Monday , July 22 2019
Breaking News
Home / ವಿಶೇಷ / ಸಾಯುವ ಸಮಯದಲ್ಲಿ ತಂದೆ ತಾಯಿಯನ್ನು ನೋಡಲು ಅಳುತ್ತಿದ್ದಳು ಆಯೆಷಾ; ಆದರೂ ಇಸ್ರೇಲ್ ಅದಕ್ಕೆ ಅವಕಾಶ ನೀಡಲಿಲ್ಲ

ಸಾಯುವ ಸಮಯದಲ್ಲಿ ತಂದೆ ತಾಯಿಯನ್ನು ನೋಡಲು ಅಳುತ್ತಿದ್ದಳು ಆಯೆಷಾ; ಆದರೂ ಇಸ್ರೇಲ್ ಅದಕ್ಕೆ ಅವಕಾಶ ನೀಡಲಿಲ್ಲ

ಸಂದೇಶ ಇ-ಮ್ಯಾಗಝಿನ್: ಪ್ಯಾಲೆಸ್ತೀನಿಯನ್ ಪ್ರಿಸ್ಕೂಲ್ ವಿದ್ಯಾರ್ಥಿನಿ ಆಯೆಷಾ ಲುಲು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಜೆರುಸಲೇಮಿನ ಆಸ್ಪತ್ರೆಯ ಕೊಠಡಿಯಲ್ಲಿ ಮಲಗಿ ತನ್ನ ತಂದೆ-ತಾಯಿಯನ್ನು ನೋಡಲು ಅಳುತ್ತಿದ್ದಳು. ಆದರೆ ಕೊನೆಗೂ ಆಕೆಗೆ ತನ್ನ ತಂದೆ ತಾಯಿಯನ್ನು ನೋಡಲು ಸಾಧ್ಯವಾಗಲೇ ಇಲ್ಲ.

ಇಸ್ರೇಲಿ ಅಧಿಕಾರಿಗಳು ಆಯಿಷಾಳನ್ನು ಕುಟುಂಬದ ಸದಸ್ಯರ ಬದಲಿಗೆ ಅಪರಿಚಿತ ವ್ಯಕ್ತಿಯೊಬ್ಬರ ಜೊತೆ ಗಾಝಾಗೆ ತೆರಳಲು ಅನುಮತಿಸಿದ್ದರು. ಗಾಝಾದಿಂದ ಜೆರುಸಲೇಂಗೆ ಕೆಲವೇ ಗಂಟೆಗಳ ಹಾದಿಯಾದರೂ ಆಕೆಯ ತಂದೆ ತಾಯಿಗೆ ಜೆರುಸಲೇಂಗೆ ತೆರಳಲು ಇಸ್ರೇಲಿ ಅಧಿಕಾರಿಗಳು ಅನುಮತಿಸಿರಲಿಲ್ಲ. ಮಗು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದುದರಿಂದ ಆಕೆಗೆ ಹೋಗಲು ಅನುಮತಿಸಲಾಗಿತ್ತು. ಶಸ್ತ್ರಚಿಕಿತ್ಸೆ ಮುಗಿದ ಬಳಿಕ ಮಗು ಹೆತ್ತವರನ್ನು ನೋಡಲು ಹಂಬಲಿಸಿತ್ತಾದರೂ ಅದು ಸಾಧ್ಯವಾಗಲಿಲ್ಲ. ಇದೀಗ ಆಯೆಷಾ ಮೃತ ಪಟ್ಟಿದ್ದಾಳೆ.

ಆಯೆಷಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಮುಗ್ಥ ನಗೆ ಬೀರುತ್ತಿರುವ ಫೋಟೋ ವೈರಲ್ ಆಗಿದೆ. ಆಕೆಯ ತಲೆಯಲ್ಲಿ ಒಂದು ಬ್ಯಾಂಡೇಜ್ ಕಟ್ಟಿದ್ದು, ಶಸ್ತ್ರಚಿಕಿತ್ಸೆಯ ಗುರುತು ಕಾಣುತ್ತಿದೆ. ಈ ಸಮಯದಲ್ಲಿ ಆಕೆ ತನ್ನ ತಂದೆ ತಾಯಿಯನ್ನು ನೋಡಲು ಬಯಸಿದ್ದಳು. ಮತ್ತು ಆ ಕಾರಣಕ್ಕೆ ಅಳುತ್ತಿದ್ದಳು ಎಂದು ವರದಿಯಾಗಿದೆ.

“ನಿಮ್ಮ ಮಗುವನ್ನು ಅಜ್ಞಾತದಲ್ಲಿ ಬಿಡುವುದು ಅತ್ಯಂತ ಕಷ್ಟಕರ ಸಂಗತಿ ಜೆರುಸಲೆಮ್ ಕೇವಲ ಒಂದು ಗಂಟೆ ದೂರವಿದೆ, ಆದರೆ ಅದು ಇನ್ನೊಂದು ಗ್ರಹವಾಗಿದೆಯೋ ಎಂಬಂತೆ ಭಾಸವಾಗುತ್ತದೆ ಎಂದು ಆಯೆಶಾಳ ತಂದೆ ವಾಸೆಮ್ ಎ-ಲುಲು ಹೇಳಿದರು.

ಮಗುವು ಸಾಯುವ ಸಮಯದಲ್ಲೂ ಹೆತ್ತವರನ್ನು ನೋಡಲು ಬಿಡದೆ ಕ್ರೂರತೆ ಮೆರೆದ ಇಸ್ರೇಲ್ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಕೆಲವೊಂದು ಮಂದಿ ಇಸ್ರೇಲ್ ಕ್ರಮವನ್ನು ಸಮರ್ಥನೆಯೂ ಮಾಡಿದ್ದಾರೆ ಎನ್ನುವುದು ಗಮನಾರ್ಹ.

Check Also

ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

001ಸಂದೇಶ ಇ-ಮ್ಯಾಗಝಿನ್: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕನಿಗೆ ಸೇರಿದ ರೆಸ್ಲಿಂಗ್ ಬೆಲ್ಟನ್ನು ಕದ್ದ ಕಳ್ಳರು ನಂತರ …

Leave a Reply

Your email address will not be published. Required fields are marked *