Tuesday , April 7 2020
Breaking News
Home / ವೀಡಿಯೋ / ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಸಿಂಧ್‌ನಲ್ಲಿ ತಂದೆಯು ಹಣವನ್ನು ಪುತ್ರರಿಗೆ ಕೊಡುವ ಬದಲು ಹಜ್‌ಗಾಗಿ ಬಳಸಿದ್ದಕ್ಕಾಗಿ ವೃದ್ಧ ತಂದೆಯನ್ನು ಪುತ್ರರು ಥಳಿಸಿದ ವೀಡಿಯೋ ವೈರಲ್ ಆಗಿದೆ. ಅವರದೇ ಸ್ವಂತ ಮಕ್ಕಳು ಈ ವೃದ್ಧ ತಂದೆಯನ್ನು ರಕ್ತಸ್ರಾವವಾಗುವವರೆಗೂ ಕ್ರೂರವಾಗಿ ಥಳಿಸಿದ ವೀಡೀಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಸುದ್ದಿ ವಾಹಿನಿಗಳೂ ಕೂಡ ಈ ಸುದ್ದಿಯನ್ನು ಪ್ರಕಟಿಸಿದೆ. ತನ್ನ ಜೀವನದಲ್ಲಿ ಉಳಿತಾಯ ಮಾಡಿದ ಹಣವನ್ನು ಕೂಡಿಟ್ಟು ಜೀವನದ ಮುಸ್ಸಂಜೆಯಲ್ಲಿರುವ ತಂದೆಯು ಈ ಬಾರಿ ಪವಿತ್ರ ಹಜ್ ಕರ್ಮ ಪೂರೈಸಲು ಮಕ್ಕಾಗೆ ಪ್ರಯಾಣ ಬೆಳೆಸುವವರಿದ್ದರು ಎನ್ನಲಾಗಿದೆ. ಆದರೆ ಕ್ರೂರಿ ಮಕ್ಕಳು ಆ ಹಣವನ್ನು ನಮಗೆ ಕೊಡಬೇಕೆಂದು ಪೀಡಿಸಿ ತಮ್ಮ ವೃದ್ಧ ತಂದೆಯನ್ನು ಮಾರಣಾಂತಿಕವಾಗಿ ಥಳಿಸಿದ್ದಾರೆಂದು ವರದಿಯಾಗಿದೆ.

ಬೆಸರದ ಸಂಗತಿಯೇನೆಂದರೆ ತಂದೆಯು ತನ್ನ ಸ್ವಂತ ಹಣದಿಂದ ಹಜ್ ಗೆ ಹೋಗಲು ಹೊರಟಾಗ ಮಕ್ಕಳು ಅದಕ್ಕೆ ಅವಕಾಶ ಕೊಡದೆ ಥಳಿಸಿದ್ದರಿಂದ ತೀವ್ರವಾಗಿ ಗಾಯಗೊಂಡಿರುವ ವೃದ್ಧ ವ್ಯಕ್ತಿಯು ಆಸ್ಪತ್ರೆಗೆ ದಾಖಲಾಗಿದ್ದು, ಈ ಬಾರಿ ಹಜ್‌ಗೆ ತೆರಳಲು ಸಾಧ್ಯವಾಗುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *