Sunday , January 26 2020
Breaking News
Home / ರಾಷ್ಟ್ರೀಯ / ಮುಂದೆ ಬಹುಮತ ಬರುವುದು ಕಷ್ಟ ಈಗಲೇ ಮಂದಿರ ನಿರ್ಮಿಸಿ: ಪೇಜಾವರ ಶ್ರೀ

ಮುಂದೆ ಬಹುಮತ ಬರುವುದು ಕಷ್ಟ ಈಗಲೇ ಮಂದಿರ ನಿರ್ಮಿಸಿ: ಪೇಜಾವರ ಶ್ರೀ

ಸಂದೇಶ ಇ-ಮ್ಯಾಗಝಿನ್: ಪ್ರಧಾನಿ ಮೋದಿಯವರು ಕಳೆದ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ರಾಮಮಂದಿರ ಈಗಲೇ ನಿರ್ಮಿಸಲಿ, ಈಗ ಸರಕಾರಕ್ಕೆ ಬಹುಮತವಿದೆ. ಮುಂದೆ ಬಹುಮತ ಬರುವ ಸಾಧ್ಯತೆ ಕಡಿಮೆ, ಬಹುಮತ ಇಲ್ಲದೇ ಹೋದರೆ ರಾಮ ಮಂದಿರ ನಿರ್ಮಿಸಲು ಕಷ್ಟವಾಗಬಹುದು ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿ ಹೇಳಿದ್ದಾರೆ. ಬಾಗಲ ಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪೇಜಾವರ ಸ್ವಾಮಿ, ಮೋದಿಯವರಿಗೆ ಈಗ ಮೊದಲಿನಷ್ಟು ವರ್ಚಸ್ಸು ಇಲ್ಲ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಈಗ ಮೋದಿ ವಿರೋಧಿಗಳು ಹೆಚ್ಚುತ್ತಿದ್ದಾರೆ. ಬಿಜೆಪಿ ಈ ಸೋಲಿನಿಂದ ಪಾಠ ಕಲಿಯಬೇಕಿದೆ. ನೀವು ಮುಂದಿನ ಚುನಾವಣೆಗೆ ಹೋಗುವ ಮುನ್ನ ರಾಮಮಂದಿರ ನಿರ್ಮಿಸಿ, ಆ ಮೂಲಕ ಈ ಹಿಂದೆ ನೀಡಿದಂತಹ ಭರವಸೆಯನ್ನು ಈಡೇರಿಸಿ ಎಂದು ಸ್ವಾಮೀಜಿ ಒತ್ತಾಯಿಸಿದರು.

ಬಾಬ್ರಿ-ರಾಮಮಂದಿರ ವಿವಾದ ನ್ಯಾಯಾಲಯದಲ್ಲಿದೆಯಲ್ಲ ಎಂದು ಪತ್ರಕರ್ತರು ಕೇಳಿದಾಗ, ರಾಮಮಂದಿರಕ್ಕಾಗಿ ನಾವು ಕಳೆದ ಐದು ವರ್ಷಗಳಿಂದ ಕಾದಿದ್ದೇವೆ. ಇದೀಗ ನಿರ್ಮಿಸಿ ಅಂತ ಒತ್ತಾಯಿಸುತ್ತಿದ್ದೇವೆ. ವಿವಾದ ಸುಪ್ರಿಂ ಕೋರ್ಟಿನಲ್ಲಿರುವುದು ಪ್ರಶ್ನೆಯಲ್ಲ, ಸರಕಾರ ಸುಗ್ರಿವಾಜ್ಞೆ ಹೊರಡಿಸಿ ಮಂದಿರ ನಿರ್ಮಿಸಬಹುದು ಎಂದು ಕಾನೂನು ಪಂಡಿತರು ಹೇಳಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *