Sunday , January 19 2020
Breaking News
Home / ರಾಷ್ಟ್ರೀಯ / ಕಾಶ್ಮೀರ ನಮ್ಮದು ನೀವು ಮೂಗು ತೂರಿಸುವ ಅಗತ್ಯವಿಲ್ಲ: ಪಾಕಿಸ್ತಾನಕ್ಕೆ ಓವೈಸಿ ಎಚ್ಚರಿಕೆ

ಕಾಶ್ಮೀರ ನಮ್ಮದು ನೀವು ಮೂಗು ತೂರಿಸುವ ಅಗತ್ಯವಿಲ್ಲ: ಪಾಕಿಸ್ತಾನಕ್ಕೆ ಓವೈಸಿ ಎಚ್ಚರಿಕೆ

ಸಂದೇಶ ಇ-ಮ್ಯಾಗಝಿನ್: ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಆದುದರಿಂದ ಕಾಶ್ಮೀರದ ವಿಷಯದಲ್ಲಿ ನೀವು ಮೂಗು ತೂರಿಸುವ ಅಗತ್ಯವಿಲ್ಲ ಎಂದುಾಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೇಸ್ ಅಥವಾ ಬಿಜೆಪಿ ಯಾವುದೇ ಪಕ್ಷದ ಸರಕಾರ ಅಧಿಕಾರಕ್ಕೆ ಬಂದರೂ ಕಾಶ್ಮೀರ ಕಣಿವೆಯ ಸಮಸ್ಯೆಯನ್ನು ಬಗೆಹರಿಸಲು ಇವರ ಬಳಿ ಯಾವುದೇ ರೀತಿಯ ದೂರದೃಷ್ಟಿ ಎಂಬುದು ಬಹಳ ಖೇದಕರ, ಕಾಶ್ಮೀರದ ಬಗ್ಗೆ ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿ ಅಲ್ಲಿನ ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಾರತ ಸರಕಾರ ಮುನ್ನಡೆಯಬೇಕಾಗಿತ್ತು. ಆದರೆ ಅಂತಹ ರಾಜಕೀಯ ನೀತಿಯ ಕೊರತೆ ಇದೆ. ಕಾಶ್ಮೀರ ಪಂಡಿತರ ಬಗ್ಗೆ ದೊಡ್ಡ ದೊಡ್ದ ಭಾಷಣ ಬಿಗಿಯುವ ಬಿಜೆಪಿ ಕಾಶ್ಮೀರ ಪಂಡಿತರಿಗಾಗಿ ಏನೂ ಮಾಡಿಲ್ಲ ಎಂದು ಓವೈಸಿ ಬಿಜೆಪಿಯ ವಿರುದ್ಧ ಹರಿ ಹಾಯ್ದಿದ್ದಾರೆ.

ಕಳೆದ ವಾರ ಕಾಶ್ಮೀರಿಗಳ ಹತ್ಯೆಯನ್ನು ವಿರೋಧಿಸಿ ಐಎ‌ಎಸ್ ಪದವಿಗೆ ರಾಜಿನಾಮೆ ನೀಡಿರುವ ಶಾ ಫೈಸಲ್ ಬಗ್ಗೆ ಪ್ರಸ್ತಾಪಿಸಿದ ಓವೈಸಿ, ಶಾ ಫೈಸಲ್ ಅವರು ರಾಜಕೀಯಕ್ಕೆ ಬರಬೇಕು. ಇಂತಹವರ ಅಗತ್ಯ ತಕ್ಷಣದ ರಾಜಕೀಯಕ್ಕೆ ತುಂಬಾ ಇದೆ ಎಂದರು. 2010 ರ ಸಾಲಿನ ದೇಶದ ಐಎ‍ಎಸ್ ಟಾಪರ್ ಆಗಿರುವ ಶಾ ಫೈಸಲ್ ಇದೇ ತಿಂಗಳ ಮೊದಲ ವಾರ ಕಾಶ್ಮೀರದಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆಯನ್ನು ವಿರೋಧಿಸಿ ತಮ್ಮ ಪದವಿಗೆ ರಾಜೀನಾಮೆ ನೀಡಿದ್ದರು.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *