಸಾರಿರುವುದನ್ನು ನೋಡಿ ಆಶ್ಚರ್ಯಕ್ಕೊಳಗಾಗಿ ನಂತರ “ದಿ ಖುರ್ಹಾನ್, ಬೈಬಲ್ ಅಂಡ್ ಸಯನ್ಸ್” ಎಂಬ ಪುಸ್ತಕವನ್ನು ಬರೆದರು. ಜಗತ್ತಿನಾದ್ಯಂತ ಆ ಪುಸ್ತಕ ಒಂದು ಪ್ರತಿಯೂ ಬಾಕಿ ಇಲ್ಲದಂತೆ ಮಾರಾಟವಾಯಿತು.

ಸಮುದ್ರದಲ್ಲಿ ಮುಳುಗಿ ಸತ್ತ ಸರ್ವಾಧಿಕಾರಿ, 70,000 ಮಕ್ಕಳ ಮಾರಣಹೋಮ ನಡೆಸಿದ ಆಕ್ರಮಿ, ಅದೆಷ್ಟೋ ಹೆಣ್ಮಕ್ಕಳನ್ನು ತನ್ನನ್ನು ದೇವನೆಂದು ಒಪ್ಪದ ಕಾರಣಕ್ಕೆ ಕಾದ ಬಿಸಿ ಬಿಸಿ ಎಣ್ಣೆಗೆ ಎಸೆದ ಕ್ರೂರಿ ಗೆ ಸಾಯುವ ವೇಳೆ ಸೃಷ್ಟಿಕರ್ತ ಆತನಿಗೆ ಕೊನೇ ಬಾರಿ ಹೇಳಿದ ಮಾತುಗಳು ಮತ್ತು ಮುಂದಿನ ಜನರಿಗೆ ದೃಷ್ಟಾಂತವಾಗಿ ಮೃತ ಶರೀರವನ್ನು ಕಾಪಿಡುವ ಹೇಳಿಕೆ ಬರೇ ಗ್ರಂಥದ ಗೊಡ್ಡು ಹೇಳಿಕೆಯಾಗಿರದೆ ಈ 21 ನೇ ಶತಮಾನದಲ್ಲೂ ಅದು ನಗ್ನ ಸತ್ಯವಾಗುಳಿದಿದೆ. ಗ್ರಂಥದಲ್ಲಿ ಹೇಳಲಾದಂತೆ ಆತನ ಮೃತದೇಹ ವಿಶ್ವದ ಅತ್ಯದ್ಭುತವಾಗಿ ಕೈರೋ ದ ರಾಯಲ್ ಮಮ್ಮಿ ಮ್ಯೂಸಿಯಂ ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಮುದ್ರದಲ್ಲೇ ಸಾವಿರಾರು ವರ್ಷಗಳ ಕಾಲ ಬಿದ್ದಿದ್ದ ಮೃತ ಶರೀರವನ್ನು ಕೆಡಿಸದಂತೆ ನೀರಿಗೂ, ಗಾಳಿಗೂ, ಮೀನುಗಳಿಗೂ ಆದೇಶವನ್ನು ನೀಡಲಾಗಿದೆಯೆಂಬ ಸೃಷ್ಟಿಕರ್ತನ ಮಾತುಗಳು ಎಷ್ಟು ನಿಖರ ಅಲ್ವೇ?

-ಝಕ್ ಪುಣಚ

Check Also

ಪಕ್ಷ ಸಂಘಟನೆಗಳೇ ನಮ್ಮ ಜೀವನ ಆಗದಿರಲಿ, ಚುನಾವಣೆಯ ನಂತರವೂ ನಮಗೆ ಬದುಕಬೇಕು

ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಎಂಬುವುದೊಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಚುನಾವಣೆಗಳಲ್ಲಿ ಗೆದ್ದವರು …

Leave a Reply

Your email address will not be published. Required fields are marked *